ವಿರಾಟ್ ಮೇಲೆ ಜಾರಾ ಜೇಟ್ಲಿ ಕ್ರಷ್... ಕೊಹ್ಲಿ ಸಿಕ್ಕರೆ ಹೀಗೆ ಮಾಡ್ತಾರಂತೆ!
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, ವಿಶ್ವದಲ್ಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಆಟದ ಶೈಲಿಗೆ ಎಲ್ಲರೂ ಫಿದಾ. ಯಾವುದೇ ಅಂಗಳ ಇರಲಿ, ಯಾವುದೇ ಬೌಲರ್ ಇರಲಿ, ಇವರು ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ಇನಿಂಗ್ಸ್ ಬೆಳೆಸುತ್ತ ಸಾಗುತ್ತಾರೆ.
ವಿರಾಟ್ ಬ್ಯಾಟಿಂಗ್ ಶೈಲಿ ಕಂಡು ಅಭಿಮಾನಿಗಳು, ಮನಸೋತಿದ್ದು, ಅಷ್ಟೇ ಅಲ್ಲ, ಅವರ ಫಿಟ್ನೆಸ್‌ಗೂ ಮಾರು ಹೋಗಿದ್ದಾರೆ. ವಿರಾಟ್ ಕೊಹ್ಲಿ ಫಿಟ್ನೆಸ್ ಹಲವು ಕ್ರೀಡಾ ಪಟುಗಳಿಗೆ ಮಾದರಿ. ಹೀಗಾಗಿ ವಿರಾಟ್, ವಿಶ್ವ ಕ್ರೀಡಾ ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿರುವ ಆಟಗಾರ. ಇವರಿಗೆ ಅದೆಷ್ಟೋ ಜನ ಇಷ್ಟ ಪಡುತ್ತಾರೆ. ಇನ್ನು ವಿದೇಶಿ ಆಟಗಾರ್ತಿಯರು ಸಹ ಅವರ ಆಟವನ್ನು ಪ್ರೀತಿಸುತ್ತಾರೆ. ಇವರಿಗೆ ನ್ಯೂಜಿಲೆಂಡ್ ಯುವ ಆಟಗಾರ್ತಿ ಜಾರಾ ಜೇಟ್ಲಿ ಮನಸೋತಿದ್ದಾರೆ.

ಕಿವೀಸ್ ಆಟಗಾರ್ತಿ ಹೇಳಿದ್ದೇನು?
ವಿರಾಟ್ ಕೊಹ್ಲಿ ಅವರಿಗೆ ವಿಶ್ವದಲ್ಲೆಡೆ ಮಹಿಳಾ ಅಭಿಮಾನಿಗಳು ಇದ್ದಾರೆ. ಈ ಸಾಲಿಗೆ ಈ ನ್ಯೂ ಎಂಟ್ರಿ ನ್ಯೂಜಿಲೆಂಡ್ ಸ್ಪಿನ್ ಬೌಲರ್ ಜಾರಾ ಜೇಟ್ಲಿ. ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ವಿರಾಟ್ ಅಂದರೆ ತಮಗೆ ಇಷ್ಟ ಎಂದು ತಿಳಿಸಿದ್ದಾರೆ. ಅವರು ಸಿಕ್ಕರೆ ಅವರೊಂದಿಗೆ ಫೋಟೋ ತೆಗೆಸಿಕೊಂಡು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕುತ್ತೇನೆ ಎಂದಿದ್ದಾರೆ.
ನ್ಯೂಜಿಲೆಂಡ್ ದೇಶೀಯ ಕ್ರಿಕೆಟ್‌ನಲ್ಲಿ ವೆಲ್ಲಿಂಗ್‌ಟನ್ ಬ್ಲೇಜ್‌ಗಾಗಿ ಆಡುತ್ತಿರುವ ಜಾರಾ, ಕೊಹ್ಲಿಯೊಂದಿಗೆ ಫೋಟೋ ಕ್ಲಿಕ್ ಮಾಡುವ ಕನಸು ಇದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅವಕಾಶ ಸಿಕ್ಕರೆ ಅವರಿಗೆ ಬೌಲಿಂಗ್ ಸಹ ಮಾಡುವ ಆಸೆ ಇದೆ ಎಂದು ತಿಳಿಸಿದ್ದಾರೆ. ಅಲ್ಲದೆ ಮಹಿಳಾ ತಂಡದಲ್ಲಿ ಎಲ್ಲಿಸಾ ಪೆರಿ ಆಟ ತುಂಬ ಇಷ್ಟ ಎಂದು ಬಣ್ಣಿಸಿದ್ದಾರೆ.

ದೇಶೀಯ ಟೂರ್ನಿಯಲ್ಲಿ ಸದ್ದು
22 ವರ್ಷದ ಜಾರಾ ಸುರ ಸುಂದರಿ. ಜಾರಾ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನು ಎಂಟ್ರಿ ನೀಡಿಲ್ಲ. ದೇಶೀಯ ಟುರ್ನಿಗಳಲ್ಲಿ ಅವರು ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಮಹಿಳಾ ಸೂಪರ್ ಸ್ಮ್ಯಾಶ್‌ನ ಟೂರ್ನಿಯಲ್ಲಿ ವೆಲ್ಲಿಂಗ್ಟನ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಇವರ ಪಾತ್ರ ಮುಖ್ಯ. ಈ ಟೂರ್ನಿಯಲ್ಲಿ ಜಾರಾ 10 ಪಂದ್ಯಗಳಲ್ಲಿ 5.59 ಎಕಾನಮಿಯೊಂದಿಗೆ 9 ವಿಕೆಟ್ ಕಬಳಿಸಿದ್ದಾರೆ.
ರಜೆಯ ಮಜೆಯಲ್ಲಿ ವಿರಾಟ್
ವಿರಾಟ್ ಕೊಹ್ಲಿ ಸದ್ಯ ರಜೆಯ ಮಜೆಯಲ್ಲಿದ್ದಾರೆ. ಶ್ರೀಲಂಕಾ ಪ್ರವಾಸ ಮುಗಿದ ಬಳಿಕ ಅವರು ಕುಟುಂಬಸ್ಥರ ಜೊತೆ ಸಮಯವನ್ನು ಕಳೆಯುತ್ತಿದ್ದಾರೆ. ವಿರಾಟ್ ಇನ್ನು ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ತಂಡವನ್ನು ಸೇರಿಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಐದು ವಾರಗಳ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿ ಎಲ್ಲ ಆಟಗಾರರಿಗೆ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವಂತೆ ಸೂಚಿಸುತ್ತು. ಆದರೆ ಇದಕ್ಕೆ ಒಪ್ಪದ ಕೊಹ್ಲಿ ರಜೆಯನ್ನು ಎಂಜಾಯ ಮಾಡುತ್ತಿದ್ದಾರೆ. ಸೆಪ್ಟಂಬರ್ 19ರಿಂದ ತವರಿನಲ್ಲಿ ಬಾಂಗ್ಲಾ ವಿರುದ್ಧ ಸರಣಿಗಳು ಆರಂಭವಾಗುತ್ತವೆ. ಈ ಬಳಿಕ ಸಾಲು ಸಾಲು ಸರಣಿಗಳು ಆರಂಭವಾಗಲಿದ್ದು, ವಿರಾಟ್ ತಂಡದಲ್ಲಿ ಇರುವುದು ಬಹು ಮುಖ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications