Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಾಮ್ ಲ್ಯಾಥಮ್: ಟೆಸ್ಟ್ ಸರಣಿಗೂ ಮುನ್ನ ಭಾರತಕ್ಕೆ ಸವಾಲೆಸೆದ ನ್ಯೂಜಿಲೆಂಡ್ ನಾಯಕ

ಭಾರೀ ಕುತೂಹಲ ಮೂಡಿಸಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು ಅಕ್ಟೋಬರ್ 16 ರಿಂದ ಪ್ರಾರಂಭವಾಗಲಿದೆ. ಟೆಸ್ಟ್ ಸರಣಿಗೂ ಮುನ್ನ ನ್ಯೂಜಿಲೆಂಡ್ ನಾಯಕ ಟಾಮ್ ಲ್ಯಾಥಮ್ ಸವಾಲೆಸೆದಿದ್ದಾರೆ. ಈ ಹೇಳಿಕೆಯ ಮೂಲಕ ಅವರು ಸಂಚಲನ ಮೂಡಿಸಿದ್ದಾರೆ.

ತವರಿನಲ್ಲಿ ಅಜೇಯವಾಗಿರುವ ಭಾರತಕ್ಕೆ ಕಠಿಣ ಸವಾಲು ನೀಡಬೇಕಾದರೆ ನಿರ್ಭೀತಿಯಿಂದ ಆಡುವುದೊಂದೇ ದಾರಿ ಎಂದು ಟಾಮ್ ಲ್ಯಾಥಮ್ ಅಭಿಪ್ರಾಯಪಟ್ಟಿದ್ದಾರೆ. ಇದರೊಂದಿಗೆ ಭಾರತ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಆಕ್ರಮಣಕಾರಿ ಕ್ರಿಕೆಟ್ ಆಡಲಿದೆ ಎಂಬ ಇಂಗಿತವನ್ನು ಟಾಮ್ ಲ್ಯಾಥಮ್ ವ್ಯಕ್ತಪಡಿಸಿದ್ದಾರೆ.

New Zealand captain challenged Team India before the Test series

ನಿರ್ಭಯವಾಗಿ ಆಡುತ್ತೇವೆ

ಶುಕ್ರವಾರ ಕಿವೀಸ್ ಪಡೆ ಭಾರತಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ
ಟಾಮ್ ಲ್ಯಾಥಮ್, 'ಭಾರತ ಪ್ರವಾಸ ಯಾವಾಗಲೂ ರೋಮಾಂಚನಕಾರಿ ಮತ್ತು ಸವಾಲಿನದ್ದಾಗಿದೆ. ನಮಗೆ ನಂಬಿಕೆ ಇದೆ, ನಾವು ಭಾರತದಲ್ಲಿ ಸ್ವಲ್ಪ ನಿರ್ಭಯವಾಗಿ ಆಡಿ ಅವರ ಮೇಲೆ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತೇವೆ. ಹೀಗೆ ಮಾಡಿದರೆ ನಮಗೆ ಗೆಲ್ಲುವ ಅವಕಾಶ ಉತ್ತಮವಾಗಿರುತ್ತದೆ ಎಂದಿದ್ದಾರೆ.

ಆಕ್ರಮಣಕಾರಿ ಕ್ರಿಕೆಟ್‌

ಈ ಹಿಂದೆ ಭಾರತದಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡಗಳನ್ನು ನಾವು ನೋಡಿದ್ದೇವೆ. ಆಕ್ರಮಣಕಾರಿ ಆಟವಾಡುವ ಮೂಲಕ ಭಾರತದ ಎದುರು ಈ ಸಾಧನೆ ಮಾಡಿದ್ದರು. ಅದರಲ್ಲೂ ಬ್ಯಾಟಿಂಗ್‌ನಲ್ಲಿ ರಕ್ಷಣಾತ್ಮಕ ಕ್ರಿಕೆಟ್‌ಗೆ ಬದಲಾಗಿ ಆಕ್ರಮಣಕಾರಿ ಆಡುವುದು ಮುಖ್ಯವಾಗಿರುತ್ತದೆ ಎಂದು ತಮ್ಮ ಕಾರ್ಯತಂತ್ರದ ಬಗ್ಗೆ ಟಾಮ್ ಲ್ಯಾಥಮ್ ತಿಳಿಸಿದ್ದಾರೆ.

