Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ವಿರುದ್ಧದ ಏಕದಿನ ಸರಣಿಗೂ ಮುನ್ನ ನ್ಯೂಜಿಲೆಂಡ್ ಗೆ ಆಘಾತ

Williamson ruled out of first two India ODIs | India | NewZealand
New Zealand captain Kane Williamson ruled out of first two ODIs against India

ಆಕ್ಲೆಂಡ್, ಫೆಬ್ರವರಿ 04: ಭಾರತ ವಿರುದ್ಧದ ಟಿ20 ಸರಣಿಯಲ್ಲಿ ಹೀನಾಯವಾಗಿ ಸೋತಿರುವ ನ್ಯೂಜಿಲೆಂಡ್ ಗೆ ತಂಡಕ್ಕೆ ಮತ್ತೊಮ್ಮೆ ಆಘಾತವಾಗಿದೆ. ಟಿ20 ಸರಣಿ ವೇಳೆ ಗಾಯಗೊಂಡಿದ್ದ ನಾಯಕ ಕೇನ್ ವಿಲಿಯಮ್ಸನ್ ಅವರು ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ.

ಹ್ಯಾಮಿಲ್ಟನ್ ಟಿ20 ಪಂದ್ಯದ ವೇಳೆ ಎಡಭುಜಕ್ಕೆ ಗಾಯ ಮಾಡಿಕೊಂಡಿರುವ ವಿಲಿಯಮ್ಸನ್ ಅವರಿಗೆ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ.

ಕೇನ್ ಭುಜದ ಎಕ್ಸ್ ರೇ ಸ್ಕ್ಯಾನ್ ಮಾಡಿಸಲಾಗಿದ್ದು, ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ, ಆದರೆ, ನೋವು ಬಾಧಿಸುತ್ತಿದ್ದು, ಕೆಲದಿನಗಳ ವಿಶ್ರಾಂತಿ ಅಗತ್ಯ ಎಂದು ಬ್ಲ್ಯಾಕ್ ಕ್ಯಾಪ್ ತಂಡದ ಫಿಜಿಯೋ ವಿಜಯ್ ವಲ್ಲಭ್ ಹೇಳಿದ್ದಾರೆ.

ಕಿವೀಸ್ ತಂಡದಲ್ಲಿ ಗಾಯಾಳುಗಳ ಸಮಸ್ಯೆ ಎದ್ದು ಕಾಣುತ್ತಿದೆ. ಟ್ರೆಂಟ್ ಬೌಲ್ಟ್(ಕೈ ಗಾಯ), ಮ್ಯಾಟ್ ಹೆನ್ರಿ (ಹೆಬ್ಬೆರಳಿಗೆ ಗಾಯ), ಲಾಕಿ ಫರ್ಗುಸನ್ (ಸ್ನಾಯು ಸೆಳೆತ) ತಂಡದಿಂದ ಹೊರಗುಳಿದಿದ್ದಾರೆ. ವಿಶ್ವಕಪ್ ತಂಡದಲ್ಲಿದ್ದ ಸದಸ್ಯರ ಪೈಕಿ ಅನೇಕರು ಗಾಯಾಳುಗಳ ಪಟ್ಟಿಯಲ್ಲಿದ್ದಾರೆ.

ವಿಲಿಯನ್ಸ್ ಬದಲಿಗೆ ಮಾರ್ಕ್ ಚಾಪ್ಮನ್ ತಂಡ ಸೇರುವ ಸೇರಿದ್ದಾರೆ. 2018ರಲ್ಲಿ ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿರುವ ಚಾಪ್ಮನ್ ಉತ್ತಮ ಪ್ರದರ್ಶನವನ್ನು ನೀಡಿರಲಿಲ್ಲ. 40ರನ್ ಸರಾಸರಿಯಂತೆ 160 ರನ್ ಗಳಿಸಿದ್ದಾರೆ. ಟಾಮ್ ಬ್ಲಂಡೆಲ್ ಕೂಡಾ ತಂಡದಲ್ಲಿ ಸ್ಥಾನ ಪಡೆಯಲು ಕಾದಿದ್ದಾರೆ.

Story first published: Tuesday, February 4, 2020, 11:53 [IST]
Other articles published on Feb 4, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+