Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ ತಂಡದ ಮಾಜಿ ನಾಯಕ, ದಿಗ್ಗಜ ಜಾನ್ ರೀಡ್ ನಿಧನ

New Zealand Former cricketer John Reid dies at 92

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ ಕ್ರಿಕೆಟ್‌ ತಂಡ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಜಯ ದಾಖಲಿಸಿದ್ದಾಗ ತಂಡದ ನಾಯಕತ್ವ ವಹಿಸಿಕೊಂಡಿದ್ದ ದಂತಕತೆ ಜಾನ್ ರೀಡ್ ಅವರು ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. 1950 ಮತ್ತು 60ರ ದಶಕದಲ್ಲಿ ರೀಡ್ ವಿಶ್ವದ ಬೆಸ್ಟ್ ಆಲ್‌ ರೌಂಡರ್‌ಗಳಲ್ಲಿ ಗುರುತಿಸಿಕೊಂಡಿದ್ದರು.

ಬಿರುಸಿನ ಬ್ಯಾಟಿಂಗ್ ಮತ್ತು ವೇಗದ ಬೌಲಿಂಗ್‌ಗೆ ಹೆಸರಾಗಿದ್ದ ಜಾನ್ ರೀಡ್, ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಪರ 58 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ, ಇದರಲ್ಲಿ 34 ಪಂದ್ಯಗಳಲ್ಲಿ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ರೀಡ್ ಒಟ್ಟಾರೆ 3,428 ರನ್ ಗಳಿಸಿದ್ದಾರೆ. ಇದರಲ್ಲಿ 6 ಶತಕಗಳು ಸೇರಿವೆ.

58 ಟೆಸ್ಟ್ ಪಂದ್ಯಗಳಲ್ಲಿ 22 ಅರ್ಧ ಶತಕ ಮತ್ತು 85 ವಿಕೆಟ್ ದಾಖಲೆಯೂ ರೀಡ್ ಹೆಸರಿನಲ್ಲಿದೆ. ಇನ್ನು 246 ಪ್ರಥಮದರ್ಜೆ ಕ್ರಿಕೆಟ್‌ ಪಂದ್ಯಗಳನ್ನಾಡಿರುವ ಜಾನ್ 41.35ರ ಸರಾಸರಿಯಲ್ಲಿ 16128 ರನ್ ಬಾರಿಸಿದ್ದಾರೆ. 39 ಶತಕಗಳೂ ಇದರಲ್ಲಿ ಸೇರಿವೆ. ಪ್ರಥಮದರ್ಜೆಯಲ್ಲಿ ರೀಡ್ 466 ವಿಕೆಟ್‌ಗಳನ್ನು ಉರುಳಿಸಿದ್ದಾರೆ.

ನ್ಯೂಜಿಲೆಂಡ್ ತಂಡ 1956ರಲ್ಲಿ ಆಕ್ಲೆಂಡ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಗೆಲುವು ದಾಖಲಿಸಿತ್ತು. ಅದಾಗಿ ದಕ್ಷಿಣ ಆಫ್ರಿಕಾ ವಿರುದ್ಧ 1961-62ರಲ್ಲಿ ನಡೆದಿದ್ದ ಸರಣಿಯಲ್ಲಿ ಎರಡು ಗೆಲುವು ಕಂಡಿತ್ತು. ಕಿವೀಸ್ ಮೊದಲ ಮೂರು ಟೆಸ್ಟ್ ಜಯ ಕಂಡಿದ್ದ ಈ ಪಂದ್ಯಗಳಲ್ಲಿ ರೀಡ್ ನಾಯಕತ್ವ ವಹಿಸಿದ್ದರು.

Story first published: Thursday, October 15, 2020, 10:21 [IST]
Other articles published on Oct 15, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+