Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

WTC ಫೈನಲ್ ಹಾಗೂ ಟೆಸ್ಟ್ ಸರಣಿಗೆ ಇಂಗ್ಲೆಂಡ್‌ಗೆ ಹಾರಿದ ನ್ಯೂಜಿಲೆಂಡ್ ತಂಡ

New Zealand fly for UK for WTC final and test series against England

ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶನಿವಾರ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದೆ. ಈ ಪ್ರವಾಸದಲ್ಲಿ ಕೀವಿಸ್ ಪಡೆ ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಭಾರತದ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಭಾಗಿಯಾಗಲಿದೆ.

ಮೊದಲಿಗೆ ಇಂಗ್ಲೆಂಡ್ ತಂಡದ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದ್ದು ಈ ಪಂದ್ಯ ಜೂನ್ 2 ರಿಂದ ಆರಂಭವಾಗಲಿದೆ. ಅದಾದ ನಂತರ ಜೂನ್ 18ರಿಂದ ಟೀಮ್ ಇಂಡಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯ ಸೌಥಾಂಪ್ಟನ್‌ನಲ್ಲಿ ಆಯೋಜನೆಯಾಗಲಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಪ್ರಯಾಣ ಆರಂಭಿಸಿದ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ತಂಡ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನು ನೀಡಿದೆ. "ಈಗ ಪ್ರಯಾಣದ ಸಮಯ" ಎಂದು ಇಂಗ್ಲೆಂಡ್‌ಗೆ ಹಾರುವ ಮುನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದೆ.

ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೈಲ್ ಜ್ಯಾಮಿಸನ್ ಮತ್ತು ಮಿಚೆಲ್ ಸ್ಯಾಂಟ್ನರ್ ಐಪಿಎಲ್ ರದ್ದಾದ ನಂತರ ಮಾಲ್ಡೀವ್ಸ್‌ಗೆ ತೆರಳಿ ಉಳಿದುಕೊಂಡಿದ್ದರು. ಈ ಮೂವರು ಅಲ್ಲಿಂದಲೇ ಇಂಗ್ಲೆಂಡ್‌ಗೆ ಪ್ರಯಾಣಿಸಿದ್ದಾರೆ. ಮತ್ತೊಂದೆಡೆ ಕೀವಿಟ್ ತಂಡದ ಸ್ಟಾರ್ ವೇಗಿ ಟ್ರೆಂಟ್ ಬೋಲ್ಟ್ ಭಾರತದಿಂದ ತವರಿಗೆ ಮರಳಿದ್ದು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡು ಪಂದ್ಯಗಳನ್ನು ಕೂಡ ತಪ್ಪಿಸಿಕೊಳ್ಳುವ ಸಂಭವವಿದೆ.

ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾಗಿಯಾಗಲು ಭಾರತ ಕೂಡ ಇಂಗ್ಲೆಂಡ್‌ಗೆ ತೆರಳಲಿದ್ದು ಜೂನ್ 2ರಂದು ಪ್ರಯಾಣ ಆರಂಭಿಸುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಎಲ್ಲಾ ಆಟಗಾರರು ಮುಂಬೈನಲ್ಲಿ ಉಳಿದುಕೊಳ್ಳಲಿದ್ದು ಕಠಿಣ ಕ್ವಾರಂಟೈನ್ ಪೂರೈಸಲಿದ್ದಾರೆ.

Story first published: Sunday, May 16, 2021, 12:48 [IST]
Other articles published on May 16, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+