For Quick Alerts
ALLOW NOTIFICATIONS  
For Daily Alerts
 

IND vs NZ Test: ಭಾರತದ ಸ್ಪಿನ್ ಬಲೆಗೆ ಬಿದ್ದ ಕಿವೀಸ್‌:ಸುಂದರ್‌ಗೆ 7 ವಿಕೆಟ್‌

ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ಬೌಲಿಂಗ್ ದಾಳಿಗೆ ನ್ಯೂಜಿಲೆಂಡ್ ತಂಡ ತತ್ತರಿಸಿದೆ. ಪುಣೆ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 259 ರನ್‌ಗಳಿಗೆ ಸರ್ವಪತನವಾಗಿದೆ.

ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಉತ್ತಮವಾಗಿ ಇನ್ನಿಂಗ್ಸ್ ಆರಂಭಿಸಿತು. ಆದರೆ ನಾಯಕ ಟಾಮ್ ಲ್ಯಾಥಮ್ 15 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಕ್ರೀಸ್‌ಗೆ ಬಂದ ವಿಲ್ ಯಂಗ್ ಮತ್ತು ಡೆವೊನ್ ಕಾನ್ವೇ ತಾಳ್ಮೆಯುತ ಬ್ಯಾಟಿಂಗ್ ಮಾಡಿದರು.

New Zealand Bowled Out for 259 Runs in Their First Innings Against India

ವಿಲ್ ಯಂಗ್ ಮತ್ತು ಡೆವೊನ್ ಕಾನ್ವೇ ಜೋಡಿ 46 ರನ್ ಗಳ ಜೊತೆಯಾಟವಾಡಿದರು. ಭಾರತದ ಸ್ಪಿನ್ ಬೌಲಿಂಗ್ ದಾಳಿಯನ್ನು ವಿಲ್ ಯಂಗ್ ಮತ್ತು ಡೆವೊನ್ ಕಾನ್ವೇ ಸಮರ್ಥವಾಗಿ ಎದುರಿಸಿದರು. ಉತ್ತಮವಾಗಿ ಆಡುತ್ತಿದ್ದ ವಿಲ್ ಯಂಗ್ 18 ರನ್‌ಗಳಿಗೆ ವಿಕೆಟ್ ಕಳೆದುಕೊಂಡರು.

ಇದಾದ ಬಳಿಕ ಡೆವೊನ್ ಕಾನ್ವೇ ಅವರೊಂದಿಗೆ ಜೊತೆಗೂಡಿದ ರಚಿನ್ ರವೀಂದ್ರ ಸ್ವಲ್ಪ ಸಮಯ ಟೀಮ್ ಇಂಡಿಯಾವನ್ನು ಕಾಡಿದರು. ಜವಾಬ್ದಾರಿಯುವ ಬ್ಯಾಟ್ ಬೀಸಿದ ಕಾನ್ವೇ ಮತ್ತು ರಚಿನ್ ನ್ಯೂಜಿಲೆಂಡ್ ಪರ ಅದ್ಭುತ ಇನ್ನಿಂಗ್ಸ್ ಆಡಿದರು.

ಡೆವೊನ್ ಕಾನ್ವೇ 76 ರನ್ ಗಳಿಸಿದರೆ, ಭರ್ಜರಿ ಬ್ಯಾಟಿಂಗ್ ಮಾಡಿದ ರಚಿನ್ ರವೀಂದ್ರ 65 ರನ್ ಕಲೆ ಹಾಕಿ ಔಟಾದರು. ಇನ್ನುಳಿದ ಯಾವುದೇ ಕಿವೀಸ್ ಬ್ಯಾಟರ್‌ಗಳು ಭಾರತದ ಸ್ಪಿನ್ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಯಶಸ್ವಿಯಾಗಲಿಲ್ಲ. ಡೇರಿಲ್ ಮಿಚೆಲ್ (18), ಟಾಮ್ ಬ್ಲಂಡೆಲ್ (3), ಗ್ಲೆನ್ ಫಿಲಿಪ್ಸ್ (9), ಮಿಚೆಲ್ ಸ್ಯಾಂಟ್ನರ್ (33), ಟಿಮ್ ಸೌಥಿ (5), ಅಜಾಜ್ ಪಟೇಲ್ (4) ಅವರಿಗೆ ವಾಷಿಂಗ್ಟನ್ ಸುಂದರ್ ಪೆವಲಿಯನ್ ಹಾದಿ ತೋರಿಸಿದರು.

ಭಾರತದ ಸ್ಪಿನ್ ದಾಳಿ

ಪುಣೆ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡಕ್ಕೆ ಭಾರತದ ಸ್ಪಿನ್ ಜೋಡಿ ಖೆಡ್ಡಾ ತೋಡಿದರು. ರವಿಚಂದ್ರನ್ ಅಶ್ವಿನ್ ಮತ್ತು ವಾಷಿಂಗ್ಟನ್ ಸುಂದರ್ ಅದ್ಭುತ ಸ್ಪಿನ್ ಬೌಲಿಂಗ್ ದಾಳಿ ನಡೆಸಿದರು. ಈ ಇಬ್ಬರು ಸ್ಪಿನ್ನರ್‌ಗಳು 47.1 ಓವರ್‌ಗಳನ್ನು ಮಾಡುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಮೊದಲ ದಿನವೇ ಕಟ್ಟಿ ಹಾಕಿದರು. 23.1 ಓವರ್‌ ಬೌಲಿಂಗ್ ಮಾಡಿದ ಸುಂದರ್ 2.50 ಸರಾಸರಿಯಲ್ಲಿ 59 ರನ್‌ ನೀಡಿ ಬರೋಬ್ಬರಿ 7 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಮತ್ತೊಂದೆಡೆ ಅಶ್ವಿನ್ 24 ಓವರ್ ಗಳಲ್ಲಿ 2.70ರ ಸರಾಸರಿಯಲ್ಲಿ 64 ರನ್ ನೀಡಿ 3 ವಿಕೆಟ್ ಪಡೆದರು.

ಮೊದಲ ದಿನದಾಟ ಅಂತ್ಯ

ಪುಣೆ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ನ್ಯೂಜಿಲೆಂಡ್ 259 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಭಾರತ 1 ವಿಕೆಟ್‌ ನಷ್ಟಕ್ಕೆ 15 ರನ್ ಕಲೆಹಾಕಿದೆ. ಭಾರತ ತಂಡ ರೋಹಿತ್ ಶರ್ಮಾ ಅವರ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದೆ. ರೋಹಿತ್ 9 ಎಸೆತಗಳನ್ನು ಎದುರಿಸಿದ ಖಾತೆ ತೆರೆಯದೆ ಟಿಮ್ ಸೌಥಿ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು.

Story first published: Thursday, October 24, 2024, 15:50 [IST]
Other articles published on Oct 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+