ಭಾರತದ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

ವೆಲ್ಲಿಂಗ್ಟನ್, ಜನವರಿ 16: ಭಾರತದ ವಿರುದ್ಧದ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಕಾಲಿನ್ ಡಿ ಗ್ರಾಂಡ್‌ಹೋಮ್, ಮಿಚೆಲ್ ಸ್ಯಾಂಟ್ನರ್ ಮತ್ತು ಟಾಮ್ ಲಥಾಮ್ ಅವರನ್ನು ಮರಳಿ ತಂಡಕ್ಕೆ ಸೇರ್ಪಡೆ ಮಾಡಲಾಗಿದೆ.
ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆಗೆ ಕೈಗೆ ಪೆಟ್ಟುಮಾಡಿಕೊಂಡಿರುವ ಜೇಮ್ಸ್ ನೀಶಮ್ ಅವರ ಸ್ಥಾನಕ್ಕೆ ಗ್ರಾಂಡ್ ಹೋಮ್ ಅವರನ್ನು ಆಯ್ಕೆ ಮಾಡಲಾಗಿದೆ. ಶ್ರೀಲಂಕಾ ವಿರುದ್ಧದ ಸರಣಿಗೆ ಸ್ಥಾನ ಪಡೆಯದ ಲಥಾಮ್ ಅವರನ್ನು ಟಿಮ್ ಸೀಫೆರ್ಟ್ ಬದಲು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸೀಫೆರ್ಟ್ ಅವರು ಎರಡು ಪಂದ್ಯಗಳಿಂದ ಒಟ್ಟು 33 ರನ್ ಮಾತ್ರ ಗಳಿಸಿದ್ದರು.
ಕಳೆದ ವರ್ಷದ ಮಾರ್ಚ್‌ನಲ್ಲಿ ಕೊನೆಯ ಪಂದ್ಯವಾಡಿದ್ದ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಅವರ ಸೇರ್ಪಡೆ 14 ಆಟಗಾರರ ತಂಡದಲ್ಲಿ ಅಚ್ಚರಿಯ ಆಯ್ಕೆಯಾಗಿದೆ.
ತಂಡ ಹೀಗಿದೆ...
ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೋಲ್ಟ್, ಡಗ್ ಬ್ರೇಸ್‌ವೆಲ್, ಕಾಲಿನ್ ಡಿ ಗ್ರಾಂಡ್‌ಹೋಮ್, ಲೋಕಿ ಫರ್ಗ್ಯುಸನ್, ಮಾರ್ಟಿನ್ ಗುಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್ (ವಿಕೆಟ್ ಕೀಪರ್), ಕಾಲಿನ್ ಮುನ್ರೋ, ಹೆನ್ರಿ ನಿಕೊಲ್ಸ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications