Super Catch: ಏನ್ ಕ್ಯಾಚ್ ಗುರು: ವೈರಲ್ ಆಗುತ್ತಿದೆ ಗ್ಲೆನ್ ಫಿಲಿಪ್ಸ್ ವಿಡಿಯೋ
ಕ್ರಿಕೆಟ್ ಅಂಗಳದಲ್ಲಿ ಅದ್ಭುತ ಕ್ಯಾಚ್‌ಗಳನ್ನು ಹಿಡಿದು ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಎದ್ದು ಕಾಣುವ ಹೆಸರುಗಳೆದಂರೆ ದಕ್ಷಿಣ ಆಫ್ರಿಕಾದ ಜಾಂಟಿ ರೋಡಸ್.. ಟೀಮ್ ಇಂಡಿಯಾದ ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿ. ತಮ್ಮ ಅದ್ಭುತ ಕ್ಯಾಚ್ ಮೂಲಕ ವಿಶ್ವದ ಚಿತ್ತ ಕದ್ದ ಪ್ಲೇಯರ್ಸ್..
ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ಆಡುತ್ತಿದೆ. ಈ ವೇಳೆ ಗ್ಲೆನ್ ಫಿಲಿಪ್ಸ್ ಹಿಡಿದ ಅಚ್ಚರಿಯ ಕ್ಯಾಚ್ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಗ್ಲೆನ್ ಫಿಲಿಪ್ಸ್ ಅವರ ಅತ್ಯುತ್ತಮ ಫೀಲ್ಡಿಂಗ್‌ಗೆ ಹೆಸರುವಾಸಿ. ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನ ಫಿಲಿಪ್ಸ್ ಕ್ಯಾಚ್ ಹಿಡಿದಿದ್ದು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಕ್ಯಾಚ್‌ನಿಂದಾಗಿ ಕಿವೀಸ್ ತಂಡ ಪಂದ್ಯದಲ್ಲಿ ಪುಟಿದೇಳುವ ಸೂಚನೆ ನೀಡಿದೆ.

ನ್ಯೂಜಿಲೆಂಡ್ ತಂಡವು ಡೇವಿಡ್ ಬೆಡಿಂಗ್ಹ್ಯಾಮ್ ಮತ್ತು ಕೀಗನ್ ಪೀಟರ್ಸನ್ ನಡುವಿನ ಅಭಿವೃದ್ಧಿ ಶೀಲ ಪಾಲುದಾರಿಕೆಯಿಂದಾಗಿ ತೊಂದರೆಗೆ ಸಿಲುಕಿತು. ಏಕೆಂದರೆ ಇಬ್ಬರೂ ಐದನೇ ವಿಕೆಟ್‌ಗೆ 98 ರನ್‌ಗಳನ್ನು ಸೇರಿಸಿದರು ಮತ್ತು ಮುನ್ನಡೆ ಸಾಧಿಸಲು ಉತ್ತಮವಾಗಿ ಪ್ರಯತ್ನಿಸಿದರು. ಇನ್ನಿಂಗ್ಸ್‌ನ 60 ನೇ ಓವರ್‌ನಲ್ಲಿ, ಕೀಗನ್ ಪೀಟರ್ಸನ್ ಮ್ಯಾಟ್ ಹೆನ್ರಿ ಅವರ ಲೆಂಗ್ತ್ ಎಸೆತವನ್ನು ಕಟ್ ಮಾಡಿದರು. ಅದನ್ನು ತಡೆಯಲು ಗ್ಲೆನ್ ಫಿಲಿಪ್ಸ್ ಗಾಳಿಯಲ್ಲಿ ತೂರಿದರು.
ಫಿಲಿಪ್ಸ್ ಗೋಲ್‌ಕೀಪರ್‌ನಂತೆ ಎಡಕ್ಕೆ ಹಾರಿ ಚೆಂಡನ್ನು ಹಿಡಿದರು. ಇದು ಸ್ವತಃ ಫಿಲಿಪ್ಸ್ ಸಹ ನಂಬಲು ಸಾಧ್ಯವಾಗದ ಪ್ರಯತ್ನ. ಹೆನ್ರಿ ಸಹ ಈ ಪ್ರಯತ್ನ ಕಂಡು ಅಚ್ಚರಿ ಪಟ್ಟರು. ಮೈದಾನದಲ್ಲಿ ಇರುವ ಆಟಗಾರರು ಅಷ್ಟೇ ಅಲ್ಲಾ, ನೋಡಲು ಬಂದ ಅಭಿಮಾನಿಗಳು ಸಹ ಈ ಕ್ಯಾಚ್ ನೋಡಿ ಚಪ್ಪಾಳೆ ತಟ್ಟಿದರು.
ಈ ಅದ್ಭುತ ಕ್ಯಾಚ್ ನಂತರ ದಕ್ಷಿಣ ಆಫ್ರಿಕಾ ತಂಡ ಪುಟಿದೇಳಲು ಸಾಧ್ಯವಾಗಲಿಲ್ಲ. ಈ ಕ್ಯಾಚ್‌ಗೆ ಮುನ್ನ ದಕ್ಷಿಣ ಆಫ್ರಿಕಾ 202 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ ಇದರ ನಂತರ ದಕ್ಷಿಣ ಆಫ್ರಿಕಾ 235 ರನ್‌ಗಳಿಗೆ ಆಲೌಟ್ ಆಯಿತು. 33 ರನ್‌ಗಳಿಗೆ ಕೊನೆಯ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.
ಮೊದಲ ಇನ್ನಿಂಗ್ಸ್‌ನಲ್ಲಿ 31 ರನ್‌ಗಳ ಮುನ್ನಡೆ ಎಂದರೆ ಆತಿಥೇಯರು ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 235 ರನ್‌ಗಳಿಗೆ ಕಟ್ಟಿ ಹಾಕಿತು. ನ್ಯೂಜಿಲೆಂಡ್ ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್‌ಗೆ 40 ರನ್ ಕಲೆ ಹಾಕಿದೆ. ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಕಿವೀಸ್ ತಂಡಂಕ್ಕೆ ಇನ್ನು 227 ರನ್‌ಗಳ ಅವಶ್ಯಕತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications