Champions Trophy 2025: ಟೂರ್ನಿಯಲ್ಲಿ ಅತಿ ಹೆಚ್ಚು ಬ್ಯಾಟರ್‌ಗಳನ್ನು ಕಾಡಿದ ಬೌಲರ್ಸ್
ಚಾಂಪಿಯನ್ಸ್ ಟ್ರೋಫಿ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಈ ಮೆಗಾ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಈಗಾಗಲೇ ಪಾಕ್‌ನಲ್ಲಿ ಬೀಡು ಬಿಟ್ಟಿವೆ. ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಫೆ.20 ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಈ ಟೂರ್ನಿಯಲ್ಲಿ ಬ್ಯಾಟರ್‌ಗಳ ಆರ್ಭಟಕ್ಕೆ ಬ್ರೇಕ್ ಹಾಕಲು ಸ್ಟಾರ್ ಬೌಲರ್‌ಗಳು ಸಹ ಸಜ್ಜಾಗಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ಇತಿಹಾಸವನ್ನು ನೋಡಿದಾಗ ವಿದೇಶಿ ಬೌಲರ್‌ಗಳ ಆರ್ಭಟ ಜೋರಾಗಿದೆ.
ಏಕದಿನ ಕ್ರಿಕೆಟ್ ಫಾರ್ಮೆಟ್ ಅಂದರೆ ಅದು ಬ್ಯಾಟರ್‌ಗಳ ನೆಚ್ಚಿನ ಫಾರ್ಮೆಟ್. ಈ ಕ್ರೀಡೆಯಲ್ಲಿ ಬ್ಯಾಟರ್‌ಗಳ ರಣ ತಂತ್ರವನ್ನು ಮೆಟ್ಟಿನಿಲ್ಲುವ ಕ್ಷಮತೆಯನ್ನು ಬೌಲರ್‌ಗಳು ಬೆಳೆಸಿಕೊಂಡಿದ್ದಾರೆ. ಒಟ್ಟಾರೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಬ್ಯಾಟರ್‌ಗಳನ್ನು ಬಹುವಾಗಿ ಕಾಡಿದ ವಿಶ್ವದ ಖ್ಯಾತ ಬೌಲರ್‌ಗಳ ಪಟ್ಟಿ ಇಲ್ಲಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಬೌಲರ್‌ಗಳನ್ನು ಕಾಡಿದ ಪಟ್ಟಿಯಲ್ಲಿ ನ್ಯೂಜಿಲೆಂಡ್‌ನ ಕೈಲ್ ಮಿಲ್ಸ್ ಸ್ಥಾನ ಪಡೆದಿದ್ದಾರೆ. ಇವರು 15 ಬಾರಿ ತಂಡದ ಪರ ಕಣಕ್ಕೆ ಇಳಿದಿದ್ದು, 28 ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲರಾಗಿದ್ದಾರೆ. ಈ ವೇಳೆ ಇವರ ಸರಾಸರಿ 4.29 ಆಗಿದೆ.
ಲಂಕಾ ಬೌಲರ್‌ಗಳ ಆರ್ಭಟ
ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಬೌಲರ್ ಶ್ರೀಲಂಕಾದ ದಿಗ್ಗಜ ಸ್ಪಿನ್ ಬೌಲರ್ ಮುತ್ತಯ್ಯ ಮುರುಳಿಧರನ್. ಇವರು ಸಹ ಬ್ಯಾಟರ್‌ಗಳನ್ನು ಕಾಡಿದ ಬೌಲರ್. ಚಾಂಪಿಯನ್ಸ್ ಟ್ರೋಫಿಯಲ್ಲಿ ಇವರು ಆಡಿದ 16 ಪಂದ್ಯಗಳಲ್ಲಿ 5.31ರ ಎಕಾನಮಿಯಲ್ಲಿ 25 ವಿಕೆಟ್ ಪಡೆದಿದ್ದಾರೆ. ಇದೇ ಪಟ್ಟಿಯಲ್ಲಿ ಸ್ಥಾನ ಪಡೆದ ಇನ್ನೋರ್ವ ಲಂಕಾ ಬೌಲರ್ ಲಸಿತ್ ಮಲಿಂಗಾ. ಇವರು ಆಡಿದ 17 ಪಂದ್ಯಗಳಲ್ಲಿ 3.60ರ ಎಕಾನಮಿಯೊಂದಿಗೆ 24 ವಿಕೆಟ್ ಕಬಳಿಸಿದ್ದಾರೆ.

ಆಸೀಸ್ ವೇಗಿಗಳ ಹಾವಳಿ
ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ದಿಗ್ಗಜ ವೇಗಿ ಬ್ರೇಟ್ ಲಿ ಇದ್ದಾರೆ. ಇವರು ಆಡಿದ 16 ಪಂದ್ಯಗಳಲ್ಲಿ 22 ಬಾರಿ ಬ್ಯಾಟರ್‌ನನ್ನು ಪೆವಿಲಿಯನ್‌ಗೆ ಅಟ್ಟುವಲ್ಲಿ ಸಫಲರಾಗಿದ್ದಾರೆ. ಈ ವೇಳೆ ಇವರ ಎಕಾನಮಿ 4.79 ಆಗಿದೆ. ಆಸೀಸ್ ತಂಡದ ಇನ್ನೋಬ್ಬ ಖ್ಯಾತ ಬೌಲರ್ ಗ್ಲೆನ್ ಮೆಕ್‌ಗ್ರಾತ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಸಾಧಕರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಆಡಿದ 12 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಇವರು ಸಹ ಟೂರ್ನಿಯಲ್ಲಿ ಅಪಾಯಕಾರಿ ಬೌಲರ್‌ಗಳಲ್ಲಿ ಒಬ್ಬರು.
ಭಾರತದ ಪರ ಗರಿಷ್ಠ ವಿಕೆಟ್ ಯಾರಿಗೆ?
ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರಿಗೆ ಸ್ಥಾನ. ಇವರು ಈ ಟೂರ್ನಿಯಲ್ಲಿ ಮಾರಕ ದಾಳಿ ನಡೆಸಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಿದ್ದಾರೆ. ಇವರು ಆಡಿದ 10 ಪಂದ್ಯಗಳಲ್ಲಿ 16 ವಿಕೆಟ್ ಸಾಧನೆ ಮಾಡಿದ್ದಾರೆ. ಈ ವೇಳೆ ಒಮ್ಮೆ ಐದು ವಿಕೆಟ್ ಪಡೆದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications