Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್‌ ಬಿಟ್ಟಿದ್ದಕ್ಕೆ ಬೆಲೆತೆತ್ತ ಆಸ್ಟಲ್: ವೀಡಿಯೋ

New Zealand pay price for Todd Astle’s massive blunder

ಸಿಡ್ನಿ, ಜನವರಿ 6: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ನ್ಯೂಜಿಲೆಂಡ್‌ ಆತಿಥೇಯ ಆಸೀಸ್ ವಿರುದ್ಧ 3ನೇ ಟೆಸ್ಟ್ ಪಂದ್ಯವನ್ನಾಡಿತ್ತು. ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅಪಾಯಕಾರಿ ಬ್ಯಾಟ್ಸ್‌ಮನ್ ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್‌ ಕೈಚೆಲ್ಲಿ ಕಿವೀಸ್ ಬೌಲರ್ ಟಾಡ್ ಆಸ್ಟಲ್ ಭಾರಿ ಪ್ರಮಾದ ಪ್ರಮಾದವೆಸಗಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.

ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿದ್ದಾಗ 31.2ನೇ ಓವರ್‌ನಲ್ಲಿ ಬೌಲಿಂಗ್ ಮಾಡುತ್ತಿದ್ದ ಟಾಡ್ ಆಸ್ಟಲ್‌ಗೆ ಮಾರ್ನಸ್ ಲ್ಯಾಬುಸ್ಚಾಗ್ನೆ ಕ್ಯಾಚ್ ಲಭಿಸುವುದರಲ್ಲಿತ್ತು. ಆಸ್ಟಲ್ ಕ್ಯಾಚ್‌ಗೆ ಯತ್ನಿಸಿದರಾದರೂ ಚೆಂಡು ನೆಲಕ್ಕುರುಳಿತು. ಆಗ ಲ್ಯಾಬುಸ್ಚಾಗ್ನೆ ಕೇವಲ 4 ರನ್ ಗಳಿಸಿದ್ದರು.

ಆಸ್ಟಲ್ ಅವರಿಂದಾದ ಪ್ರಮಾದದಿಂದ ಜೀವದಾನ ಪಡೆದ ಲ್ಯಾಬುಸ್ಚಾಗ್ನೆ ಆ ಬಳಿಕ ಅರ್ಧ ಶತಕ (59 ರನ್‌) ಬಾರಿಸಿ 51.6ನೇ ಓವರ್‌ನಲ್ಲಿ ಮ್ಯಾಟ್‌ ಹೆನ್ರಿ ಎಸೆತಕ್ಕೆ ನ್ಯೂಜಿಲೆಂಡ್‌ ನಾಯಕ ಟಾಮ್ ಲ್ಯಾಥಮ್‌ಗೆ ಕ್ಯಾಚಿತ್ತರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸೀಸ್ ಓಪನರ್ ಡೇವಿಡ್ ವಾರ್ನರ್ ಶತಕದ (111 ರನ್) ಕೊಡುಗೆಯೂ ದೊರೆತಿದ್ದರಿಂದ ಪಂದ್ಯದಲ್ಲಿ ಆಸೀಸ್ 279 ರನ್ ಗೆಲುವು ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ, ಮಾರ್ನಸ್ ದ್ವಿಶತಕ (215 ರನ್), ಸ್ಟೀವ್ ಸ್ಮಿತ್ 63 ರನ್‌ನೊಂದಿಗೆ 150.1 ಓವರ್‌ಗೆ 454 ರನ್ ಮಾಡಿತ್ತು. ವಿಶೇಷವೆಂದರೆ ಆಸೀಸ್ ಆರಂಭಿಕ ಇನ್ನಿಂಗ್ಸ್‌ನಲ್ಲಿ ಮಾರ್ನಸ್ ವಿಕೆಟನ್ನು ಟಾಡ್ ಆಸ್ಟಲ್ ಅವರೇ ಕ್ಯಾಚ್‌ ಆ್ಯಂಡ್‌ ಬೌಲ್ಡ್ ಮಾಡಿದ್ದರು (ಸಂಕ್ಷಿಪ್ರ ಸ್ಕೋರ್‌: ಆಸ್ಟ್ರೇಲಿಯಾ 454+217 ಡಿ, ನ್ಯೂಜಿಲೆಂಡ್: 256+136).

Story first published: Monday, January 6, 2020, 16:36 [IST]
Other articles published on Jan 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+