For Quick Alerts
ALLOW NOTIFICATIONS  
For Daily Alerts
 

67 ವರ್ಷಗಳ ಹಳೆಯ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್

ಜಿಂಬಾಬ್ವೆ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಭರ್ಜರಿ ಪ್ರದರ್ಶನ ನೀಡಿದೆ. ಬುಲವಾಯೊದ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ತಂಡ ಸೊಗಸಾದ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಮೂಲಕ 67 ವರ್ಷಗಳ ಹಳೆಯ ದಾಖಲೆಯನ್ನು ಅಳಿಸಿ ಹಾಕಿದೆ. ನ್ಯೂಜಿಲೆಂಡ್, ಜಿಂಬಾಬ್ವೆ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಇನಿಂಗ್ಸ್‌ ಹಾಗೂ 359 ರನ್‌ ಜಯ ಸಾಧಿಸಿದೆ.

ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 601 ರನ್ ಆಗಿದ್ದಾಗ ಡಿಕ್ಲೇರ್ ಮಾಡಿಕೊಂಡಿದೆ. ಜಿಂಬಾಬ್ವೆ ಎರಡನೇ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲವಾಗಿ 117 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ನ್ಯೂಜಿಲೆಂಡ್‌ ಎರಡು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ ಸ್ವೀಪ್ ಸಾಧನೆ ಮಾಡಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ, ಇನ್ನಿಂಗ್ಸ್ ಮತ್ತು ರನ್ ವ್ಯತ್ಯಾಸದ ವಿಷಯದಲ್ಲಿ ಇದುವರೆಗಿನ ಮೂರನೇ ಅತಿದೊಡ್ಡ ಗೆಲುವಾಗಿದೆ.

New Zealand Clinches Historic Victory Against Zimbabwe Sets New Test Record

ಕಿವೀಸ್ ತಂಡಕ್ಕಾಗಿ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವೇಗಿ ಜಕಾರಿ ಫೌಲ್ಕಸ್‌ ಅಮೋಘ ಬೌಲಿಂಗ್‌ ದಾಳಿ ನಡೆಸಿ ಅಬ್ಬರಿಸಿದರು. ಇವರು ಇದೇ ಮೊದಲ ಬಾರಿಗೆ ಟೆಸ್ಟ್ ವೃತ್ತಿಜೀವನದ ಮೊದಲ 5 ವಿಕೆಟ್‌ಗಳನ್ನು ಪಡೆದರು.ಇವರಲ್ಲದೆ ಮ್ಯಾಟ್ ಹೆನ್ರಿ ಮತ್ತು ಜಾಕೋಬ್ ಡಫಿ ಸ 2-2 ವಿಕೆಟ್‌ಗಳನ್ನು ಪಡೆದರು. ಇದು ಕಿವೀಸ್ ತಂಡ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಗೆಲುವಾಗಿದೆ. ಅಲ್ಲದೆ ಜಿಂಬಾಬ್ವೆ ತಂಡಕ್ಕೆ ಸೋಲಾಗಿದೆ.

ಟೆಸ್ಟ್ ಕ್ರಿಕೆಟ್‌ ಇತಿಹಾಸದ ಇನಿಂಗ್ಸ್‌ ಮತ್ತು ರನ್‌ಗಳ ಅತಿ ದೊಡ್ಡ ಗೆಲುವು

ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ಇನ್ನಿಂಗ್ಸ್ ಮತ್ತು 579 ರನ್‌
ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 360 ರನ್‌
ಜಿಂಬಾಬ್ವೆ ವಿರುದ್ಧ ನ್ಯೂಜಿಲೆಂಡ್ ಇನ್ನಿಂಗ್ಸ್ ಮತ್ತು 359 ರನ್‌
ಭಾರತ ವಿರುದ್ಧ ವೆಸ್ಟ್ ಇಂಡೀಸ್ ಇನ್ನಿಂಗ್ಸ್ ಮತ್ತು 336 ರನ್‌

ನ್ಯೂಜಿಲೆಂಡ್‌ ತಂಡದ ಪರ ಮೂವರು ಬ್ಯಾಟರ್‌ಗಳು ಶತಕ ಸಾಧನೆ ಮಾಡಿದರು. ಆರಂಭಿಕ ಡೆವೊನ್ ಕಾನ್ವೇ 153 ರನ್‌ಗಳನ್ನು ಗಳಿಸಿದರೆ, ರಚಿನ್ ರವೀಂದ್ರ ಅಜೇಯ 165 ರನ್‌ ಹಾಗೂ ಹೆನ್ರಿ ನಿಕೋಲ್ಸ್ ಕೂಡ 150 ರನ್‌ ಸಿಡಿಸಿದರು. ಡೆವೊನ್ ಕಾನ್ವೇ ಪಂದ್ಯ ಶ್ರೇಷ್ಠ ಪ್ರಶಸ್ತಿ ಹಾಗೂ ಮ್ಯಾಟ್‌ ಹೆನ್ರಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

Story first published: Saturday, August 9, 2025, 19:15 [IST]
Other articles published on Aug 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+