ವಿಶ್ವದ ಸ್ಟಾರ್ ಬ್ಯಾಟರ್‌ಗಳ ಪಟ್ಟಿಯನ್ನು ಒಮ್ಮೆ ಅವಲೋಕಿಸಿದಾಗ, ಆ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 36 ವರ್ಷದ ಕೇನ್ ಇನ್ನು ಮುಂದೆ ಚುಟುಕು ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸುವುದಿಲ್ಲ. ಅವರು ಕೊನೆಯ ಬಾರಿಗೆ ಟಿ20 ಕ್ರಿಕೆಟ್‌ನಲ್ಲಿ 2024 ರಲ್ಲಿ ಕೊನೆಯ ಬಾರಿಗೆ ಅಂಗಳವನ್ನು ಪ್ರವೇಶಿಸಿದ್ದರು. ಅವರು ಕೆಲ ಸಮಯದಿಂದ ರನ್ ಗಳಿಸುವಲ್ಲಿ ವಿಫಲರಾಗಿದ್ದರು.
ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸುವ ಉದ್ದೇಶದಿಂದ ಕೇನ್ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇವರು ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಏಕದಿನ ಸರಣಿಯನ್ನು ಸಹ ಆಡುತ್ತಿಲ್ಲ ಎಂದು ತಿಳಿದು ಬಂದಿದೆ. ಟಿ20 ಸ್ವರೂಪದಿಂದ ಹಿಂದೆ ಸರಿಯಲು ಇದು ಪರ್ಫೆಕ್ಟ್ ಟೈಮ್ ಎಂದು ಅವರು ಹೇಳಿದರು.

ಟಿ20 ಕ್ರಿಕೆಟ್ ನೀಡಿರುವ ನೆನಪು ಹಾಗೂ ಅನುಭವಕ್ಕೆ ನಾನು ಕೃತಜ್ಞ. ಟಿ20 ಕ್ರಿಕೆಟ್‌ನತ್ತ ಹಲವು ಯುವ ಯುವಕರು ಮನೆ ಮಾಡಿದ್ದಾರೆ. ಮತ್ತು ಮೈದಾನದ ಹೊರಗೆ ನಾನು ತಂಡಕ್ಕೆ ಸಪೋರ್ಟ್ ಮಾಡುವೆ. ನನಗೆ ಈ ತಂಡದ ಬಗ್ಗೆ ಸಾಕಷ್ಟು ಪ್ರೀತಿ ಇದೆ. ನನಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದನ್ನು ಪ್ರೀತಿಸುತ್ತೇನೆ. ನಾನು ನ್ಯೂಜಿಲೆಂಡ್ ಕ್ರಿಕೆಟ್‌ನೊಂದಿಗೆ ಸಂವಹನ ನಡೆಸುವುದನ್ನು ಮುಂದುವರಿಸುತ್ತೇನೆ. ಮಿಚೆಲ್ ಸ್ಯಾಂಟ್ನರ್ ಒಬ್ಬ ಉತ್ತಮ ನಾಯಕ. ಅವರು ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾರೆ ಎಂದು ಕೇನ್ ವಿಲಿಯಮ್ಸನ್ ತಿಳಿಸಿದ್ದಾರೆ.
ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರರಲ್ಲಿ ಒಬ್ಬರು. ಇವರ ಮುಂದಾಳತ್ವದಲ್ಲಿ ನ್ಯೂಜಿಲೆಂಡ್ ಸ್ಥಿರ ಪ್ರದರ್ಶನ ನೀಡಿದೆ. ಇವರು 75 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಈ ವೇಳೆ 39 ಬಾರಿ ತಂಡವನ್ನು ಗೆಲುವಿನ ಗೆರೆ ದಾಟಿಸಿದ್ದಾರೆ. ಇವರ ಮುಂದಾಳತ್ವದಲ್ಲೇ ತಂಡ ಟಿ20 ವಿಶ್ವಕಪ್‌ನಲ್ಲಿ ಒಮ್ಮೆ ಸೆಮಿಫೈನಲ್ ಹಾಗೂ ಫೈನಲ್‌ಗೆ ಅರ್ಹತೆ ಪಡೆದಿತ್ತು.
ಕೇನ್ ವಿಲಿಯಮ್ಸನ್ ಸುಮಾರ 13 ವರ್ಷಗಳ ಕಾಲ ದೇಶವನ್ನು ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ಇವರು 2011ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಇವರು ಟಿ20 ಸ್ವರೂಪದಲ್ಲಿ ನ್ಯೂಜಿಲೆಂಡ್ ಪರ 93 ಪಂದ್ಯಗಳನ್ನು ಆಡಿದ್ದು 33ರ ಸರಾಸರಿಯಲ್ಲಿ 2575 ರನ್ ಕಲೆ ಹಾಕಿದ್ದಾರೆ.