Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ ಫೈ.: ಸೂಪರ್‌ ಓವರ್‌ ವೇಳೆ ಕೊನೆಯುಸಿರೆಳೆದ ನೀಶಮ್ ಕೋಚ್!

ಫೈನಲ್ ನಲ್ಲಿ ನೀಶಮ್ ಸಿಕ್ಸ್ ನೋಡಿ ಕೊನೆಯುಸಿರೆಳೆದ ಕೋಚ್..? | Jimmy Neesham | Oneindia Kannada
New Zealand all-rounder Jimmy Neesham’s coach died during World Cup final

ಲಂಡನ್, ಜುಲೈ 18: ನ್ಯೂಜಿಲೆಂಡ್ ಆಲ್ ರೌಂಡರ್ ಜೇಮ್ಸ್ ನೀಶಮ್ ಅವರ ಬಾಲ್ಯದ ಕೋಚ್, ಆಕ್ಲೆಂಡ್ ಗ್ರಾಮರ್ ಸ್ಕೂಲ್ ಟೀಚರ್ ಡೇವಿಡ್ ಜೇಮ್ಸ್ ಗಾರ್ಡನ್ ಐಸಿಸಿ ವಿಶ್ವಕಪ್ ಫೈನಲ್‌ನ ಸೂಪರ್ ಓವರ್‌ ವೇಳೆ ಕೊನೆಯುಸಿರೆಳೆದ ಮನ ಕಲುಕುವ ಘಟನೆ ತಡವಾಗಿ ಬೆಳಕಿದೆ ಬಂದಿದೆ.

ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಜುಲೈ 14ರ ಭಾನುವಾರ ನಡೆದ ವಿಶ್ವಕಪ್‌ ಫೈನಲ್‌ನ ರೋಚಕ ಸೂಪರ್ ಓವರ್ ವೇಳೆ ಅಂದರೆ ಜಿಮ್ಮಿ ನೀಶಮ್ ಮತ್ತು ಮಾರ್ಟಿನ್ ಗಪ್ಟಿಲ್ ಬ್ಯಾಟಿಂಗ್ ಮಾಡುತ್ತಿದ್ದಾಗ ನೀಶಮ್ 2ನೇ ಎಸೆತಕ್ಕೆ ಸಿಕ್ಸ್ ಚಚ್ಚಿದ್ದರು. ಅದಾಗಿ ಮರುಕ್ಷಣವೇ ನೀಶಮ್ ಕೋಚ್ ಡೇವಿಡ್ ಜೇಮ್ಸ್ ಸಾವನ್ನಪ್ಪಿದ್ದರು.

ಪ್ರತಿಷ್ಠಿತ ಟೂರ್ನಿಯ ಪ್ರಶಸ್ತಿ ಸುತ್ತಿನಲ್ಲಿ, ಅದೂ ಜಿದ್ದಾಜಿದ್ದಿ ಪಂದ್ಯದಲ್ಲಿ ತನ್ನ ವಿದ್ಯಾರ್ಥಿ, ದೇಸಿ ತಂಡದ ಪರ ಹೋರಾಟದಲ್ಲಿದ್ದಾಗ ಶಿಕ್ಷಕರೊಬ್ಬರು ಅಸುನೀಗಿದ ಅಪರೂಪರ ಘಟನೆಯಿದು.

ಮನ ಗೆದ್ದ ಬ್ಲ್ಯಾಕ್ ಕ್ಯಾಪ್ಸ್

ಮನ ಗೆದ್ದ ಬ್ಲ್ಯಾಕ್ ಕ್ಯಾಪ್ಸ್

ಫೈನಲ್ ನಲ್ಲಿ ಎರಡೂ ತಂಡಗಳೂ 241 ರನ್ ಬಾರಿಸಿದ್ದರಿಂದ ಪಂದ್ಯ ಟೈ ಆಗಿತ್ತು. ಸೂಪರ್ ಓವರ್‌ನಲ್ಲೂ ಇತ್ತಂಡಗಳು 15 ರನ್ ಬಾರಿಸಿ ಸಮಬಲ ಸಾಧಿಸಿದ್ದವು. ಆದರೆ ಬೌಂಡರಿ ಲೆಕ್ಕಗಳ ನಿಯಮದ ಆಧಾರದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಆಗಿ ಘೋಷಿಸಲಾಯ್ತು. ಇನ್ನೊಂದೆಡೆ, ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಕೇನ್ ವಿಲಿಯಮ್ಸ್ ಪಡೆ ವಿಶ್ವದ ಕ್ರಿಕೆಟ್ ಪ್ರೇಮಿಗಳ ಪ್ರೀತಿಗೆ ಪಾತ್ರವಾಗಿತ್ತು.

