ಭಾರತೀಯರ ಜೊತೆ ಯುಕೆಗೆ ತೆರಳಲಿದ್ದಾರೆ ನ್ಯೂಜಿಲೆಂಡ್ ಆಟಗಾರರು

ನವದೆಹಲಿ: ಸದ್ಯ ನಡೆಯುತ್ತಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಡುತ್ತಿರುವ ನ್ಯೂಜಿಲೆಂಡ್ ಆಟಗಾರರು ಐಪಿಎಲ್ ಬಳಿಕ ಭಾರತದಿಂದ ನ್ಯೂಜಿಲೆಂಡ್‌ಗೆ ಹೋಗಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವುದರಿಂದ ಭಾರತದಿಂದ ಬರುವ ಯಾವುದೇ ವ್ಯಕ್ತಿಗೆ ನ್ಯೂಜಿಲೆಂಡ್ ಒಳಗೆ ಪ್ರವೇಶ ಇಲ್ಲದಾಗಿದೆ.
ಕೊರೊನಾ ಪ್ರಕರಣಗಳು ಮಿತಿ ಮೀರುತ್ತಿರುವ ದೇಶ ಭಾರತದಲ್ಲಿ ಐಪಿಎಲ್‌ನಲ್ಲಿ ಪಾಲ್ಗೊಂಡ ಕಾರಣಕ್ಕೆ ನ್ಯೂಜಿಲೆಂಡ್ ಆಟಗಾರರಿಗೆ ತಮ್ಮ ದೇಶಕ್ಕೆ ಹೋಗಲು ಅವಕಾಶ ಇಲ್ಲದ ವಿಚಿತ್ರ ಸಂದಿಗ್ಥ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕಿವೀಸ್ ಕ್ರಿಕೆಟರ್ಸ್‌ಗೆ ಸಮಾಧಾನಕರ ಸಂಗತಿಯೊಂದಿದೆ.
ಐಪಿಎಲ್ ಬಳಿಕ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಜೂನ್‌ನಲ್ಲಿ ಯುನೈಟೆಡ್ ಕಿಂಗ್ಡಮ್‌ನಲ್ಲಿ ನಡೆಯಲಿವೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್‌ನಲ್ಲಿ ಸೆಣಸಾಡಲಿವೆ. ಹೀಗಾಗಿ ಐಪಿಎಲ್ ಬಳಿಕ ನ್ಯೂಜಿಲೆಂಡ್ ಮತ್ತು ಭಾರತೀಯ ಆಟಗಾರರು ಜೊತೆಯಾಗಿ ಯುಕೆಗೆ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ.
'ಕಿವೀಸ್ ಆಟಗಾರರು ಇಲ್ಲಿಗೆ ಬಂದು ಎರಡು ವಾರಗಳ ಐಸೊಲೇಶನ್ ಪಾಲಿಸಿ ಮತ್ತೆ ಇಂಗ್ಲೆಂಡ್‌ಗೆ ಹೋಗೋದು ಆಗಿಹೋಗುವ ಸಂಗತಿಯಲ್ಲ. ಹೀಗಾಗಿ ಭಾರತದಲ್ಲಿ ಐಪಿಎಲ್ ರೌಂಡರ್ ರಾಬಿನ್ ಹಂತ ಅಥವಾ ಫೈನಲ್ ಮುಗಿದ ಬಳಿಕ ಅಲ್ಲಿಂದಲೇ ಇಂಗ್ಲೆಂಡ್‌ಗೆ ತೆರಳೋದು ಉತ್ತಮ,' ಎಂದು ನ್ಯೂಜಿಲೆಂಡ್ ಕ್ರಿಕೆಟ್ ಪ್ಲೇಯರ್ಸ್ ಅಸೋಸಿಯೇಶನ್‌ನ ಮುಖ್ಯ ನಿರ್ವಹಣಾಧಿಕಾರಿ ಹೀತ್ ಮಿಲ್ಸ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications