ವಿಭಿನ್ನ ಶಾಟ್‌ನಿಂದ ಐಸಿಸಿ ಗಮನ ಸೆಳೆದ ಕಿವೀಸ್ ಬ್ಯಾಟ್ಸ್‌ಮನ್: ವೀಡಿಯೋ

ವೆಲ್ಲಿಂಗ್ಟನ್, ನವೆಂಬರ್ 28: ನ್ಯೂಜಿಲೆಂಡ್‌ನ ಲಿಂಕಾಲ್ನ್ ಯೂನಿವರ್ಸಿಟಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಬುಧವಾರ (ನೆವಂಬರ್ 27) ನಡೆದ ದ ಫೋರ್ಡ್ ಟ್ರೋಫಿ ಟೂರ್ನಿಯ ಆಕ್ಲೆಂಡ್ ಮತ್ತು ಒಟಾಗೊ ನಡುವಿನ ಪಂದ್ಯದಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್, ವಿಭಿನ್ನ ಶಾಟ್‌ಗಾಗಿ ಗಮನ ಸೆಳೆದಿದ್ದಾರೆ.
ಆಕ್ಲೆಂಡ್ ತಂಡದಲ್ಲಿದ್ದ ಗ್ಲೆನ್ ಫಿಲಿಪ್ಸ್, ತಂಡದ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ್ದರು. ಉತ್ತಮ ಫಾರ್ಮ್‌ನಲ್ಲಿರುವ ಫಿಲಿಪ್ಸ್ ಸ್ಫೋಟಕ ಶತಕದಾಟ ಆಕ್ಲೆಂಡ್‌ಗೆ ಗೆಲುವಿಗೂ ನೆರವಾಯಿತು. ಆಟದ ವೇಳೆ ಫಿಲಿಪ್ಸ್ ಅವರ ವಿಭಿನ್ನ ಶಾಟ್, ಐಸಿಸಿ ಗಮನ ಸೆಳೆದಿದೆ. ಐಸಿಸಿ ಆ ವೀಡಿಯೋವನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ.
ಆಕ್ಲೆಂಡ್ ಇನ್ನಿಂಗ್ಸ್‌ನಲ್ಲಿ ಗ್ಲೆನ್ ಫಿಲಿಪ್ಸ್ 135 ಎಸೆತಗಳಿಗೆ 156 ರನ್ ಸಿಡಿಸಿದ್ದರು. ಇದರಲ್ಲಿ 16 ಫೋರ್‌ಗಳು, 3 ಸಿಕ್ಸರ್‌ಗಳೂ ಸೇರಿದ್ದವು. ಫಿಲಿಪ್ಸ್ ಬ್ಯಾಟಿಂಗ್ ವೇಳೆ ಭಿನ್ನ ಶಾಟ್ ಮೂಲಕ ಸಿಕ್ಸ್ ಬಾರಿಸಿದ ವೀಡಿಯೋವನ್ನು ಟ್ವಿಟರ್‌ನಲ್ಲಿ ಹಾಕಿರುವ ಐಸಿಸಿ, ಈ ಶಾಟ್‌ಗೊಂದು ಹೆಸರು ನೀಡಿ ಎಂದು ಕ್ರಿಕೆಟ್ ಅಭಿಮಾನಿಗಳಲ್ಲಿ ಹೇಳಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಕ್ಲೆಂಡ್, ಮಾರ್ಟಿನ್ ಗಪ್ಟಿಲ್ 117, ಗ್ಲೆನ್ ಫಿಲಿಪ್ಸ್ 156 ರನ್‌ನೊಂದಿಗೆ 50 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 310 ರನ್ ಮಾಡಿತ್ತು. ಗುರಿ ಬೆಂಬತ್ತಿದ ಒಟಾಗೊ ತಂಡ, ನೀಲ್ ಬ್ರೂಮ್ 67, ಮಿಚ್ ರೆನ್ವಿಕ್ 31, ನಾಥನ್ ಜಿ ಸ್ಮಿತ್ 43 ರನ್‌ನೊಂದಿಗೆ 40.2 ಓವರ್‌ನಲ್ಲಿ ಸರ್ವ ಪತನ ಕಂಡು 213 ರನ್ (97 ರನ್ ಹಿನ್ನಡೆ) ಬಾರಿಸಿ ಶರಣಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications