ಯುಎಇ ವಿರುದ್ಧ ನ್ಯೂಜಿಲೆಂಡ್‌ಗೆ 10 ವಿಕೆಟ್ ಭರ್ಜರಿ ಜಯ
ಚೆನ್ನೈ: ಆರಂಭಿಕ ಆಟಗಾರರಾದ ಫಿನ್ ಅಲೆನ್ ಹಾಗೂ ಟಿಮ್ ಸಿಫರ್ಟ್ ಅವರ ಭರ್ಜರಿ ಆಟದ ನೆರವಿನಿಂದ ನ್ಯೂಜಿಲೆಂಡ್ ಟಿ20 ವಿಶ್ವಕಪ್‌ನ "ಡಿ" ಗುಂಪಿನ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು 10 ವಿಕೆಟ್‌ಗಳಿಂದ ಮಣಿಸಿ, ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದೆ. ಇನ್ನೊಂದು ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ನಮಿಬಿಯಾ ತಂಡವನ್ನು ಮಣಿಸಿತು.
174 ರನ್‌ಗಳ ಗುರಿಯನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡದ ಆರಂಭಿಕರು ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು ಪವರ್ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಯುಎಇ ಹಾಕಿಕೊಂಡಿದ್ದ ತಂತ್ರವನ್ನು ಬುಡಮೇಲು ಮಾಡಿದ ಜೋಡಿ ತಂಡಕ್ಕೆ ಆರ್ಭಟಿಸಿತು. ಈ ಜೋಡಿ ಪವರ್ ಪ್ಲೇನಲ್ಲಿ 78 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.

ಸಿಫರ್ಟ್ ಹಾಗೂ ಅಲೆನ್ ಜೋಡಿ 175 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿತು. ಟಿಮ್ ಸಿಫರ್ಟ್ 12 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 89 ರನ್ ಬಾರಿಸಿದರೆ, ಫಿನ್ ಅಲೆನ್ 5 ಬೌಂಡರಿ, 5 ಸಿಕ್ಸರ್ ಸಹಾಯದಿಂದ ಅಜೇಯ 84 ರನ್ ಸಿಡಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 15.2 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 175 ರನ್ ಸೇರಿಸಿ ಆರ್ಭಟಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಯುಎಇ ತಂಡದ ಆರಂಭ ಕಳಪೆಯಾಗಿತ್ತು. 12 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಾಯಕ ಮುಹಮ್ಮದ್ ವಸೀಂ ಹಾಗೂ ಅಲಿಶನ್ ಶರಾಫು ಜೋಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ 77 ಎಸೆತಗಳಲ್ಲಿ 107 ರನ್ ಸಿಡಿಸಿದರು. ಈ ವೇಳೆ ಅಲಿಶನ್ ಶರಾಫ್ 47 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 55 ರನ್ ಬಾರಿಸಿ ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಬೌಂಡರಿ ಲೈನ್‌ನಲ್ಲಿ ಹಿಡಿದ ಉತ್ತಮ ಕ್ಯಾಚ್‌ಗೆ ಬಲಿಯಾದರು.
ವಸೀಂ ಅರ್ಧಶತಕ
ನಾಯಕ ಮುಹಮ್ಮದ್ ವಸೀಂ 45 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 66 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಮಧ್ಯಮ ಕ್ರಮಾಂಕದಲ್ಲಿ ಮಯಾಂಕ್ ಕುಮಾರ್ 21 ರನ್ ಸಿಡಿಸಿ ತಂಡಕ್ಕೆ ನೆರವಾದರು. ಅಂತಿಮವಾಗಿ ಯುಎಇ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 173 ರನ್ ಸೇರಿಸಿತು.
ಗೆಲುವು ಸಾಧಿಸಿದ ನೆದರ್ಲ್ಯಾಂಡ್ಸ್
ಇದಕ್ಕು ಮೊದಲು ನಡೆದ "ಎ" ಗುಂಪಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನಮೀಬಿಯಾ ತಂಡದ ಆರಂಭಿಕ ಆಟಗಾರ ಲೌರೆನ್ ಸ್ಟೀನ್‌ಕ್ಯಾಂಪ್ ರನ್ ಗಳಿಸಲು ವಿಫಲರಾದರು. ಎರಡನೇ ವಿಕೆಟ್‌ಗೆ ಜಾನ್ ಫ್ರೈಲಿಂಕ್ (30) ಹಾಗೂ ಜಾನ್ ನಿಕೋಲ್ ಲೋಫ್ಟಿ-ಈಟನ್ ಜೋಡಿ 50 ರನ್‌ಗಳ ಜೊತೆಯಾಟವನ್ನು ನೀಡಿತು. ಜಾನ್ ನಿಕೋಲ್ 1 ಬೌಂಡರಿ, 2 ಸಿಕ್ಸರ್ ಸಹಾಯದಿಂದ 42 ರನ್ ಸಿಡಿಸಿದರು. ಉಳಿದಂತೆ ಗೆರ್ಹಾರ್ಡ್ ಎರಾಸ್ಮಸ್ 18, ಜೆಜೆ ಸ್ಮಿತ್ 22 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ನಮೀಬಿಯಾ 8 ವಿಕೆಟ್‌ಗೆ 156 ರನ್ ಸೇರಿಸಿತು.

ನೆದರ್ಲ್ಯಾಂಡ್ಸ್ ತಂಡದ ಆರಂಭಿಕರಾದ ಮೈಕೆಲ್ ಲೆವಿಟ್ (28) ಮತ್ತು ಮ್ಯಾಕ್ಸ್ ಒ'ಡೌಡ್ (7) ರನ್ ಕಲೆ ಹಾಕುವಲ್ಲಿ ವಿಫಲರಾದರು. 46 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ತಂಡಕ್ಕೆ ಬಾಸ್ ಡಿ ಲೀಡೆ ಮತ್ತು ಕಾಲಿನ್ ಅಕರ್ಮನ್ (32) ನೆರವಾದರು. ಈ ಜೋಡಿ 70 ರನ್ ಸೇರಿಸಿತು. ಬಾಸ್ ಡಿ ಲೀಡೆ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 72 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ನೆದರ್ಲ್ಯಾಂಡ್ಸ್ ತಂಡ 18 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಸೇರಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications