ಐಪಿಎಲ್ 2021 ಪುನಾರಂಭಕ್ಕೆ ಇಂಗ್ಲೆಂಡ್ ನಂತರ ನ್ಯೂಜಿಲೆಂಡ್ ಆಟಗಾರರು ಕೂಡ ಅಲಭ್ಯ ಸಾಧ್ಯತೆ

ಕೊರೊನಾ ವೈರಸ್‌ನ ಕಾರಣದಿಂದಾಗಿ ಈ ಬಾರಿಯ ಐಪಿಎಲ್ ಅರ್ಧಕ್ಕೆ ಮೊಟಕುಗೊಂಡಿದೆ. ಟೂರ್ನಿಯನ್ನು ಮುಂದುವರಿಸಲು ಸೂಕ್ತ ಸಮಯವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಬಿಸಿಸಿಐ ನಡೆಸುತ್ತಿದೆ. ಈ ಮಧ್ಯೆ ಟೂರ್ನಿ ಮುಂದುವರಿಸುವ ಸಂದರ್ಭದಲ್ಲಿ ನ್ಯೂಜಿಲೆಂಡ್ ಆಟಗಾರರು ಭಾಗಿಯಾಗುವ ಸಾಧ್ಯತೆಗಳು ಕ್ಷೀಣಿಸಿದೆ.
ಈಗಿನ ಬೆಳವಣಿಗೆಯ ಪ್ರಕಾರ ಸೆಪ್ಟೆಂಬರ್‌ನಲ್ಲಿ ದೊರೆಯುವ ಕಾಲಾವಕಾಶದಲ್ಲಿ ಐಪಿಎಲ್ ಮುಂದುವರಿಸುವುದು ಸೂಕ್ತ ಎಂದು ನಿರ್ಧಾರಿಸಿದೆ. ಯಾವುದಾದರೂ ವಿದೇಶಿ ತಾಣದಲ್ಲಿ ಈ ಅವಕಾಶದಲ್ಲಿ ಟೂರ್ನಿ ಆಯೋಜನೆ ಮಾಡುವ ಸಾಧ್ಯತೆಯಿದೆ. ಆದರೆ ಈ ಸಂದರ್ಭದಲ್ಲಿ ನ್ಯೂಜಿಲೆಂಡ್ ಪಾಕಿಸ್ತಾನದ ವಿರುದ್ಧ ಯುಎಇನಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.
ಈಗಾಗಲೇ ನಿರ್ಧರಿತವಾಗಿರುವಂತೆ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಯುಎಇನಲ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲಿದೆ. ಮೂರು ಏಕದಿನ ಹಾಗೂ ಮೂರು ಟಿ20 ಪಂದ್ಯಗಳು ಆಯೋಜನೆಯಾಗಲಿದೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಜೊತೆಗೆ ನ್ಯೂಜಿಲೆಂಡ್ ಕ್ರಿಕೆಟ್ ಮಾಡಿಕೊಂಡಿರುವ ಫ್ಯೂಚರ್ ಟೂರ್ ಪ್ಲಾನ್‌ನ ಭಾಗವಾಗಿರುವ ಕಾರಣ ಟೂರ್ನಿಯನ್ನು ರದ್ದು ಅಥವಾ ಮುಂದೂಡುವುದು ಕೂಡ ಅಸಾಧ್ಯವಾಗಿದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್, ಮುಂಬೈ ಇಂಡಿಯನ್ಸ್ ವೇಗಿ ಟ್ರೆಂಟ್ ಬೋಲ್ಟ್ ಈ ಸರಣಿಯಲ್ಲಿ ಪಾಲಗ್ಲೊಳ್ಳುವ ಪ್ರಮುಖ ಆಟಗಾರರಾಗಿದ್ದಾರೆ. ಉಳಿದಂತೆ ಮುಂಬೈ ಇಂಡಿಯನ್ಸ್‌ನ ಆಡಂ ಮಿಲ್ನೆ, ಮಿಚೆಲ್ ಸ್ಯಾಂಟ್ನರ್(ಸಿಎಸ್‌ಕೆ), ಲೂಕಿ ಫರ್ಗ್ಯೂಸನ್(ಕೆಕೆಆರ್), ಫಿನ್ ಅಲೆನ್ ಹಾಗೂ ಕೇಲ್ ಜ್ಯಾಮಿಸನ್(ಆರ್‌ಸಿಬಿ) ಕೂಡ ಐಪಿಎಲ್‌ನ ಉಳಿದ ಪಂದ್ಯಗಳಲ್ಲಿ ಭಾಗಿಯಾಗುವುದು ಅನುಮಾನವಾಗಿದೆ.
ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಆಟಗಾರರು ಕೂಡ ಭಾಗಿಯಾಗುವುದು ಅಸಾಧ್ಯ ಎಂಬ ಮಾತನ್ನು ಮುಖ್ಯಸ್ಥ ಆಶ್ಲೇ ಗಿಲ್ಸ್ ವ್ಯಕ್ತಪಡಿಸಿದ್ದರು. ಟೂರ್ನಿ ನಿಗದಿಯಾಗಬಹುದಾದ ಸಂದರ್ಭದಲ್ಲಿ ಇಂಗ್ಲೆಂಡ್ ಕೂಡ ಪೂರ್ವ ನಿಗದಿತ ಸರಣಿಗಳಲ್ಲಿ ಭಾಗಿಯಾಗಬೇಕಿರುವುದು ಇದಕ್ಕೆ ಕಾರಣ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications