Champions Trophy 2025: ರಚಿನ್ ಅಮೋಘ ಶತಕ; ಸೆಮಿಫೈನಲ್‌ಗೆ ನ್ಯೂಜಿಲೆಂಡ್-ಭಾರತ ಎಂಟ್ರಿ
ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಪಾಕಿಸ್ತಾನ ವಿರುದ್ದದ ಟೀಮ್ ಇಂಡಿಯಾ ಗೆಲುವಿನ ಸದ್ದು ತಣ್ಣಗಾಗಿಲ್ಲ. ಇತ್ತ ನ್ಯೂಜಿಲೆಂಡ್ ತಂಡ ಕೂಡ ವಿಜಯದ ಕಹಳೆ ಊದಿದೆ. ಫೆಬ್ರವರಿ 24, ಸೋಮವಾರ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ತಂಡವನ್ನು ನ್ಯೂಜಿಲೆಂಡ್ 5 ವಿಕೆಟ್‌ಗಳಿಂದ ಸೋಲಿಸಿದೆ. ರಚಿನ್ ರವೀಂದ್ರ ಅವರ ಅದ್ಭುತ ಶತಕದ ನೆರವಿನಿಂದ ನ್ಯೂಜಿಲೆಂಡ್ ತಂಡ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.
ಬಾಂಗ್ಲಾದೇಶ ತಂಡವನ್ನು ಮಣಿಸುವ ಮೂಲಕ ನ್ಯೂಜಿಲೆಂಡ್ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ತಲುಪಿದೆ. ಕಿವೀಸ್ ಪಡೆ ಮಾರ್ಚ್ 2 ರಂದು ಭಾರತ ತಂಡವನ್ನು ಎದುರಿಸಲಿದೆ. ಮತ್ತೊಂದಡೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧ ಸತತ ಎರಡು ಗೆಲುವು ಸಾಧಿಸಿರುವ ಭಾರತ ತಂಡ ಕೂಡ ಸೆಮಿಫೈನಲ್‌ಗೆ ಎಂಟ್ರಿ ಕೊಟ್ಟಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಕಿವೀಸ್ ಪಡೆಯ ಸ್ಟಾರ್ ಸ್ಪಿನ್ನರ್ ಮೈಕೆಲ್ ಬ್ರೇಸ್‌ವೆಲ್ ತಮ್ಮ ಅದ್ಭುತ ಬೌಲಿಂಗ್ ಮೂಲಕ ಬಾಂಗ್ಲಾದೇಶ ತಂಡವನ್ನು ಧ್ವಂಸಗೊಳಿಸಿದರು. ಅವರು ಬಾಂಗ್ಲಾದೇಶದ 4 ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿದರು. ಇವರಲ್ಲದೆ, ವಿಲಿಯಂ ಒ'ರೂರ್ಕ್ 2 ವಿಕೆಟ್ ಪಡೆದರೆ, ಜೇಮಿಸನ್ ಮತ್ತು ಮ್ಯಾಟ್ ಹೆನ್ರಿ ತಲಾ 1 ವಿಕೆಟ್ ಪಡೆದರು.
ಬಾಂಗ್ಲಾದೇಶದ ಪರ ನಾಯಕ ನಜ್ಮುಲ್ ಹಸನ್ ಶಾಂತೊ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತಿದ್ದರು. ಆದರೆ ಇನ್ನೊಂದು ತುದಿಯಿಂದ ಬಾಂಗ್ಲಾದೇಶ ತಂಡದ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಇಲ್ಲಲಿಲ್ಲ. ಶಾಂತೋ 77 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಒಂದು ಹಂತದಲ್ಲಿ, ಝಾಕಿರ್ ಅಲಿ ಕೂಡ ತನ್ನ ಉತ್ತಮವಾಗಿ ಆಡುತ್ತಿದ್ದರು. ಆದರೆ ದುರಾದೃಷ್ಟಕರ ಅವರು 45 ರನ್ ಗಳಿಸಿ ರನೌಟ್ ಆದರು. ಅಂತಿಮವಾಗಿ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 236 ರನ್ ಗಳಿಸಿತು.
ಬಾಂಗ್ಲಾದೇಶ ತಂಡದಿಂದ 236 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ಉತ್ತಮ ಆರಂಭವನ್ನು ಪಡೆಯಲಿಲ್ಲ. ಕೇನ್ ವಿಲಿಯಮ್ಸನ್ 5 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಪಾಕಿಸ್ತಾನ ವಿರುದ್ಧ ಶತಕ ಗಳಿಸಿದ್ದ ವಿಲ್ ಯಂಗ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಇಂತಹ ಪರಿಸ್ಥಿತಿಯಲ್ಲಿ ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ನ್ಯೂಜಿಲೆಂಡ್ ತಂಡಕ್ಕೆ ನೆರವಾದರು. ಈ ಜೋಡಿ 57 ರನ್‌ಗಳ ಜೊತೆಯಾಟ ಆಡಿದರು. ಡೆವೊನ್ ಕಾನ್ವೇ 30 ರನ್‌ಗಳಿಗೆ ಔಟಾದರು. ನಂತರ ಟಾಮ್ ಲ್ಯಾಥಮ್ ಅವರೊಂದಿಗೆ ರಚಿನ್ 129 ರನ್‌ಗಳ ಜೊತೆಯಾಟ ಆಡಿದರು.
ಅದ್ಭುತ ಶತಕ ಬಾರಿಸಿ ಗೆಲುವಿನ ಹೀರೋ ಆದ ರಚಿನ್ ರವೀಂದ್ರ 112 ರನ್ ಗಳಿಸಿ ಕೊನೆ ಹಂತದಲ್ಲಿ ವಿಕೆಟ್ ಕಳೆದುಕೊಂಡರು. ಲ್ಯಾಥಮ್ 55 ರನ್ ಗಳಿಸಿ ರನೌಟ್ ಆದರು. ಆದರೆ ಈ ವಿಕೆಟ್ ನಷ್ಟವು ನ್ಯೂಜಿಲೆಂಡ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಕಿವೀಸ್ ಪಡೆ 47ನೇ ಓವರ್‌ನಲ್ಲಿ ಐದು ವಿಕೆಟ್‌ಗಳಿಗೆ ಗುರಿಯನ್ನು ತಲುಪಿತು. ಬಾಂಗ್ಲಾದೇಶ ಪರ ತಸ್ಕಿನ್ ಅಹ್ಮದ್, ನಹಿದ್ ರಾಣಾ, ಮುಸ್ತಾಫಿಜುರ್ ರೆಹಮಾನ್ ಮತ್ತು ರಶೀದ್ ಹುಸೇನ್ ತಲಾ 1 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications