Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್: ನ್ಯೂಜಿಲೆಂಡ್ ಆಟಗಾರರಿಗೆ ಬೋರ್ಡ್‌ನಿಂದ ನಿರಾಕ್ಷೇಪಣಾ ಪತ್ರ

New Zealand players get No-Objection Certificates from NZC to play full IPL 2021

ವೆಲ್ಲಿಂಗ್ಟನ್: ಮುಂಬರಲಿರುವ 2021ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಪಾಲ್ಗೊಳ್ಳಲು ನ್ಯೂಜಿಲೆಂಡ್ ಕ್ರಿಕೆಟ್‌ ಬೋರ್ಡ್ ತನ್ನ ಎಲ್ಲಾ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಿದೆ. ನಿರಾಕ್ಷೇಪಣಾ ಪತ್ರದ ಜೊತೆಗೆ ನ್ಯೂಜಿಲೆಂಡ್‌ನ ಎಲ್ಲಾ ಆಟಗಾರರು ಐಪಿಎಲ್ ಟೂರ್ನಿಯುದ್ದಕ್ಕೂ ಲಭ್ಯರಿರಲಿದ್ದಾರೆ ಎಂದೂ ತಿಳಿಸಿದೆ.

ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್‌ ನ್ಯೂಜಿಲೆಂಡ್‌ನ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಿದೆ ಮತ್ತು ನ್ಯೂಜಿಲೆಂಡ್ ಆಟಗಾರರು ಟೂರ್ನಿ ಪೂರ್ತಿ ಲಭ್ಯರಿರಲಿದ್ದಾರೆ ಎಂದು ನ್ಯೂಜಿಲೆಂಡ್ ಕ್ರಿಕೆಟ್‌ನ ವಕ್ತಾರ ರಿಚರ್ಡ್ ಬೂಕ್ ಎಎನ್‌ಐಗೆ ಇಮೇಲ್ ಮೂಲಕ ತಿಳಿಸಿದ್ದಾರೆ.

'ಹೌದು, ನ್ಯೂಜಿಲೆಂಡ್ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಲಾಗಿದೆ. ಅವರು ಟೂರ್ನಿ ಪೂರ್ತಿ ಲಭ್ಯರಿರಲಿದ್ದಾರೆ,' ಎಂದು ರಿಚರ್ಡ್ ಬೂಕ್ ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಮುಂದಿನ ಜೂನ್‌ನಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿರುವುದರಿಂದ ಕಿವೀಸ್ ಆಟಗಾರರು ಐಪಿಎಲ್ ಪ್ಲೇ ಆಫ್‌ನಲ್ಲಿ ಆಡುತ್ತಿಲ್ಲ ಎಂದು ಕೆಲ ವರದಿಗಳು ಪ್ರಕಟವಾದ ಬೆನ್ನಲ್ಲೇ ಬೂಕ್ ಸ್ಪಷ್ಟನೆ ನೀಡಿದ್ದಾರೆ.

ಐಪಿಎಲ್ 2021ರ ಆಟಗಾರರ ಹರಾಜು ಚೆನ್ನೈಯ ಖಾಸಗಿ ಹೋಟೆಲ್‌ನಲ್ಲಿ ಫೆಬ್ರವರಿ 18ರಂದು ನಡೆಯಲಿದೆ. ಏಪ್ರಿಲ್-ಮೇನಲ್ಲಿ ಐಪಿಎಲ್ ಆರಂಭವಾಗುವ ನಿರೀಕ್ಷೆಯಿದೆ. ಒಟ್ಟು 292 ಮಂದಿ ಆಟಗಾರರು ಈ ಬಾರಿ ಹರಾಜು ಕಣದಲ್ಲಿದ್ದಾರೆ. 3 pmಗೆ ಹರಾಜು ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.

Story first published: Wednesday, February 17, 2021, 20:46 [IST]
Other articles published on Feb 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+