ಬಾಂಗ್ಲಾ ವಿರುದ್ಧ 100 ರನ್ ಜಯ ಸಾಧಿಸಿದ ಕಿವೀಸ್: ಅಂಕ ಪಟ್ಟಿಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
ಗುವಹಾಟಿ: ಮಹಿಳಾ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ತಂಡ ಸಂಘಟಿತ ಪ್ರದರ್ಶನವನ್ನು ಮುಂದುವರೆಸಿದೆ. ಟೂರ್ನಿಯ 11ನೇ ಪಂದ್ಯದಲ್ಲಿ ನ್ಯೂಜಿಲೆಂಡ್ 100 ರನ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿದೆ. ಈ ಮೂಲಕ ಕಿವೀಸ್ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಆಡಿದ 3 ಪಂದ್ಯಗಳಲ್ಲಿ 1 ಜಯ, 2 ಸೋಲು ಕಂಡಿದ್ದು, 2 ಅಂಕವನ್ನು ಕಲೆ ಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ಸೂಜಿ ಬೇಟ್ಸ್ (29) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಪರಿಣಾಮ ಕಿವೀಸ್ 35 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ನಾಯಕಿ ಸೋಫಿಯಾ ಡಿವೈನ್ ಹಾಗೂ ಬ್ರೂಕ್ ಹ್ಯಾಲಿಡೇ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ಬಾಂಗ್ಲಾ ಬೌಲರ್‌ಗಳು ವಿಫಲರಾದರು.

ಸೋಫಿಯಾ ಡಿವೈನ್ ಹಾಗೂ ಬ್ರೂಕ್ ಹ್ಯಾಲಿಡೇ 4ನೇ ವಿಕೆಟ್‌ಗೆ 166 ಎಸೆತಗಳಲ್ಲಿ 112 ರನ್ ಕಲೆ ಹಾಕಿದರು. ಈ ವೇಳೆ ಬ್ರೂಕ್ ಹ್ಯಾಲಿಡೇ 104 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 69 ರನ್ ಬಾರಿಸಿ ಮಿಂಚಿದರು. ಸ್ಟಾರ್ ಆಟಗಾರ್ತಿ ಸೋಫಿಯಾ ಡಿವೈನ್ 2 ಬೌಂಡರಿ, 2 ಸಿಕ್ಸರ್ ಸಹಾಯದಿಂದ 63 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮ್ಯಾಡಿ ಗ್ರೀನ್ 25 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಕಿವೀಸ್ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 227 ರನ್ ಕಲೆ ಹಾಕಿದೆ.
ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಬಾಂಗ್ಲಾ ತಂಡದ ಬ್ಯಾಟರ್‌ಗಳ ಒತ್ತಡವನ್ನು ಮೆಟ್ಟಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಬಾಂಗ್ಲಾ ದೇಶದ ಟಾಪ್ 5 ಆಟಗಾರ್ತಿಯರು ಸಿಂಗಲ್ ಡಿಜಿಟನ್‌ಲ್ಲಿ ಆಟ ಮುಗಿಸಿದರು.ಫಾಹಿಮಾ ಖಾತುನ್ 34, ರಬೇಯಾ ಖಾನ್ 25, ನಹಿದಾ ಅಕ್ಟರ್ 17 ರನ್ ಗಳಿಸಿ ಅಂತರವನ್ನು ಕಡಿಮೆ ಮಾಡಿದರು. ಕಿವೀಸ್ ತಂಡದ ಪರ ಜೆಸ್ ಕೆರ್, ಲಿಯಾ ತಹುಹು ತಲಾ ಮೂರು ವಿಕೆಟ್ ಕಬಳಿಸಿದರು.
ಅಂಕಪಟ್ಟಿಯ ಚಿತ್ರಣ
ಆಸ್ಟ್ರೇಲಿಯಾ ಆಡಿದ 3 ಪಂದ್ಯಗಳಲ್ಲಿ 2 ಗೆಲುವು, 1 ಪಂದ್ಯ ರದ್ದಾಗಿದ್ದರಿಂದ 5 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಇನ್ನು ಇಂಗ್ಲೆಂಡ್ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿ, ಎರಡನೇ ಸ್ಥಾನವನ್ನು ಪಡೆದಿದ್ದಾರೆ. ಇನ್ನು ಹರ್ಮನ್ ಪ್ರಿತ್ ಪಡೆ ಆಡಿದ 3 ಪಂದ್ಯಗಳಲ್ಲಿ 2 ಜಯ, 1 ಸೋಲು ಕಂಡಿದ್ದು, 4 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇನ್ನು ದಕ್ಷಿಣ ಆಫ್ರಿಕಾ 4 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಭಾರತ ತನ್ನ ನಾಲ್ಕನೇ ಪಂದ್ಯವನ್ನು ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಕನಸು ಆತಿಥೇಯ ತಂಡದ್ದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications