Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ

ಮುಂಬೈ, ಸೆ. 12: ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗೆ ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸೋಮವಾರ ಪ್ರಕಟಿಸಿದೆ. ವಿರಾಟ್ ಕೊಹ್ಲಿ ನೇತೃತ್ವದ ತಂಡದಲ್ಲಿ ಯಾವುದೇ ಹೊಸ ಬದಲಾವಣೆ ಕಂಡು ಬಂದಿಲ್ಲ.

ಭಾರತ ವಿರುದ್ಧ ಸೆಪ್ಟೆಂಬರ್ 22 ರಿಂದ ಆರಂಭವಾಗಲಿರುವ 3 ಟೆಸ್ಟ್‌ ಕ್ರಿಕೆಟ್ ಸರಣಿಗೆ ಈಗಾಗಲೇ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. [ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ]

ಸೆ.22 ರಿಂದ ಅಕ್ಟೋಬರ್ 12 ರ ವರೆಗೆ ಮೂರು ಟೆಸ್ಟ್ ಸರಣಿ ಪಂದ್ಯಗಳು ನಡೆಯಲಿವೆ. ನಂತರ ಅಕ್ಟೋಬರ್ 19 ರಿಂದ ಅ.29 ರ ವರೆಗೆ 5 ಏಕದಿನ ಪಂದ್ಯಗಳನ್ನು ಭಾರತ ವಿರುದ್ಧ ಆಡಲಿದೆ. [ನ್ಯೂಜಿಲೆಂಡ್- ಭಾರತ ಟೆಸ್ಟ್, ಏಕದಿನ ಸರಣಿ ವೇಳಾಪಟ್ಟಿ]

Team India for New Zealand Test Series announced

ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರಾ, ಅಜಿಂಕ್ಯ ರಹಾನೆ, ಮುರಳಿ ವಿಜಯ್, ರೋಹಿತ್ ಶರ್ಮ, ಆರ್ ಅಶ್ವಿನ್, ವೃದ್ಧಿಮಾನ್ ಸಹಾ, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಇಶಾಂತ್ ಶರ್ಮ, ಭುವನೇಶ್ವರ್ ಕುಮಾರ್, ಶಿಖರ್ ಧವನ್, ಅಮಿತ್ ಮಿಶ್ರಾ ಹಾಗೂ ಉಮೇಶ್ ಯಾದವ್.

3 ಟೆಸ್ಟ್ ಸರಣಿ ವೇಳಾಪಟ್ಟಿ:
* ಮೊದಲ ಟೆಸ್ಟ್ : ಸೆಪ್ಟೆಂಬರ್ 22 ರಿಂದ 26, -ಗ್ರೀನ್ ಪಾರ್ಕ್ ಕಾನ್ಪುರ.
* ಎರಡನೇ ಟೆಸ್ಟ್ : ಸೆ.30 ರಿಂದ ಅಕ್ಟೋಬರ್ 4 - ಇಂದೋರ್.
* ಮೂರನೇ ಟೆಸ್ಟ್ : ಅಕ್ಟೋಬರ್ 8 ರಿಂದ 12 - ಈಡನ್ ಗಾರ್ಡನ್ ಕೊಲ್ಕತ್ತಾ.


(ಒನ್ಇಂಡಿಯಾ ಸುದ್ದಿ)

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+