ಸಿಕ್ಸ್ ಬಾರಿಸುತ್ತಲೇ ಕೊನೆಯುಸಿರು

ಸಿಕ್ಸ್ ಬಾರಿಸುತ್ತಲೇ ಕೊನೆಯುಸಿರು

ಸೋಮವಾರ ಬೆಳಗ್ಗೆ (ನ್ಯೂಜಿಲೆಂಡ್ ಕಾಲಮಾನ) ಫೈನಲ್ ಪಂದ್ಯದ ಸೂಪರ್ ಓವರ್‌ನಲ್ಲಿ ಕಿವೀಸ್ 15 ರನ್‌ ಚೇಸಿಂಗ್‌ಗೆ ಇಳಿದಿದ್ದಾಗ ಓವರ್‌ನ 2ನೇ ಎಸೆತಕ್ಕೆ ನೀಶಮ್ ಸಿಕ್ಸ್ ಬಾರಿಸಿದ್ದರು. ಅದಾಗಲೇ ತನ್ನ ತಂದೆ ಉಸಿರಾಟ ನಿಲ್ಲಿಸಿದ್ದರು ಎಂದು ಗಾರ್ಡನ್ ಪುತ್ರಿ ಲಿಯೋನಿ, ಘಟನೆಯ ಸ್ಪಷ್ಟ ಚಿತ್ರಣ ನೀಡಿದ್ದಾರೆ.

ಉಸಿರಾಟದಲ್ಲಿ ಬದಲಾವಣೆ

ಉಸಿರಾಟದಲ್ಲಿ ಬದಲಾವಣೆ

'ಫೈನಲ್ ಪಂದ್ಯದ ಸೂಪರ್‌ ಓವರ್‌ ವೇಳೆ ತಂದೆ ಮಲಗಿದ್ದಲ್ಲಿಗೆ ಬಂದ ನರ್ಸ್, ತಂದೆಯ ಉಸಿರಾಟದಲ್ಲಿ ಬದಲಾವಣೆಗಳಾಗುತ್ತಿದೆ ಎಂದಳು. ನಿಮಗ್ಗೊತ್ತಾ, ನನಗನ್ನಿಸಿದಂತೆ ಜೇಮ್ಸ್ ನೀಶಮ್ ಸಿಕ್ಸ್ ಬಾರಿಸುವ ವೇಳೆಗೆ ಅಪ್ಪ ಕೊನೆಯುಸಿರು ಬಿಟ್ಟಿದ್ದರು' ಎಂದು ಸ್ಟಫ್ ಡಾಟ್ ಕೋ ಡಾಟ್ ಎನ್‌ಝಡ್ ಜೊತೆ ಮಾತನಾಡುತ್ತ ಲಿಯೋನಿ ವಿವರಿಸಿದ್ದಾರೆ.

ಜಿಮ್ಮಿ ನೀಶಮ್ ವಿಷಾದ

ಜಿಮ್ಮಿ ನೀಶಮ್ ವಿಷಾದ

ನನ್ನ ಹೈಸ್ಕೂಲ್ ಟೀಚರ್, ಕೋಚ್, ಫ್ರೆಂಡ್ ಆದ ಡೇವ್ ಗಾರ್ಡನ್ ಅವರೆ, ಮುಖ್ಯವಾಗಿ ನಿಮ್ಮ ಅಡಿಯಲ್ಲಿ ಆಡಿ ಬೆಳೆದ ನಮಗೆ ಆಟದ ಬಗೆಗಿನ ನಿಮ್ಮ ಪ್ರೀತಿ ಪಸರಿಸಿದೆ. ಕೊನೆಯುಸಿರೆಳೆಯೋಕೆ ಎಂಥಹ ಸೂಕ್ತ ಪಂದ್ಯವನ್ನು ನೀವು ಆರಿಸಿಕೊಂಡಿದ್ದೀರಿ. ನಮ್ಮ ಆಟಕ್ಕೆ ನೀವು ಹೆಮ್ಮೆಪಟ್ಟಿರುತ್ತೀರಿ ಎಂದು ಭಾವಿಸುತ್ತೇವೆ. ನಿಮ್ಮ ಪ್ರೀತಿ, ಕಾಳಜಿ ಎಲ್ಲದಕ್ಕೂ ಧನ್ಯವಾದಗಳು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ನೀಶಮ್ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

Story first published: Thursday, July 18, 2019, 15:36 [IST]
Other articles published on Jul 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+