Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

41ನೇ ವರ್ಷದಲ್ಲಿ ಕಂ ಬ್ಯಾಕ್ ಮಾಡಲಿರುವ RCB ಮಾಜಿ ಸ್ಟಾರ್‌

ನ್ಯೂಜಿಲೆಂಡ್‌ನ ಮಾಜಿ ನಾಯಕ ಮತ್ತು ಅದ್ಭುತ ಬ್ಯಾಟ್ಸ್‌ಮನ್ ರಾಸ್ ಟೇಲರ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಂ ಬ್ಯಾಕ್ ಮಾಡುವುದಾಗಿ ಘೋಷಿಸಿದ್ದಾರೆ. 41 ವಯಸ್ಸಿನ ರಾಸ್ ಟೇಲರ್ 2022ರಲ್ಲಿ ಕೊನೆಯ ಬಾರಿಗೆ ಕಿವೀಸ್ ತಂಡದ ವಿರುದ್ಧ ಕಣಕ್ಕೆ ಇಳಿದಿದ್ದರು. ಈಗ ಇವರು ಬೇರೆ ದೇಶದ ಪರ ಕಣಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಇವರು ಪ್ರತಿನಿಧಿಸಲಿರುವ ದೇಶ ಯಾವುದು? ಯಾವಾಗ ಅಂಗಳಕ್ಕೆ ಮರಳುತ್ತಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನ್ಯೂಜಿಲೆಂಡ್ ತಂಡದ ಸ್ಫೋಟಕ ಬ್ಯಾಟರ್‌ ರಾಸ್ ಟೇಲರ್ 2.18 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸಮೋವಾ ತಂಡವನ್ನು ಪ್ರತಿನಿಧಿಸುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಸ್ಫೋಟಕ ಬ್ಯಾಟರ್‌ ತಮ್ಮ ಸಾಮಾಜಿಕ ತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತೊಮ್ಮೆ ಹಬ್ಬದೂಟವನ್ನು ಉಣ ಬಡುಸಲು ಟೇಲರ್‌ ಸಿದ್ಧರಾಗಿದ್ದಾರೆ. ಇವರು ಭಾರತ ಹಾಗೂ ಜಂಟಿಯಾಗಿ ಆಯೋಜಿಸಲಿರುವ ಐಸಿಸಿ ಟಿ20 ವಿಶ್ವಕಪ್‌ಗಾಗಿ ಏಷ್ಯಾ-ಪೂರ್ವ ಏಷ್ಯಾ-ಪೆಸಿಫಿಕ್ ಅರ್ಹತಾ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

New Zealand Batting Legend Ross Taylor Announces International Comeback with Samoa

ಸಮೋವಾ ಘೋಷಿತ 15 ಜನರ ತಂಡದಲ್ಲಿ ಇವರು ಸ್ಥಾನ ಪಡೆದಿದ್ದಾರೆ. ಟೇಲರ್ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್‌ ಸಹ ಮಾಡಿದ್ದಾರೆ. ನಾನು ನೀಲಿ ಜೆರ್ಸಿಯನ್ನು ಧರಿಸಿ ಕ್ರಿಕೆಟ್‌ನಲ್ಲಿ ಸಮೋವಾವನ್ನು ಪ್ರತಿನಿಧಿಸುತ್ತೇನೆ ಎಂದು ಹೇಳಲು ನನಗೆ ತುಂಬಾ ಸಂತೋಷವಾಗಿದೆ. ಇದು ನಾನು ಇಷ್ಟಪಡುವ ಆಟಕ್ಕೆ ಮರಳುವುದಕ್ಕಿಂತ ಹೆಚ್ಚಿನದಾಗಿದೆ. ಇದು ನನ್ನ ಕುಟುಂಬಕ್ಕೆ ಹೆಮ್ಮೆಯ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಏಳು ಹೇಳುತ್ತೇ ಐಸಿಸಿ ನಿಯಮ?

ರಾಸ್‌ ಟೇಲರ್‌ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ. ಇವರು ಕಿವೀಸ್ ತಂಡದ ಪರ ಅದೆಷ್ಟೋ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್ ಆಡಿದ್ದಾರೆ. ಇವರು ಕೊನೆಯದಾಗಿ ಕಿವೀಸ್‌ ತಂಡದ ಜೆರ್ಸಿಯಲ್ಲಿ 2022ರಲ್ಲಿ ಕಣಕ್ಕೆ ಇಳಿದಿದ್ದರು. ಐಸಿಸಿ ನಿಯಮಗಳ ಪ್ರಕಾರ ಯಾವುದೇ ಆಟಗಾರ ಬೇರೆ ದೇಶದ ಪರ ಆಡಲು, ಒಂದು ತಂಡದಿಂದ ಹಿಂದೆ ಸರಿದ ಬಳಿಕ ಮೂರು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಈ ನಿಮಯವನ್ನು ಟೇಲರ್‌ ಈಗ ಮುಗಿಸಿದ್ದಾರೆ. ಹೀಗಾಗಿ ಇವರು ಸಮೋವಾ ಪರ ಆಡಲು ಅವಕಾಶ ಪಡೆದರು, ರಾಸ್ ಟೇಲರ್ ತನ್ನ ತಾಯಿಯಿಂದಾಗಿ ಈ ದೇಶದ ಬಾಂಧವ್ಯ ಹೊಂದಿದ್ದು, ಇವರ ಮನೆ ಸಹ ಇದೆ. ಒಟ್ಟಾರೆ ನ್ಯೂಜಿಲೆಂಡ್ ತಂಡದ ಪರ ಟೇಲರ್‌ 18199 ರನ್ ಗಳಿಸಿದ್ದು, 40 ಶತಕ ಸಿಡಿಸಿದ್ದಾರೆ. ರಾಸ್ ಟೇಲರ್‌ ಐಪಿಎಲ್‌ನಲ್ಲೂ ಅಮೋಘ ಪ್ರದರ್ಶನ ನೀಡಿ ಮಿಂಚಿರುವ ಆಟಗಾರ. ಇವರು ಆಡಿದ 55 ಪಂದ್ಯಗಳಲ್ಲಿ 1017 ರನ್‌ ಸಿಡಿಸಿದ್ದಾರೆ. ಇವರು ಆರ್‌ಸಿಬಿ ಪರ ಆಡಿ ಸೈ ಎನಿಸಿಕೊಂಡಿದ್ದಾರೆ.

New Zealand Batting Legend Ross Taylor Announces International Comeback with Samoa

ಸಮೋವಾ ತಂಡ: ಕ್ಯಾಲೆಬ್ ಜಸ್ಮತ್ (ನಾಯಕ), ರಾಸ್ ಟೇಲರ್, ಡೇರಿಯಸ್ ವಿಸ್ಸರ್, ಸೀನ್ ಸೋಲಿಯಾ, ಡೇನಿಯಲ್ ಬರ್ಗೆಸ್, ಡೌಗ್ಲಾಸ್ ಫಿನೌ, ಸ್ಯಾಮ್ ಫ್ರೆಂಚ್, ಕರ್ಟಿಸ್ ಹೈನಮ್-ನೈಬರ್ಗ್, ಬೆನ್ ಮೈಲಾಟಾ, ನೋಹ್ ಮೀಡ್, ಸೊಲೊಮನ್ ನ್ಯಾಶ್, ಸ್ಯಾಮ್ಸನ್ ಸೋಲಾ, ಫೆರೆಟಿ ಸುಲುಲೋಟೊ, ಸೌಮಾನಿ ಟಿಯಾಯ್, ಇಲಿ ತುಗಾಗಾ.

Story first published: Friday, September 5, 2025, 15:37 [IST]
Other articles published on Sep 5, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+