T20 World Cup 2026: ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ 2026 ಡಿ ಗ್ರೂಪ್ ಪಂದ್ಯದಲ್ಲಿ ಕೆನಾಡ ತಂಡದ ವಿರುದ್ಧ ನ್ಯೂಜಿಲೆಂಡ್ 8 ವಿಕಟ್‌ಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಕೆನಡಾ ಪರ ಯುವರಾಜ್ ಶರ್ಮಾ ಸ್ಫೋಟಕ ಶತಕ ವ್ಯರ್ಥವಾದಂತಾಯಿತು.
ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಹೊಸ ತಂಡಗಳು ಉತ್ತಮ ಪ್ರದರ್ಶನ ತೋರುವ ಮೂಲಕ ಬೃಹತ್ ರನ್‌ಗಳನ್ನು ಕಲೆಹಾಕಿ ಅನುಭವಿ ಬಲಿಷ್ಠ ತಂಡಗಳಿಗೆ ಪೈಪೋಟಿ ನೀಡುತ್ತಿವೆ. ಈ ಸಾಲಿಗೆ ಕೆನಡಾ ಕೂಡ ಸೇರಿದ್ದು, ಇಂದು ಬಲಿಷ್ಠ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಿರಬಹುದು. ಆದರೆ, 173 ರನ್‌ಗಳನ್ನು ಕಲೆಹಾಕಿದ್ದು ವಿಶೇಷವಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಕೆನಡಾ ತಂಡವು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್‌ಗಳನ್ನು ಕಲೆಹಾಕಿತು. ಇದರಲ್ಲಿ ಬಹುತೇಕ ರನ್‌ಗಳು ಯುವರಾಜ್ ಅವರದ್ದಾಗಿವೆ. ಅವರು 11 ಬೌಂಡರಿ, 4 ಸಿಕ್ಸ್‌ಗಳೊಂದಿಗೆ 110 ರನ್‌ಗಳನ್ನು ಕಲೆಹಾಕಿದರು. ಉಳಿದಂತೆ ದಿಲ್ಪ್ರೀತ್ ಬಜ್ವಾರ್ 36(39), ನವ್ನೀತ್ ಧಾಲಿವಾಲ್ 10(7) ರನ್‌ಗಳನ್ನು ಕಲೆಹಾಕಿದರೆ, ಉಳಿದವರು ಒಂದಂಕಿ ರನ್‌ಗಳನ್ನು ಗಳಿಸಿದರು.
ಕೆನಡಾ ನೀಡಿದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು, 15.1 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 176 ರನ್‌ಗಳನ್ನು ಕಲೆಹಾಕಿ ಭರ್ಜರಿ ಗೆಲುವು ಸಾಧಿಸಿತು. ಈ ಗೆಲುವಿಗೆ ರಚಿನ್ ರವೀಂದ್ರ ಹಾಗೂ ಗ್ಲೆನ್ ಫಿಲಿಪ್ಸ್ ಸಿಡಿಸಿದ ಬೃಹತ್ ರನ್‌ಗಳೇ ಪ್ರಮುಖ ಕಾರಣ ಅಂದ್ರೆ ತಪ್ಪಾಗಲಾದು.
ರಚಿನ್ ರವೀಂದ್ರ ಅಜೇಯ 59(39), ಗ್ಲೆನ್ ಫಿಲಿಪ್ಸ್ ಅಜೇಯ 76(36) ರನ್‌ಗಳನ್ನು ಸಿಡಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಉಳಿದಂತೆ ಟೀಮ್ ಸೀಫರ್ಟ್ 6(10), ಫಿನ್ ಅಲೆನ್ 21(8) ರನ್‌ಗಳನ್ನು ಗಳಿಸಿದರು.
ಯುವರಾಜ್ ಸಾಧನೆ: ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ಕೆನಡಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಮಾಡಿದರೂ, 19 ವರ್ಷದ ಸಾಮ್ರಾ ತಮ್ಮ ಶತಕದ ಆಟದಿಂದ ಗಮನ ಸೆಳೆದಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೂ ಇವರು ಸಿಡಿಸಿದ ಶತಕಕ್ಕೆ ಜಯ ಒಲಿಯಲಿಲ್ಲ. ಆದರೂ ಯುವರಾಜ್ ಮಾಡಿದ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯದ್ದೇ ಇದೀಗ ಎಲ್ಲಡೆ ಚರ್ಚೆಯಾಗುತ್ತಿದೆ.