NZ vs BAN: ಉಭಯ ತಂಡಗಳಿಗೂ ಗೆಲವೊಂದೇ ಟಾರ್ಗೆಟ್
ಚಾಂಪಿಯನ್ಸ್ ಟ್ರೋಫಿ "ಎ" ಗುಂಪಿನ ಪಂದ್ಯದಲ್ಲಿ ಸೋಮವಾರ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು ಕಾದಾಟ ನಡೆಸಲಿವೆ. ರಾವಲ್ಪಿಂಡಿ ಅಂಗಳದಲ್ಲಿ ಪ್ರಸಕ್ತ ಟೂರ್ನಿಯ ಆರನೇ ಪಂದ್ಯ ನಡೆಯಲಿದೆ.
ಈ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿಫೈನಲ್‌ಗೆ ಹತ್ತಿರವಾಗುವ ಕನಸು ನ್ಯೂಜಿಲೆಂಡ್ ತಂಡದ್ದಾಗಿದೆ. ಇನ್ನು ಈ ಪಂದ್ಯ ಗೆದ್ದು ಮುಂದಿನ ಹಂತವನ್ನು ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ಬಯಕೆ ಬಾಂಗ್ಲಾದೇಶದ್ದಾಗಿದೆ.
ಬಾಂಗ್ಲಾದೇಶ ಭಾರತದ ವಿರುದ್ಧ 6 ವಿಕೆಟ್‌ಗಳಿಂದ ಸೋಲು ಕಂಡಿದ್ದು, ಗೆಲುವಿನ ಟ್ರ್ಯಾಕ್‌ಗೆ ಮರಳುವ ಪ್ಲ್ಯಾನ್ ಮಾಡಿಕೊಂಡಿದೆ. ಇನ್ನು ನ್ಯೂಜಿಲೆಂಡ್ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 60 ರನ್‌ಗಳಿಂದ ಮಣಿಸಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಪೂರ್ಣ ಅಂಕವನ್ನು ಗಳಿಸುವ ಇರಾದೆ ಎರಡೂ ತಂಡಗಳದ್ದಾಗಿದೆ. ಉಭಯ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 45 ಬಾರಿ ಮುಖಾಮುಖಿಯಾಗಿದ್ದು, ನ್ಯೂಜಿಲೆಂಡ್ 33 ಪಂದ್ಯಗಳನ್ನು ಗೆದ್ದಿದ್ದು, ಬಾಂಗ್ಲಾದೇಶ 11 ಪಂದ್ಯಗಳಲ್ಲಿ ಜಯ ಸಾಧಿಸಿದೆ. ರಾವಲ್ಪಿಂಡಿ ಪಿಚ್ ಬ್ಯಾಟರ್‌ಗಳಿಗೆ ನೆರವು ನೀಡಲಿದ್ದು, ಟಾಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ.

ಸಂಘಟಿತ ಆಟವೇ ಬಲ
ನ್ಯೂಜಿಲೆಂಡ್ ತಂಡ ಸಂಘಟಿತ ಆಟದ ಮೇಲೆ ವಿಶ್ವಾಸ ಇಟ್ಟಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿರುವ ವಿಲ್ ಯಂಗ್, ಟಾಮ್ ಲಾಥಮ್, ಗ್ಲೇನ್ ಫಿಲಿಪ್ಸ್ ತಂಡದಲ್ಲಿ ಹೊಸ ಉತ್ಸಾಹ ತುಂಬಿದ್ದಾರೆ. ಇನ್ನು ಈ ಅಂಗಳದಲ್ಲಿ ಡೇರಿಲ್ ಮಿಚೆಲ್ ಅತಿ ಹೆಚ್ಚು ರನ್ ಬಾರಿಸಿದ ಕಿವೀಸ್ ಆಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಇವರ ಮೇಲೂ ಎಲ್ಲರ ಕಣ್ಣು ನೆಟ್ಟಿರಲಿದೆ. ಇನ್ನು ಭರವಸೆಯ ಆಟಗಾರರಾದ ಕೇನ್ ವಿಲಿಯಮ್ಸನ್, ಡ್ವೇನ್ ಕಾನ್ವೆ ಸಮಯೋಚಿತ ಆಟದ ಪ್ರದರ್ಶನ ನೀಡಬೇಕಿದೆ.
ಕಿವೀಸ್ ತಂಡದ ಪರ ಮ್ಯಾಟ್ ಹೆನ್ರಿ ಹಾಗೂ ವಿಲ್ ಒ'ರೂರ್ಕ್ ಬಿಗುವಿನ ದಾಳಿ ನಡೆಸಿ ಬಾಂಗ್ಲಾ ಬ್ಯಾಟರ್‌ಗಳನ್ನು ಕಾಡಬೇಕಿದೆ. ಉಳಿದಂತೆ ನಾಯಕ ಮಿಚೆಲ್ ಸ್ಯಾಂಟ್ನರ್, ಗ್ಲೇನ್ ಫಿಲಿಪ್ಸ್, ನಾಥನ್ ಸ್ಮಿತ್ ಮಿಡ್ಲ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ, ವಿಕೆಟ್ ಬೇಟೆ ನಡೆಸಬೇಕಿದೆ.

ತೋಹಿದ್ ಹೃದಯ್ ಆಕರ್ಷಣೆ
ಭಾರತ ವಿರುದ್ಧ ಪಂದ್ಯದಲ್ಲಿ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದಾಗ ತಂಡಕ್ಕೆ ನೆರವಾದ ಬ್ಯಾಟರ್ ಯುವ ಆಟಗಾರ ತೋಹಿದ್ ಹೃದಯ್. ಈ ಪ್ಲೇಯರ್ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಇನ್ನು ಜೇಕರ್ ಅಲಿ ಸಹ ತಮ್ಮ ಬ್ಯಾಟಿಂಗ್‌ನಿಂದ ಎದುರಾಳಿಗಳನ್ನು ಕಾಡಬಲ್ಲರು. ಟಾಪ್ ಆರ್ಡರ್ ಆಟಗಾರರು ತಮ್ಮ ಲಯವನ್ನು ಕಂಡುಕೊಂಡು ಎದುರಾಳಿ ಬೌಲರ್‌ಗಳನ್ನು ಕಾಡಬೇಕಿದೆ. ಮುಷ್ತಾಫಿಜುರ್ ರಹಮಾನ್ ಮುಂದಾಳತ್ವದ ಬೌಲಿಂಗ್ ಪಡೆ ಸರಿಯಾದ ಸ್ಥಳದಲ್ಲಿ ಬೌಲ್ ಮಾಡಿ ವಿಕೆಟ್ ಬೇಟೆ ನಡೆಸಿದರೆ, ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಗೆಲುವಿನ ಆಸೆ ಫಲಿಸುತ್ತದೆ.
ಈ ಮೈದಾದ ಗರಿಷ್ಠ ಮೊತ್ತ: 337
ಈ ಮೈದಾನದಲ್ಲಿ ದಾಖಲಾದ ಕನಿಷ್ಠ ಮೊತ್ತ: 104
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications