SL vs NZ: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಕಳೆದುಕೊಂಡ ನ್ಯೂಜಿಲೆಂಡ್
ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಗಾಲೆ ಸ್ಟೇಡಿಯಂನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ನ್ಯೂಜಿಲೆಂಡ್ ಅನ್ನು ಇನ್ನಿಂಗ್ಸ್ ಮತ್ತು 154 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಆತಿಥೇಯ ತಂಡ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡು ಪ್ರವಾಸಿ ತಂಡವನ್ನು ಹೊರ ಹಾಕಿದೆ.
15 ವರ್ಷಗಳ ಬಳಿಕ ಗೆಲುವು
ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಭಾರೀ ಕುತೂಹಲ ಮೂಡಿಸಿತ್ತು. ತವರಿನ ನೆಲದಲ್ಲಿ ಕಿವೀಸ್ ಪಡೆ ವಿರುದ್ಧ ಪ್ರಾಬಲ್ಯ ಸಾಧಿಸಿದ ಶ್ರೀಲಂಕಾ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಇದರೊಂದಿಗೆ ಲಂಕಾ ಪಡೆ 15 ವರ್ಷಗಳ ನಂತರ ಕಿವೀಸ್ ವಿರುದ್ಧ ಮೊದಲ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.

ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರತಿರೋಧ ತೋರಿದ ನ್ಯೂಜಿಲೆಂಡ್ 360 ರನ್ ಆಲೌಟ್. ನ್ಯೂಜಿಲೆಂಡ್ ಪರ ಗ್ಲೆನ್ ಫಿಲಿಪ್ಸ್ 78 ರನ್ ಗಳಿಸಿದರು. ಡೆವೊನ್ ಕಾನ್ವೆ (61), ಟಾಮ್ ಬ್ಲಂಡೆಲ್ (60) ಮತ್ತು ಮಿಚೆಲ್ ಸ್ಯಾಂಟ್ನರ್ (67) ಅರ್ಧಶತಕ ಬಾರಿಸಿದರು. ಶ್ರೀಲಂಕಾ ಪರ ನಿಶಾನ್ ಪೀರಿಸ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಮಿಂಚಿದರು. ಅವರು 33.4 ಓವರ್‌ಗಳಲ್ಲಿ 170 ರನ್‌ಗಳಿಗೆ 6 ವಿಕೆಟ್ ಕಬಳಿಸಿದರು. ಪ್ರಭಾತ್ ಜಯಸೂರ್ಯ 3 ಮತ್ತು ನಾಯಕ ಧನಂಜಯ್ ಡಿ ಸಿಲ್ವಾ 1 ವಿಕೆಟ್ ಪಡೆದು ಶ್ರೀಲಂಕಾ ಗೆಲುವಿಗೆ ನೆರವಾದರು.
ಕಿವೀಸ್ ಪಡೆಗೆ ಮುಖಭಂಗ
ಕಿವೀಸ್ ಪಡೆಗೆ ಸೋಲಿನ ರುಚಿ ತೋರಿಸಿದ ಶ್ರೀಲಂಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಹತ್ತಿರವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲೆಂಡ್ ತಂಡದ ಹೆಸರಿನಲ್ಲಿ ಅನಗತ್ಯ ದಾಖಲೆಯೊಂದು ದಾಖಲಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಕಿವೀಸ್ ತಂಡ ವಿದೇಶಿ ನೆಲದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆಲ್ಲದ ಏಕೈಕ ತಂಡ ಎನಿಸಿಕೊಂಡಿದೆ. 2019ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪ್ರಾರಂಭವಾಯಿತು. ಅಂದಿನಿಂದ ಕಿವೀಸ್ ಪಡೆ 2021ರ ಭಾರತ ವಿರುದ್ಧ ಫೈನಲ್ ಹೊರತುಪಡಿಸಿ ವಿದೇಶಿ ನೆಲದಲ್ಲಿ ಯಾವುದೇ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2024-25ರ ಸಾಲಿನಲ್ಲಿ ಶ್ರೀಲಂಕಾ ತಂಡ ಆಡಿರುವ 9 ಪಂದ್ಯಗಳಲ್ಲಿ ಐದು ಗೆಲುವುಗಳು ಮತ್ತು ನಾಲ್ಕು ಸೋಲುಗಳನ್ನು ಎದುರಿಸಿದೆ. ಇದರೊಂದಿಗೆ 60 ಅಂಕಗಳೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ಸೋತ ನಂತರ ನ್ಯೂಜಿಲೆಂಡ್ ಮೂರನೇ ಸ್ಥಾನದಿಂದ ಏಳನೇ ಸ್ಥಾನಕ್ಕೆ ಕುಸಿದಿದೆ. ನ್ಯೂಜಿಲೆಂಡ್ 8 ಪಂದ್ಯಗಳಲ್ಲಿ 3 ಗೆಲುವು ಮತ್ತು 5 ಸೋಲುಗಳೊಂದಿಗೆ 36 ಅಂಕಗಳನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications