ನ್ಯೂಜಿಲೆಂಡ್‌ನ ಕೈಲ್ ಜೇಮಿಸನ್‌ಗೆ 15 ಶೇ. ದಂಡ ವಿಧಿಸಿದ ಐಸಿಸಿ

ಕ್ರೈಸ್ಟ್‌ಚರ್ಚ್: ನ್ಯೂಜಿಲೆಂಡ್‌ನ ವೇಗಿ, ಆಲ್ ರೌಂಡರ್ ಕೈಲ್ ಜೇಮಿಸನ್‌ಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯದ ಸಂಭಾವನೆಯ ಶೇ. 15ರಷ್ಟು ದಂಡ ವಿಧಿಸಿದೆ. ಕ್ರೈಸ್ಟ್ ಚರ್ಚ್‌ನಲ್ಲಿ ಮಾರ್ಚ್ 23ರಂದು ನಡೆದಿದ್ದ ನ್ಯೂಜಿಲೆಂಡ್-ಬಾಂಗ್ಲಾದೇಶ ದ್ವಿತೀಯ ಏಕದಿನ ಪಂದ್ಯದಲ್ಲಿ ಎಲ್ಲೆ ಮೀರಿ ವರ್ತಿಸಿದ್ದಕ್ಕಾಗಿ ಜೇಮಿಸನ್ ಐಸಿಸಿ ಶಿಕ್ಷೆಗೆ ಗುರಿಯಾಗಿದ್ದಾರೆ.
ಬಾಂಗ್ಲಾದೇಶದ ಇನ್ನಿಂಗ್ಸ್ ವೇಳೆ ಕೈಲ್ ಜೇಮಿಸನ್ ಓವರ್ ಮಾಡುತ್ತಿದ್ದಾಗ ಅವರಿಗೆ ತಮೀಮ್ ಇಕ್ಬಾಲ್ ಅವರ ಕ್ಯಾಚ್ ದೊರೆಯುವುದರಲ್ಲಿತ್ತು. ಅದನ್ನು ಪರಿಶೀಲಿಸಿದ ಟಿವಿ ಅಂಪೈರ್, ಜೇಮಿಸನ್ ಕ್ಯಾಚ್ ಸರಿಯಾಗಿ ಪೂರೈಸಲಿಲ್ಲ ಎಂದು ನಾಟ್‌ಔಟ್ ತೀರ್ಪು ನೀಡಿದ್ದರು.
ಅಂಪೈರ್ ತೀರ್ಪು ತನ್ನ ಪರವಾಗಿ ಬಾರದಿದ್ದಾಗ ಸಿಟ್ಟಾದ ಜೇಮಿಸನ್ ಸಿಟ್ಟನ್ನು ಮೈದಾನದಲ್ಲೇ ತೋರಿಕೊಂಡಿದ್ದರು. ಹೀಗಾಗಿ ಕೈಲ್‌ಗೆ ದಂಡ ವಿಧಿಸಲಾಗಿದೆ. ಜೇಮಿಸನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಜೇಮಿಸನ್ ರಾಯಲ್ ಚಾಲೆಂಜರ್ಸ್ ಪರ ಆಡುತ್ತಿದ್ದಾರೆ.
26ರ ಹರೆಯದ ಕೈಲ್ ಅವರ ನಡತೆಯ ಪಟ್ಟಿಗೆ ಒಂದು ಡೀಮೆರಿಟ್ ಪಾಯಿಂಟ್ ನೀಡಲಾಗಿದೆ. ಪಂದ್ಯದಲ್ಲಿ 10 ಓವರ್ ಎಸೆದಿದ್ದ ಜೇಮಿಸನ್ 36 ರನ್‌ಗೆ 1 ವಿಕೆಟ್ ಪಡೆದಿದ್ದರು. ನ್ಯೂಜಿಲೆಂಡ್ 5 ವಿಕೆಟ್‌ಗಳ ಜಯದೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2-0ಯ ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications