Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SL vs NZ Test: ಗೆಲುವಿನ ಕನಸಿನಲ್ಲಿ ಲಂಕಾ: ಸಂಕಷ್ಟದಲ್ಲಿ ಕಿವೀಸ್

ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ನಡುವಣ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ತಂಡ, ಪ್ರವಾಸಿ ತಂಡವನ್ನು ಕಟ್ಟಿ ಹಾಕಿದೆ. ಮೊದಲ ಇನಿಂಗ್ಸ್‌ನಲ್ಲಿ ಕಿವೀಸ್‌ ತಂಡವನ್ನು 88 ರನ್‌ಗಳಿಗೆ ಆಲೌಟ್ ಮಾಡಿದ್ದ ಲಂಕಾ, ಫಾಲೋ ಆನ್‌ ನೀಡಿದ್ದು, ಎರಡನೇ ಇನಿಂಗ್ಸ್‌ನಲ್ಲೂ ಐದು ವಿಕೆಟ್‌ ಪಡೆದು ಬೀಗಿದೆ.

ಈ ಪಂದ್ಯವನ್ನು ಗೆಲ್ಲುವುದು ನ್ಯೂಜಿಲೆಂಡ್ ತಂಡಕ್ಕೆ ಕಷ್ಟ. ಕಿವೀಸ್‌ ತಂಡ ಇದು ಎರಡನೇ ಬಾರಿ 500ಕ್ಕೂ ಹೆಚ್ಚು ರನ್‌ಗಳನ್ನು ಹಿನ್ನಡೆಯೊಂದಿಗೆ ಫಾಲೋಆನ್‌ ಹೇರಲ್ಪಟಿದೆ. ಶನಿವಾರ ಮೂರನೇ ದಿನದಾಟವನ್ನು 2 ವಿಕೆಟ್‌ಗೆ 22 ರನ್‌ಗಳಿಂದ ಮೊದಲ ಇನಿಂಗ್ಸ್‌ ಮುಂದುವರೆಸಿದ ಕಿವೀಸ್ 88 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 5 ವಿಕೆಟ್‌ಗೆ 199 ರನ್‌ ಸೇರಸಿದ್ದು, ಭಾನುವಾರ ನಾಲ್ಕನೇ ದಿನದಾಟಕ್ಕೆ ಟಾಮ್ ಬ್ಲಂಡೆಲ್ (ಅಜೇಯ 47) ಹಾಗೂ ಗ್ಲೇನ್‌ ಫಿಲಿಪ್ಸ್‌ (ಅಜೇಯ 32) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

New Zealand Faces Tough Challenge After Follow-On Against Sri Lanka in Second Test at Galle

ಕಿವೀಸ್ ಕಳಪೆ ಬ್ಯಾಟಿಂಗ್

ರಚಿನ್ ರವಿಂದ್ರ ಹಾಗೂ ಡೆರಿಲ್ ಮಿಚೆಲ್‌, ಮಿಚೆಲ್ ಸ್ಯಾಂಟ್ನರ್ ಡಬಲ್‌ ಡಿಜಿಟ್‌ ಮುಟ್ಟಿದ್ದು ಬಿಟ್ಟರೆ ಬೇರೆ ಯಾವ ಆಟಗಾರರು ಈ ಸಾಧನೆ ಮಾಡಲಿಲ್ಲ. ಮಿಚೆಲ್ ಸ್ಯಾಂಟ್ನರ್‌ 29 ರನ್‌ಗಳಿಸಿದ್ದೇ ಕಿವೀಸ್ ತಂಡದ ಪರ ಮೊದಲ ಇನಿಂಗ್ಸ್‌ನಲ್ಲಿ ದೊಡ್ಡ ಸಾಧನೆ ಆಗಿದೆ.

ಅಶ್ವಿನ್ ದಾಖಲೆಯ ಸಮಕ್ಕೆ ನಿಂತ ಪ್ರಭಾತ್

ಲಂಕಾ ತಂಡದ ಪರ ಪ್ರಭಾತ್ ಜಯಸೂರ್ಯ ಬಿಗುವಿನ ದಾಳಿ ನಡೆಸಿ ಗಮನ ಸೆಳೆದರು. ಇವರು 18 ಓವರ್‌ ಬೌಲ್‌ ಮಾಡಿ 42 ರನ್‌ ನೀಡಿ 6 ವಿಕೆಟ್‌ ಕಬಳಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಇದುವರೆಗೆ 16 ಪಂದ್ಯಗಳನ್ನು ಪ್ರಭಾತ್ ಜಯಸೂರ್ಯ ಆಡಿದ್ದು, ಇವರು ಇನ್ನಿಂಗ್ಸ್‌ನಲ್ಲಿ 9 ಬಾರಿ ಐದು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ. ಈ ವಿಷಯದಲ್ಲಿ ಜಯಸೂರ್ಯ ಅವರು ರವಿಚಂದ್ರನ್ ಅಶ್ವಿನ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಶ್ವಿನ್‌ ತಮ್ಮ ವೃತ್ತಿಜೀವನದ ಮೊದಲ 16 ಟೆಸ್ಟ್ ಪಂದ್ಯಗಳಲ್ಲಿ 9 ಬಾರಿ 5 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಜಯಸೂರ್ಯ ಅವರು ಭಾರತದ ಮಾಜಿ ಆಟಗಾರ ಸುಭಾಷ್ ಗುಪ್ತೆ ಅವರ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಗಾಲೆಯಲ್ಲಿ ನಡೆಯುತ್ತಿರುವ ಈ ಸರಣಿಯ ಎರಡನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಲಂಕಾ ತಂಡ ಗೆಲುವಿನ ನಗೆ ಬೀರಬಹುದು. ಎರಡನೇ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ನ್ಯೂಜಿಲೆಂಡ್ ತಂಡಕ್ಕೆ ಇನ್ನು 315 ರನ್‌ಗಳ ಅವಶ್ಯಕತೆ ಇದೆ. ಎರಡನೇ ಇನಿಂಗ್ಸ್‌ನಲ್ಲಿ ಭರವಸೆಯ ಆಟಗಾರರಾದ ಟಾಮ್ ಬ್ಲಂಡೆಲ್ ಹಾಗೂ ಹಾಗೂ ಗ್ಲೇನ್‌ ಫಿಲಿಪ್ಸ್‌ ಜವಾಬ್ದಾರಿಯುತ ಆಟವನ್ನು ಆಡಬೇಕಿದೆ. ಅಲ್ಲದೆ ಎರಡನೇ ಇನಿಂಗ್ಸ್‌ನಲ್ಲಿ ಕಿವೀಸ್ ಅಚ್ಚರಿಯ ಫಲಿತಾಂಶ ನೀಡಬೇಕಿದೆ.

Story first published: Saturday, September 28, 2024, 23:59 [IST]
Other articles published on Sep 28, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+