ಆತ ಪಂದ್ಯವನ್ನು ಸಂಪೂರ್ಣವಾಗಿ ಕಸಿಯಬಲ್ಲ: ಭಾರತೀಯ ಆಟಗಾರನ ಬಗ್ಗೆ ಟಿಮ್ ಸೌಥೀ ಹೇಳಿಕೆ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯಕ್ಕೆ ಕೇವಲ ಒಂದು ದಿನ ಇರುವಾಗ ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಟಿಮ್ ಸೌಥೀ ಭಾರತದ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಭಾರತದ ಆ ಓರ್ವ ಬ್ಯಾಟ್ಸ್‌ಮನ್ ಯಾವುದೇ ಎದುರಾಳಿಯಿಂದಲೂ ಪಂದ್ಯವನ್ನು ಸಂಪೂರ್ಣವಾಗಿ ಕಸಿಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬ ಹೇಳಿಕೆ ನೀಡಿದ್ದಾರೆ.
ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ ಅಜಿಂಕ್ಯ ರಹಾನೆ, ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಅವರನ್ನು ಒಳಗೊಂಡಂತೆ ಆಧುನಿಕ ಕ್ರಿಕೆಟ್‌ನ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಲೈನ್‌ಅಪ್‌ಅನ್ನು ಭಾರತ ಹೊಂದಿದೆ. ಇದು ನ್ಯೂಜಿಲೆಂಡ್ ತಂಡಕ್ಕೆ ಅರಿವಿದೆ ಎಂದು ಕೀವಿಸ್ ವೇಗಿ ಟಿಮ್ ಸೌಥೀ ಹೇಳಿಕೆ ನೀಡಿದ್ದಾರೆ. ಶುಕ್ರವಾರ ಸೌಥಾಂಪ್ಟನ್‌ನಲ್ಲಿ ನಡೆಯಲಿರುವ ಪಂದ್ಯಕ್ಕೂ ಒಂದು ದಿನ ಮುನ್ನ ಈ ಪ್ರತಿಕ್ರಿಯೆ ನೀಡಿದ್ದಾರೆ.
ವರ್ಚುವಲ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಟಿಮ್ ಸೌಥೀ ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ಬಗ್ಗೆ ವಿಶೇಷ ಮಾತುಗಳನ್ನು ಆಡಿದ್ದಾರೆ. "ಮೂರು ಮಾದರಿಯ ಕ್ರಿಕೆಟ್‌ನಲ್ಲಿಯೂ ರೋಹಿತ್ ಶರ್ಮಾ ಅದ್ಭುತವಾದ ಆಟಗಾರನಾಗಿದ್ದಾರೆ. ವೈಯಕ್ತಿಕವಾಗಿ ಆತನ ಬ್ಯಾಟಿಂಗ್ ಅಂದರೆ ನನಗೆ ಇಷ್ಟ. ಆತ ಪಂದ್ಯವನ್ನು ಎದುರಾಳಿಯಿಂದ ದೂರಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ" ಎಂದು ಟಿಮ್ ಸೌಥೀ ಹೇಳಿಕೆ ನೀಡಿದ್ದಾರೆ.
"ಆದರೆ ಬೌಲಿಂಗ್ ವಿಭಾಗದವನಾಗಿ ಭಾರತ ಸರದಿಯುದ್ದಕ್ಕೂ ಅತ್ಯಂತ ಅಪಾಯಕಾರಿಯಾದ ಬ್ಯಾಟ್ಸ್‌ಮನ್‌ಗಳ ಪಡೆಯನ್ನು ಹೊಂದಿದೆ. ಆ ಬ್ಯಾಟಿಂಗ್ ಲೈನ್‌ಅಪ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳ ಪೈಕಿ ರೋಹಿತ್ ಶರ್ಮಾ ಕೇವಲ ಓರ್ವ ಆಟಗಾರ. ಹಾಗಾಗಿ ನಾವು ಆಟದಲ್ಲೂ ಅತ್ಯುನ್ನತವಾದ ಪ್ರದರ್ಶನ ನೀಡಬೇಕಿದೆ" ಎಂದು ಸೌಥೀ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಸಂದರ್ಭದಲ್ಲಿ ಸೌಥೀ ನ್ಯೂಜಿಲೆಂಡ್ ಕೇವಲ ಅನುಭವಿ ಆಟಗಾರರ ವಿಡಿಯೋಗಳನ್ನು ಗಮನಿಸುತ್ತಿಲ್ಲ. ರಿಷಭ್ ಪಂತ್, ಶುಬ್ಮನ್ ಗಿಲ್ ಅವರಂತಾ ಯುವ ಆಟಗಾರರ ವಿಡಿಯೋಗಳನ್ನು ಕೂಡ ಗಮನಿಸಿಕೊಳ್ಳುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications