Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ ನೆಲದಲ್ಲಿ ಮುಂದಿನ ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭ

New Zealand Ready To Resume Cricket From Next Month

ನ್ಯೂಜಿಲೆಂಡ್‌ ಕ್ರಿಕೆಟ್ ಸುದೀರ್ಘ ಏಳು ತಿಂಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ವೆಸ್ಟ್ ಇಂಡೀಸ್ ಹಾಗೂ ಪಾಕಿಸ್ತಾನದ ವಿರುದ್ಧ ಟಿ20 ಹಾಗೂ ಟೆಸ್ಟ್ ಸರಣಿಯ ಮೂಲಕ ಮುಂದಿನ ತಿಂಗಳಿನಿಂದ ನ್ಯೂಜಿಲೆಂಡ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪುನಾರಂಭಗೊಳ್ಳಲಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಮಂಗಳವಾರ ಘೋಷಿಸಿದೆ.

2020ರ ತವರಿನ ಸರಣಿಯ ಪರಿಷ್ಕೃತ ಪಟ್ಟಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ ಬಿಡುಗಡೆ ಮಾಡಿದೆ. ವೆಸ್ಟ್ ಇಂಡೀಸ್ ವಿರುದ್ಧ ನವೆಂಬರ್ 27 ರಿಂದ 3 ಟಿ20 ಹಾಗೂ 2 ಟೆಸ್ಟ್ ಸರಣಿಯ ಮೂಲಕ ಕಿವೀಸ್ ನೆಲದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರು ಚಾಲನೆ ದೊರೆಯಲಿದೆ.

ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೂರು ಟಿ20 ಪಂದ್ಯಗಳು 27, 29 ಹಾಗೂ 30 ರಂದು ನಡೆಯಲಿದ್ದು ಆಕ್ಲೆಂಡ್ ಹಾಗೂ ಟೌರಂಗದ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಹ್ಯಾಮಿಲ್ಟನ್‌ನ ಸೆಡಾನ್ ಪಾರ್ಕ್ ಹಾಗೂ ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ನ್ಯೂಜಿಲೆಂಡ್ ಬಳಿಕ ಪಾಕಿಸ್ಥಾನದ ವಿರುದ್ಧ 3 ಟಿ20 ಹಾಗೂ 2 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಎರಡನೇ ಟೆಸ್ಟ್ ಮೌಂಟ್ ಮೌಂಗನ್ಯೂನಲ್ಲಿ ಡಿಸೆಂಬರ್ 26ರ ಬಾಕ್ಸಿಂಗ್ ಡೇಯಂದು ನಡೆಯಲಿದೆ. ಬಳಿಕ ಆಸ್ಟ್ರೇಲಿಯಾದಲ್ಲಿ ಫೆಬ್ರವರಿ ಮತ್ತು ಮಾರ್ಚ್‌ನಲ್ಲಿ ನಡೆಯಲಿರುವ 5 ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಆಸ್ಟ್ರೇಲಿಯಾ ಸರಣಿಯ ಬಳಿಕ ಬಾಂಗ್ಲಾದೇಶದ ವಿರುದ್ಧ ಸರಣಿಯನ್ನು ಆಯೋಜನೆ ಮಾಡಲಿದೆ ನ್ಯೂಜಿಲೆಂಡ್. ಬಾಂಗ್ಲಾದೇಶದ ವಿರುದ್ಧ 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ನಡೆಯಲಿದೆ. ಮಾರ್ಚ್ 21 ರಿಂದ ಏಕದಿನ ಸರಣಿ ಆಯೋಜನೆಯಾಗಲಿದ್ದು ಒಂದು ವರ್ಷದ ಬಳಿಕ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ಆಡಲಿದೆ.

Story first published: Tuesday, September 29, 2020, 17:06 [IST]
Other articles published on Sep 29, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+