Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ ತಂಡ ಸೇರಿದ ಭಾರತದ ಬ್ಯಾಟಿಂಗ್ ಕೋಚ್

ಟೀಮ್ ಇಂಡಿಯಾವನ್ನು ಹೆಣೆಯಲು ನ್ಯೂಜಿಲೆಂಡ್‌ ಮಾಸ್ಟರ್‌ ಪ್ಲ್ಯಾನ್ ಸಿದ್ಧ ಪಡಿಸಿದೆ. ಈ ರಣ ತಂತ್ರವನ್ನು ಕಂಡು ನಿಜಕ್ಕೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್‌ ನಿಬ್ಬೆರಗಾಗಿದೆ. ಕಿವೀಸ್‌ ತಂಡ ಈ ರೀತಿ ನಡೆಯನ್ನು ಕೈ ಗೊಳ್ಳಬಹುದು ಎಂದು ಸಹ ಟೀಮ್ ಇಂಡಿಯಾ ಯೋಚಿಸಿರಲಿಲ್ಲ. ಆತಿಥೇಯ ತಂಡದ ಪ್ಲ್ಯಾನ್‌ಗೆ ವ್ಯತರಿಕ್ತವಾಗಿ ನ್ಯೂಜಿಲೆಂಡ್‌ ಪ್ಲ್ಯಾನ್ ಮಾಡಿದೆ.

ನ್ಯೂಜಿಲೆಂಡ್‌ ಸದ್ಯ ಭಾರತ ಪ್ರವಾಸದಲಿದೆ. ಈ ವೇಳೆ ಗ್ರೇಟರ್‌ ನೋಯ್ಡಾದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಟೆಸ್ಟ್‌ ಪಂದ್ಯವನ್ನು ಆಡಲಿದೆ. ಇದಕ್ಕೂ ಮುನ್ನ ಕಿವೀಸ್‌ ತಂಡ ಅಭ್ಯಾಸ ನಡೆಸಿದೆ. ಈ ಅಭ್ಯಾಸದ ಕ್ಯಾಂಪ್‌ಗೆ ಟೀಮ್ ಇಂಡಿಯಾ ಮಾಜಿ ಆಟಗಾರ ಒಬ್ಬ ಎಂಟ್ರಿ ನೀಡಿದ್ದಾರೆ. ಭಾರತದಲ್ಲಿ ಅಮೋಘ ಪ್ರದರ್ಶನ ನೀಡುವ ಉದ್ದೇಶವನ್ನು ಹೊಂದಿರುವ ನ್ಯೂಜಿಲೆಂಡ್‌ ಮಾಸ್ಟರ್‌ ಪ್ಲ್ಯಾನ್‌ ಎಲ್ಲರನ್ನು ಚಕಿತ ಗೊಳಿಸಿದೆ. ಸ್ಪಿನ್‌ ಬೌಲಿಂಗ್‌ ಆಡುವುದು ಹೇಗೆ ಎಂಬುದನ್ನೇ ನ್ಯೂಜಿಲೆಂಡ್‌ ಟಾರ್ಗೆಟ್‌ ಮಾಡಿದಂತೆ ಕಾಣುತ್ತಿದೆ.

New Zealand Ropes in Vikram Rathore and Rangana Herath for One-Off Test Against Afghanistan

ಕಿವೀಸ್‌ ತಂಡ ಸೇರಿದ ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್

ಭಾರತದ ವಿರುದ್ಧ ನಡೆಯಲಿರುವ ಟೆಸ್ಟ್‌ ಸರಣಿಯ ಉದ್ದೇಶದಿಂದಲೇ ನ್ಯೂಜಿಲೆಂಡ್ ಈ ರಣ ತಂತ್ರವನ್ನು ರೂಪಸಿಕೊಂಡಂತೆ ಕಾಣುತ್ತಿದೆ. ಟೀಮ್ ಇಂಡಿಯಾದ ಮಾಜಿ ಬ್ಯಾಟಿಂಗ್ ಕೋಚ್‌ ವಿಕ್ರಮ್‌ ರಾಥೋಡ್‌ ಅವರನ್ನು ತಮ್ಮ ಕ್ಯಾಂಪ್‌ಗೆ ಸೇರಿಸಿಕೊಂಡಿದೆ. ವಿಕ್ರಮ್‌ ಅವರು ಮಾಜಿ ಕೋಚ್‌ ರಾಹುಲ್‌ ದ್ರಾವಿಡ್ ಅಧಿಕಾರವಧಿಯಲ್ಲಿ ತಂಡದ ಬ್ಯಾಟಿಂಗ್ ಕೋಚ್‌ ಆಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ವಿಕ್ರಮ್ ರಾಥೋಡ್ ಅವರು 90 ರ ದಶಕದಲ್ಲಿ ಭಾರತದ ಪರ 6 ​​ಟೆಸ್ಟ್ ಪಂದ್ಯಗಳನ್ನು ಆಡಿದ್ದರು.

ವಿಕ್ರಮ್ ರಾಥೋಡ್ ಅವರನ್ನು ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ಗೆ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಈ ನಡೆ ಈಗ ಎಲ್ಲರ ಕಣ್ಣು ನೆಟ್ಟಗಾಗಿಸಿದೆ. ದೆಹಲಿ ಸಮೀಪದ ಗ್ರೇಟರ್ ನೋಯ್ಡಾದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ಗೆ ಸಿದ್ಧರಾಗಲು ಭಾರತ ತಂಡದ ಮಾಜಿ ಕೋಚ್ ವಿಕ್ರಮ್ ರಾಥೋಡ್ ಅವರನ್ನು ಸೇರಿಸಿಕೊಳ್ಳಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಹೇಳಿಕೆಯಲ್ಲಿ ತಿಳಿಸಿದೆ.

New Zealand Ropes in Vikram Rathore and Rangana Herath for One-Off Test Against Afghanistan

ಸ್ಪಿನ್ ಬೌಲಿಂಗ್ ಕೋಚ್‌ ಆಗಿ ಶ್ರೀಲಂಕಾ ಮಾಜಿ ಆಟಗಾರನ ನೇಮಕ

ಇನ್ನು ತಂಡದ ಸ್ಪಿನ್ ಬೌಲಿಂಗ್ ವಿಭಾಗವನ್ನು ಇನ್ನು ಚುರುಕು ಗೊಳಿಸಲು ನ್ಯೂಜಿಲೆಂಡ್‌ ಶ್ರೀಲಂಕಾದ ಮಾಜಿ ಸ್ಪಿನ್ ಬೌಲರ್‌ ರಂಗನಾ ಹೆರಾತ್‌ರನ್ನು ನೇಮಿಸಿಕೊಂಡಿದೆ. ಇವರನ್ನು ಏಷ್ಯಾದಲ್ಲಿ ನಡೆಯಲಿರುವ ಮೂರು ಪಂದ್ಯಗಳಿಗೆ ಕೋಚ್ ಆಗಿ ನೇಮಿಸಿದೆ. ಇವರು ಪಾಕ್ ಸ್ಪಿನ್ ಬೌಲರ್‌ ಸಕ್ಲೇನ್‌ ಮುಷ್ತಾಕ್‌ ಅವರ ಸ್ಥಾನವನ್ನು ತುಂಬಿದ್ದಾರೆ.

ಇವರಿಬ್ಬರು ತಂಡಕ್ಕೆ ಸೇರ್ಪಡೆ ಆಗುವುದರಿಂದ ತಂಡ ಮತ್ತಷ್ಟು ಬಲಗೊಳ್ಳಲಿದೆ ಎಂದು ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ ಹೇಳಿದ್ದಾರೆ. ರಂಗನಾ ಹಾಗೂ ವಿಕ್ರಮ್ ಅವರನ್ನು ಸೇರಿಸಿಕೊಂಡಿದ್ದು ಖುಷಿಯ ವಿಚಾರ. ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯವನ್ನು ಆಡಿದ ನಂತರ ನ್ಯೂಜಿಲೆಂಡ್ ತಂಡ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

Story first published: Friday, September 6, 2024, 12:23 [IST]
Other articles published on Sep 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+