ತೀವ್ರ ನಿಗಾ ಘಟಕದಲ್ಲಿ ನ್ಯೂಜಿಲೆಂಡ್ ಮಾಜಿ ಆಲ್‌ರೌಂಡರ್ ಕ್ರಿಸ್ ಕ್ರೈನ್ಸ್: ವರದಿ

ಬೆಂಗಳೂರು, ಆಗಸ್ಟ್ 10: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್ ಕ್ರಿಸ್ ಕ್ರೈನ್ಸ್ ಆಸ್ಟ್ರೇಲಿಯಾದ ಕ್ಯಾನ್‌ಬೆರಾದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಜೀವರಕ್ಷಕಗಳ ಸಹಾಯದಲ್ಲಿದ್ದಾರೆ ಎಂದು ವರದಿಯಾಗಿದೆ. ಏಯೋರ್ಟಿಕ್ ಡಿಸೆಕ್ಷನ್‌ಗೆ ಅವರು ಒಳಗಾಗಿದ್ದಾರೆ. ಇದು ಗಂಭೀರ ಸ್ವರೂಪದ ಸಮಸ್ಯೆಯಾಗಿದ್ದು ಹೃದಯದಿಂದ ದೇಹದ ಇತರ ಭಾಗಗಳಿಗೆ ರಕ್ತ ಸಾಗಿಸುವ ರಕ್ತನಾಳ ಅಪಧಮನಿಯ ಒಳಭಾಗಕ್ಕೆ ಘಾಸಿಯಾಗುವುದನ್ನು ಏಯೋರ್ಟಿಕ್ ಡಿಸೆಕ್ಷನ್ ಎನ್ನಲಾಗುತ್ತದೆ. ಹೀಗಾಗಿ ಕಳೆದ ವಾರ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್‌ಬೆರಾದಲ್ಲಿರುವ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ ಎಂದು ನ್ಯೂಜಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.

ಕುಸಿದು ಬಿದ್ದ ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯಲು ಆರಂಭಿಸಿದ ಬಳಿಕ ಈಗಾಗಲೇ ಅವರಿಗೆ ಒಂದೆರಡು ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ ಬಳಿಕವೂ ಸ್ಪಂದಿಸುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ನ್ಯೂಜಿಲೆಂಡ್ ಕ್ರಿಕೆಟ್‌ನ ಮಾಜಿ ದಿಗ್ಗಜ ಆಟಗಾರನನ್ನು ಸಿಡ್ನಿಯಲ್ಲಿರುವ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ.

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ರಿಸ್ ಕ್ರೈನ್ಸ್‌ಗೆ ನ್ಯೂಜಿಲೆಂಡ್ ತಂಡದ ಪರವಾಗಿ ಅದ್ಭುತವಾದ ಕ್ರಿಕೆಟ್ ವೃತ್ತಿಜೀವನವನ್ನು ಹೊಂದಿದ್ದಾರೆ. ನ್ಯೂಜಿಲೆಂಡ್ ತಂಡದ ಪರವಾಗಿ ಅವರು 62 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದಾರೆ. ಅಲ್ಲದೆ 215 ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿಯೂ ನ್ಯೂಜಿಲೆಂಡ್ ತಂಡವನ್ನು ಪ್ರತಿನಿಧಿಸಿದ್ದಾರೆ. 1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟರ್‌ಗೆ ಪದಾರ್ಪಣೆ ಮಾಡಿದ ಕ್ರಿಸ್ ಕ್ರೈನ್ಸ್ 2006ರಲ್ಲಿ ನಿವೃತ್ತಿಯನ್ನು ಹೊಂದಿದ್ದರು.

ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್

ಟೆಸ್ಟ್ ಕ್ರಿಕೆಟ್‌ನಲ್ಲಿ 33ಕ್ಕೂ ಅಧಿಕ ಸರಾಸರಿಯಲ್ಲಿ 3,320 ರನ್‌ಗಳನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಗಳಿಸಿರುವ ಕ್ರಿಸ್ ಕ್ರೈನ್ಸ್ 29.40 ಸರಾಸರಿಯಲ್ಲಿ 218 ವಿಕೆಟ್ ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 29.46ರ ಸರಾಸರಿಯಲ್ಲಿ 4950 ರನ್‌ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 201 ವಿಕೆಟ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ನಿವೃತ್ತಿಯ ಬಳಿಕ ಅವರು ಸ್ಕೈ ಸ್ಪೋರ್ಟ್ಸ್‌ನಲ್ಲಿ ವೀಕ್ಷಕ ವಿವರಣೆಕಾರನಾಗಿಯೂ ಗುರುತಿಸಿಕೊಂಡಿದ್ದರು.

2000ನೇ ಇಸವಿಯಲ್ಲಿ ಕ್ರಿಸ್ ಕ್ರೈನ್ಸ್ ಐವರು ಕ್ರಿಕೆಟರ್‌ಗಳೊಂದಿಗೆ ವಿಸ್ಡನ್ ಆಟಗಾರನಾಗಿಯೂ ಹೆಸರಿಲ್ಪಟ್ಟಿದ್ದರು. 2000ನೇ ಇಸವಿಯಲ್ಲಿ ಐಸಿಸಿ ನಾಕ್‌ಔಟ್ ಟ್ರೋಫಿಯಲ್ಲಿ ನ್ಯೂಜಿಲೆಮಡ್‌ನ ಜಯಭೇರಿಯಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದರು. ನೈರೋಬಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿವೀಸ್ ಪಡೆಯ ಈ ಬಲಗೈ ದಾಂಡಿಗ ಭಾರತದ ವಿರುದ್ಧ ಅಜೇಯ 102 ರನ್‌ಗಳನ್ನು ಬಾರಿಸಿದ್ದರು. ಈ ಪ್ರದರ್ಶನದ ಸಹಾಯದಿಂದ ಭಾರತದ ನೀಡಿದ್ದ 265 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ತಲುಪಿ ಗೆದ್ದು ಬೀಗಿತ್ತು. ತಮ್ಮ ಸಮಕಾಲೀನ ಆಟಗಾರರ ಪೈಕಿ ಕ್ರಿಸ್ ಕ್ರೈನ್ಸ್ ಅತ್ಯುತ್ತಮ ಆಲ್‌ರೌಂಡರ್ ಆಟಗಾರನಾಗಿ ಗುರುತಿಸಿಕೊಂಡಿದ್ದರು.

ಕಳೆದ ಹಲವಾರು ವರ್ಷಗಳಿಂದ ನ್ಯೂಜಿಲೆಂಡ್ ತಂಡದ ಈ ಮಾಜಿ ಆಲ್‌ರೌಂಡರ್ ಆಸ್ಟ್ರೇಲಿಯಾದಲ್ಲಿ ಕುಟುಂಬ ಸಹಿತವಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಅಲ್ಲಿಯೇ ಈ ಘಟನೆ ನಡೆದಿದ್ದು ಸದ್ಯ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ಅವರು ಇನ್ನೂ ಕೂಡ ಜೀವನ್ಮಣದ ಮಧ್ಯೆ ಹೋರಾಟವನ್ನು ಮಾಡುತ್ತಿದ್ದಾರೆ.

ಇನ್ನು ಕ್ರಿಸ್ ಕ್ರೈನ್ಸ್ ಭಾರತದ ಪ್ರಖ್ಯಾತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿಯೂ ಭಾಗವಹಿಸಿದ್ದರು. 2007ರಿಂದ 2009ರವರೆಗೆ ಐಪಿಎಲ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ನ್ಯೂಜಿಲೆಂಡ್ ತಂಡದ ಈ ಆಲ್‌ರೌಂಡರ್ ಮ್ಯಾಚ್ ಫಿಕ್ಸಿಂಗ್‌ಗೆ ಒಳಗಾಗಿದ್ದಾರೆ ಎಂದು ಆರೋಪಿಸಿ ಐಪಿಎಲ್ ಹರಾಜಿನಿಂದ ಅವರನ್ನು ಬಳಿಕ ಹೊರಗಿಡಲಾಗಿತ್ತು. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ರೆಂಡನ್ ಮೆಕ್‌ಕಲಮ್ ಹಾಗೂ ಆರಂಭಿಕ ಆಟಗಾರ ಲೌ ವಿನ್ಸೆಂಟ್ ವಿನ್ಸೆಂಟ್ ಕೂಡ ಇವರ ವಿರುದ್ಧ ಮ್ಯಾಚ್ ಫಿಕ್ಸ್ಇಂಗ್‌ನ ಆರೋಪವನ್ನು ಮಾಡಿದ್ದರು. ಆದರೆ 2015ರಲ್ಲಿ ಲಂಡನ್ ಕೋರ್ಟ್‌ನಿಂದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕ್ರಿಸ್ ಕ್ರೈನ್ಸ್ ಆರೋಪ ಮುಕ್ತವಾಗಿ ಬಂದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 10, 2021, 17:19 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X