ನ್ಯೂಜಿಲೆಂಡ್ ತಂಡ ವಿಶ್ವಕಪ್‌ಗೆ ತನ್ನ 15 ಆಟಗಾರರ ಬಲಿಷ್ಠ ಪಡೆಯನ್ನು ಪ್ರಕಟಿಸಿದೆ. ಈ ವಿಶ್ವಕಪ್‌ನಲ್ಲಿ ತಂಡವನ್ನು ದಿಗ್ಗಜ ಆಟಗಾರ ಕೇನ್ ವಿಲಿಯಮ್ಸನ್ ಮುನ್ನಡೆಸಲಿದ್ದು ಸುದೀರ್ಘ ಕಾಲದ ಬಳಿಕ ಕಮ್‌ಬ್ಯಾಕ್ ಮಾಡಿದ್ದಾರೆ. ಕೇನ್ ವಿಲಿಯಮ್ಸನ್ ಕಳೆದ ಐಪಿಎಲ್ ಟೂರ್ನಿಯಲ್ಲಿ ಆರಂಭಿಕ ಪಂದ್ಯದಲ್ಲಿಯೇ ಗಾಯಗೊಂಡಿದ್ದು ಬಳಿಕ ಚಿಕಿತ್ಸೆಗೆ ಒಳಗಾಗಿದ್ದರು.
ಕೇನ್ ವಿಲಿಯಮ್ಸನ್ ವಿಶ್ವಕಪ್‌ಗೆ ಲಭ್ಯವಾಗುವುದು ಬಹುತೇಕ ಅಸಾಧ್ಯ ಎನ್ನಲಾಗಿತ್ತು. ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಪರವಾಗಿ ಆಡುವಾಗ ಫೀಲ್ಡಿಂಗ್ ವೇಳೆ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ಆರಂಭದಲ್ಲಿ ಸಾಮಾನ್ಯ ಗಾಯ ಎನಿಸುವಂತಿದ್ದರೂ ಅದರ ತೀವ್ರತೆ ನಂತರ ಅಅರಿವಿಗೆ ಬಂದಿತ್ತು. ಹೀಗಾಗಿ ಕೆಲ ತಿಂಗಳುಗಳ ಕಾಲವೇ ಕೇನ್ ವಿಲಿಯಮ್ಸನ್ ಕ್ರಿಕೆಟ್‌ಗ=ನಿಂದ ದೂರವುಳಿಯಬೇಕಾಯಿತು.

ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ನಂತರ ಕಠಿಣ ರಿಹ್ಯಾಬಿಲಿಟೇಶನ್‌ನಲ್ಲಿ ಭಾಗಿಯಾಗಿದ್ದರು. ಹಾಗಿದ್ದರೂ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಕೇನ್ ವಿಲಿಯಮ್ಸನ್ ಭಾಗಿಯಾಗುವುದು ಅನುಮಾನವೇ ಆಗಿತ್ತು. ಆದರೆ ನ್ಯೂಜಿಲೆಂಡ್‌ನ ಈ ದಿಗ್ಗಜ ತನ್ನ ಮುಂದಿನ ಎಲ್ಲಾ ಸವಾಲುಗಳನ್ನು ಹಿಮ್ಮೆಟ್ಟಿಸಿ ಚೇತರಿಕೆ ಕಂಡಿದ್ದು ಕಮ್‌ಬ್ಯಾಕ್ ಮಾಡಿದ್ದಾರೆ.
ಈ ಮೂಲಕ ಕೇನ್ ವಿಲಿಯಮ್ಸನ್ ನಾಳ್ಕನೇ ಬಾರಿಒಗೆ ಏಕದಿನ ವಿಶ್ವಕಪ್‌ನಲ್ಲಿ ಆಡಲು ಸಜ್ಜಾಗಿದ್ದಾರೆ. ಕೇನಗ ವಿಲಿಯಮ್ಸನ್ ಹೊರತುಪಡಿಸಿ ಕಿವೀಸ್ ತಂಡದಲ್ಲಿ ಟಿಮ್ ಸೌಥೀ ಕೂಡ ಇದೇ ಸಾಧನೆಯನ್ನು ಮಾಡಿದ್ದಾರೆ. ಮಾರ್ಕ್ ಚಾಪ್ಮನ್, ಡೆವೋನ್ ಕಾನ್ವೆ, ಡೇರೆಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಮೊದಲ ಬಾರಿಗೆ ಏಕದಿನ ವಿಶ್ವಕಪ್ ತಂಡನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ವಿಲ್ ಯಂಗ್ ಹಾಗೂ ರಾಚಿನ್ ರವೀಂದ್ರಗೂ ಇದು ಮೊದಲ ವಿಶ್ವಕಪ್.
ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟ್ರೆಂಟ್ ಬೌಲ್ಟ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್ (ಉಪನಾಯಕ, ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ ಮತ್ತು ವಿಲ್ ಯಂಗ್