ಭಾರತಕ್ಕೆ ಸವಾಲು

ಭಾರತಕ್ಕೆ ಬಂದ ನಂತರ ನಾವು ಯಾವ ರೀತಿಯ ಕ್ರಿಕೆಟ್ ಆಡಬೇಕೆಂದು ನಿರ್ಧರಿಸಬೇಕು. ಆದರೆ ನಮ್ಮ ಆಟಗಾರರು ಸವಾಲನ್ನು ನೀಡಲು ತಮ್ಮದೇ ಆದ ತಂತ್ರವನ್ನು ಹೊಂದಿದ್ದಾರೆ. ಪಂದ್ಯದ ವೇಳೆ ಅವರು ತಮ್ಮ ತಂತ್ರವನ್ನು ಉತ್ತಮವಾಗಿ ಕಾರ್ಯಗತಗೊಳಿಸಲಿದ್ದಾರೆ ಎಂದು ಭಾರತಕ್ಕೆ ಲ್ಯಾಥಮ್ ಸವಾಲೆಸೆದಿದ್ದಾರೆ.

ಶ್ರೀಲಂಕಾ ಪ್ರವಾಸದ ಬಗ್ಗೆ ಹೇಳಿದ್ದೇನು?

ಶ್ರೀಲಂಕಾದಲ್ಲಿ ಫಲಿತಾಂಶವು ನಮ್ಮ ಪರವಾಗಿಲ್ಲದಿದ್ದರೂ, ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಬ್ಯಾಟಿಂಗ್‌ನಲ್ಲಿ ಒಂದು ಇನ್ನಿಂಗ್ಸ್ ಹೊರತುಪಡಿಸಿ ಉಳಿದ ಇನ್ನಿಂಗ್ಸ್‌ಗಳಲ್ಲಿ ನಾವು ಉತ್ತಮ ಪ್ರದರ್ಶನ ನೀಡಿದ್ದೇವೆ. ಟಿಮ್ ಸೌಥಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ ಎಂದು ಟಾಮ್ ಲ್ಯಾಥಮ್ ಹೇಳಿದ್ದಾರೆ.

ನಾವು ಕೊನೆಯ ಬಾರಿಗೆ ಭಾರತ ಪ್ರವಾಸ ಕೈಗೊಂಡಾಗ ಟಿಮ್ ಸೌಥಿ ಅವರು ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಏಳು ವಿಕೆಟ್ ಪಡೆದಿದ್ದರು. ಅವರು ಫಾರ್ಮ್‌ಗೆ ಮರಳುತ್ತಾರೆ ಎಂಬ ವಿಶ್ವಾಸ ನಮಗಿದೆ. ಕಳೆದ ಹಲವಾರು ವರ್ಷಗಳಿಂದ ಅವರು ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ನ್ಯೂಜಿಲೆಂಡ್‌ನ ಅತಿ ಹೆಚ್ಚು ವಿಕೆಟ್ ಟೇಕರ್ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ ಎಂದು ಲ್ಯಾಥಮ್ ಹೊಗಳಿದ್ದಾರೆ.

ಇತ್ತೀಚೆಗೆ ನ್ಯೂಜಿಲೆಂಡ್ ತಂಡ ಶ್ರೀಲಂಕಾ ಕೈಗೊಂಡಿತ್ತು. ಈ ಪ್ರವಾಸದ ವೇಳೆ ಶ್ರೀಲಂಕಾ ವಿರುದ್ಧ ಕಿವೀಸ ಪಡೆ ಹೀನಾಯವಾಗಿ ಸೋಲು ಕಂಡಿತ್ತು. ಟೆಸ್ಟ್ ಸರಣಿ ಸೋಲಿನ ಬಳಿಕ ತಂಡದ ಜವಾಬ್ದಾರಿ ಹೊತ್ತಿದ್ದ ವೇಗದ ಬೌಲರ್ ಟಿಮ್ ಸೌಥಿ ನಾಯಕತ್ವ ತ್ಯಜಿಸಿದ್ದರು. ಇದಾದ ನಂತರ ಟಿಮ್ ಸೌಥಿ ಬದಲಿಗೆ ಟಾಮ್ ಲ್ಯಾಥಮ್ ಅವರನ್ನು ನ್ಯೂಜಿಲೆಂಡ್‌ ಟೆಸ್ಟ್ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಇದೀಗ ಮೂರು ಮಾದರಿಯಲ್ಲೂ ಕಿವೀಸ್ ಪಡೆಯ ಕಮಾಂಡ್ ಟಾಮ್ ಲ್ಯಾಥಮ್ ಅವರ ಕೈಯಲ್ಲಿದೆ.

Story first published: Friday, October 11, 2024, 15:31 [IST]
Other articles published on Oct 11, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+