ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ನ್ಯೂಜಿಲೆಂಡ್ ಆಲ್‌ರೌಂಡರ್ ಕಾಲಿನ್ ಡಿ ಗ್ರಾಂಡ್‌ಹೋಮ್

ನ್ಯೂಜಿಲೆಂಡ್‌ನ ಹಿರಿಯ ಆಲ್‌ರೌಂಡರ್ ಕಾಲಿನ್ ಡಿ ಗ್ರಾಂಡ್‌ಹೋಮ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. ಆಗಸ್ಟ್ 31ರಂದು ಕಿವಿಸ್ ಕ್ರಿಕೆಟಿಗ ತಮ್ಮ ಈ ನಿರ್ಧಾರವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಲು ಇದು ಅತ್ಯಂತ ಸೂಕ್ತ ಸಮಯ ಎಂದು ಹಿರಿಯ ಕ್ರಿಕೆಟಿಗ ಹೇಳಿಕೊಂಡಿದ್ದಾರೆ.
"ನಾನು ಇನ್ನು ಯುವಕನಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಿದ್ದೇನೆ. ತರಬೇತಿಗಳು ಕಠಿಣವಾಗುತ್ತಿದೆ. ಅದರಲ್ಲೂ ಗಾಯಗಳು ಜರ್ಝರಿತವನ್ನಾಗಿ ಮಾಡಿದೆ. ಇನ್ನು ನಾನು ಕೂಡ ಬೆಳೆಯುತ್ತಿರುವ ಕುಟುಂಬವನ್ನು ಹೊಂದಿದ್ದು ಭವಿಷ್ಯದ ಯೋಜನೆಗಳನ್ನು ಯಾವ ರೀತಿ ಹಾಕಿಕೊಳ್ಳಬೇಕೆಂದು ಮುಂದೆ ನಿರ್ಧರಿಸಲಿದ್ದೇನೆ. ಕಳೆದ ಕೆಲ ವಾರಗಳಿಂದ ಈ ಸಂಗತಿ ನನ್ನಲ್ಲಿ ಸುಳಿಯುತ್ತಿತ್ತು. ಈಗ ಇದನ್ನು ಅಧಿಕೃತವಾಗಿ ಘೋಷಿಸುತ್ತಿದ್ದೇನೆ" ಎಂದಿದ್ದಾರೆ ಗ್ರಾಂಡ್‌ಹೋಮ್.
ಇತ್ತೀಚಿನ ಐಸಿಸಿ ಟೂರ್ನಿಗಳಲ್ಲಿ ನ್ಯೂಜಿಲೆಂಡ್ ಅದ್ಭುತ ಪ್ರದರ್ಶನ ನೀಡಿರುವ ಸಂದರ್ಭದಲ್ಲಿ ಗ್ರಾಂಡ್‌ಹೋಮ್ ಕಿವೀಸ್ ಪಡೆಯ ಭಾಗವಾಗಿದ್ದರು. 2019ರ ಏಕದಿನ ವಿಶ್ವಕಪ್ ತಂಡದ ಭಾಗವಾಗಿದ್ದ ಅವರು ಫೈನಲ್ ಪಂದ್ಯದಲ್ಲಿ ಜೋ ರೂಟ್ ಅವರ ವಿಕೆಟ್ ಪಡೆದುಕೊಂಡಿದ್ದರು. ಇನ್ನು ನಂತರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿಯೂ ವಿವೀಸ್ ಪಡೆಯ ಭಾಗವಾಗಿದ್ದರು.
"2012ರಲ್ಲಿ ಪದಾರ್ಪಣೆ ಮಾಡಿದ ಬಳಿಕ ಕಿವೀಸ್ ತಂಡದಲ್ಲಿ ಅದ್ಭುತವಾದ ಅವಕಾಶ ಪಡೆಯಲು ಸಾಧ್ಯವಾಗಿರುವುದಕ್ಕೆ ನಾನು ಅದೃಷ್ಟಶಾಲಿಯಾಗಿದ್ದೇನೆ. ನನ್ನ ಅಂತಾರಾಷ್ಟ್ರೀಯ ವೃತ್ತಿ ಜೀವನದ ಬಗ್ಗೆ ನಾನು ಹೆಮ್ಮೆ ಪಟ್ಟುಕೊಳ್ಳುತ್ತಿದ್ದೇನೆ. ಆದರೆ ಇದು ನಿವೃತ್ತಿಗೆ ಸೂಕ್ತವಾದ ಸಮಯ ಎಂಬುದು ನನಗೆ ಅರ್ಥವಾಗಿದೆ" ಎಂದಿದ್ದಾರೆ ಕಾಲಿನ್ ಡಿ ಗ್ರಾಂಡ್‌ಹೋಮ್.
ಇನ್ನು ಕಿವೀಸ್ ತಂಡದ ಕೋಚ್ ಗಾರಿ ಸ್ಟೀಡ್ ಹಿರಿಯ ಆಟಗಾರನ ನಿವೃತ್ತಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಬ್ಲ್ಯಾಕ್‌ಕ್ಯಾಪ್ ತಂಡದಲ್ಲಿ ಕಾಲಿನ್ ಗ್ರಾಡ್‌ಹೋಮ್ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ತಂಡದ ಹಲವು ಮಹತ್ವದ ಸಾಧನೆಗಳಿಗೆ ಉತ್ತಮ ಕೊಡುಗೆ ನೀಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಅವರಲ್ಲಿದ್ದ ಬಲ ಹಾಗೂ ಬೌಲಿಂಗ್‌ನಲ್ಲಿ ಅವರ ಕೌಶಲ್ಯ ಅವರನ್ನು ನೈಜ ಮ್ಯಾಚ್ ವಿನ್ನರ್‌ನನ್ನಾಗಿ ಮಾಡಿತ್ತು. ಆತ ಯಾವುದೇ ತಂಡಕ್ಕಾದರೂ ದೊಡ್ಡ ಶಕ್ತಿ" ಎಂದಿದ್ದಾರೆ ನ್ಯೂಜಿಲೆಂಡ್ ತಂಡದ ಕೋಚ್ ಗ್ಯಾರಿ ಸ್ಟೀಡ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications