Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ನಲ್ಲಿ ಆಡಲು ನ್ಯೂಜಿಲೆಂಡ್‌ನ ಪ್ರಮುಖ 6 ಕ್ರಿಕೆಟಿಗರು ಸಿದ್ಧ

New Zealand Cricket will issue NOCs to all IPL-bound Black Caps

ವೆಲ್ಲಿಂಗ್ಟನ್, ಜುಲೈ 23: ನಗದು ಶ್ರೀಮಂತ ಕ್ರಿಕೆಟ್ ಟೂರ್ನಿಯಾದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ನ್ಯೂಜಿಲೆಂಡ್‌ನ ಪ್ರಮುಖ 6 ಕ್ರಿಕೆಟಿಗರು ಸಿದ್ಧರಿದ್ದಾರೆ. ಅವರಿಗೆ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ನೀಡಲು ನ್ಯೂಜಿಲೆಂಡ್ ಕ್ರಿಕೆಟ್ ಸಮ್ಮತಿಸಿದೆ. ಆದರೆ ಐಪಿಎಲ್ ವೇಳೆ ಆರೋಗ್ಯ ಸುರಕ್ಷತೆಯ ಜವಾಬ್ದಾರಿ ಸಂಪೂರ್ಣವಾಗಿ ಆಟಗಾರರ ಮೇಲಿರಲಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಹೇಳಿದೆ.

ಜೇಮ್ಸ್ ನೀಶಮ್ (ಕಿಂಗ್ಸ್ XI ಪಂಜಾಬ್), ಲಾಕಿ ಫಾರ್ಗುಸನ್ (ಕೋಲ್ಕತ್ತಾ ನೈಟ್ ರೈಡರ್ಸ್), ಮಿಚೆಲ್ ಮೆಕ್ಲೆನಾಘನ್ ಮತ್ತು ಟ್ರೆಂಟ್ ಬೌಲ್ಟ್ (ಮುಂಬೈ ಇಂಡಿಯನ್ಸ್), ಕೇನ್ ವಿಲಿಯಮ್ಸನ್ (ಸನ್ ರೈಸರ್ಸ್ ಹೈದರಾಬಾದ್) ಇವಿಷ್ಟು ಮಂದಿ ಐಪಿಎಲ್‌ನಲ್ಲಿ ಆಡಲಿರುವ ಕಿವೀಸ್ ಪ್ರಮುಖ ಆಟಗಾರರು.

ಐಪಿಎಲ್ ವಿಚಾರದಲ್ಲಿ, ಸಂಬಂಧಿಸಿದ ಆಟಗಾರರಿಗೆ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಅನ್ನು ನ್ಯೂಜಿಲೆಂಡ್ ಕ್ರಿಕೆಟ್ ನೀಡಲಿದೆ. ಆದರೆ ಟೂರ್ನಿಯಲ್ಲಿ ಭಾಗವಹಿಸೋ ನಿರ್ಧಾರ ಸಂಪೂರ್ಣವಾಗಿ ಆಟಗಾರರಿಗೆ ಬಿಟ್ಟಿದ್ದು,' ಎಂದು ನ್ಯೂಜಿಲೆಂಡ್‌ ಕ್ರಿಕೆಟ್‌ನ ವಕ್ತಾರ ರಿಚರ್ಡ್ ಬೂಕ್ ಪಿಟಿಐಗೆ ಇ-ಮೇಲ್ ಮೂಲಕ ತಿಳಿಸಿದ್ದಾರೆ.

ಈ ವರ್ಷದ ಐಪಿಎಲ್ ಟೂರ್ನಿ ಯುಎಇಯಲ್ಲಿ ಸೆಪ್ಟೆಂಬರ್-ನವೆಂಬರ್ ಮಧ್ಯೆ ನಡೆಯುವ ನಿರೀಕ್ಷೆಯಿದೆ. ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಟಿ20 ವಿಶ್ವಕಪ್ ಅನ್ನು ಐಸಿಸಿ ಮುಂದೂಡಲಾಗಿರುವುದರಿಂದ ಐಪಿಎಲ್‌ಗೆ ವೇಳಾಪಟ್ಟಿ ನಿರ್ಧರಿಸಲು ಬಿಸಿಸಿಐಗೆ ಅನುಕೂಲವಾಗಿದೆ. ಆದರೆ ಐಪಿಎಲ್ ಆಡಳಿತ ಮಂಡಳಿಯ ಸಭೆಯ ಬಳಿಕ ಈ ಬಗ್ಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.

Story first published: Friday, July 24, 2020, 11:05 [IST]
Other articles published on Jul 24, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+