For Quick Alerts
ALLOW NOTIFICATIONS  
For Daily Alerts
 

ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ: ಭಾರತ ತಂಡದಲ್ಲಿ ಇಲ್ಲ ಬದಲಾವಣೆ

ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಟಿ20 ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಟಾಸ್‌ ಕಿವೀಸ್ ತಂಡದ ಪಾಲಾಗಿದೆ. ಉಭಯ ತಂಡಗಳು ಭರ್ಜರಿ ಪ್ರದರ್ಶನವನ್ನು ನೀಡಿ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿವೆ. ಈ ಬಾರಿಯ ಫೈನಲ್‌ ಪಂದ್ಯಕ್ಕೆ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನ ಸಾಕ್ಷಿಯಾಗಲಿದೆ. ಟಾಸ್‌ ಗೆದ್ದ ನ್ಯೂಜಿಲೆಂಡ್‌ ಮೊದಲು ಬೌಲಿಂಗ್ ಮಾಡಲು ಮುಂದಾಗಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.

ಭಾರತ ತಂಡ ಮೂರನೇ ಬಾರಿಗೆ ಟಿ20 ವಿಶ್ವಕಪ್‌ನ ಟ್ರೋಫಿಯನ್ನು ಎತ್ತುವ ಕನಸು ಕಾಣುತ್ತಿದೆ. ಅಲ್ಲದೆ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಮೊದಲ ಬಾರಿಗೆ ಚುಟುಕು ವಿಶ್ವಕಪ್‌ಗೆ ಮುತ್ತಿಡುವ ಆಸೆಯನ್ನು ಭಾರತ ತಂಡ ಕಾಣುತ್ತಿದೆ. ಈ ಮಹತ್ವದ ಪಂದ್ಯಕ್ಕಾಗಿ ಭಾರತ ತಂಡ ಸಂಪುರ್ಣ ಸಿದ್ಧವಾಗಿದೆ. ಈ ಬಿಗ್ ಫೈಟ್‌ಗೆ ತಂಡದಲ್ಲಿ ಬದಲಾವಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಈ ನಿರೀಕ್ಷೆಗಳಲ್ಲಾ ಹುಸಿಯಾಗಿವೆ.

New Zealand

ಕಳೆದ ಕೆಲವು ಪಂದ್ಯಗಳಿಂದ ತಂಡದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಅಭಿಷೇಕ್ ಶರ್ಮಾ ಅವರನ್ನು ಕೈ ಬಿಡಬಹುದು ಎಂದು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಇನ್ನು ವರುಣ್‌ ಚಕ್ರವರ್ತಿ ತಮ್ಮ ಮ್ಯಾಜಿಕ್‌ ತೋರಿಸುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರಿಗೆ ತಂಡದಲ್ಲಿ ಸ್ಥಾನ ಸಿಗುತ್ತಾ ಎಂಬ ಪ್ರಶ್ನೆ ಉದ್ಭವಿಸಿತ್ತು. ಆದರೆ ಭಾರತ ತಂಡ ತನ್ನ ಪ್ಲೇಯಿಂಗ್ ಇಲೆವೆನ್ ಘೋಷಿಸುತ್ತಿದ್ದಂತೆ ಹಲವು ಊಹಾಪೋಹಗಳಿಗೆ ಉತ್ತರ ಸಿಕ್ಕಿದೆ.

ಭಾರತ ತಂಡ: ಸಂಜು ಸ್ಯಾಮ್ಸನ್‌, ಅಭಿಷೇಕ್‌ ಶರ್ಮಾ, ಇಶಾನ್‌ ಕಿಶನ್‌, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ತಿಲಕ್ ವರ್ಮಾ, ಅಕ್ಷರ್ ಪಟೇಲ್‌, ಶಿವಂ ದುಬೆ, ಅರ್ಶದೀಪ್ ಸಿಂಗ್, ವರುಣ್‌ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ.

ನ್ಯೂಜಿಲೆಂಡ್‌ ತಂಡ: ಫಿನ್ ಅಲೆನ್, ಟಿಮ್ ಸಿಫರ್ಟ್‌, ರಚಿನ್ ರವೀಂದ್ರ, ಗ್ಲೆನ್‌ ಫಿಲಿಪ್ಸ್‌, ಮಾರ್ಕ್ ಚಾಂಪ್ಮನ್‌, ಮಿಚೆಲ್ ಸ್ಯಾಂಟ್ನರ್, ಜೇಮ್ಸ್‌ ನಿಶಮ್‌, ಮ್ಯಾಟ್‌ ಹೆನ್ರಿ, ಜಾಕಬ್ ಡಫಿ, ಲಾಕಿ ಫರ್ಗ್ಯೂಸನ್.

Story first published: Sunday, March 8, 2026, 18:46 [IST]
Other articles published on Mar 8, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+