T20 World Cup 2024: ಈ ಬಾರಿಯೂ ಐಸಿಸಿ ಟ್ರೋಫಿ ಗೆಲ್ಲುವ ನ್ಯೂಜಿಲೆಂಡ್ ಕನಸು ಭಗ್ನ; ಗ್ರೂಪ್ ಹಂತದಲ್ಲೇ ಕೇನ್ಸ್ ಪಡೆ ಔಟ್!
ಜೂನ್ 14 ಶುಕ್ರವಾರ, ವಿಶ್ವದ ಅಗ್ರ ಕ್ರಿಕೆಟ್ ತಂಡಗಳ ಪೈಕಿ ನ್ಯೂಜಿಲೆಂಡ್ ಕೂಡ ಬಲಿಷ್ಠವಾಗಿದ್ದು, ಈವರೆಗೂ ಒಂದು ಐಸಿಸಿ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್ ತಂಡದಲ್ಲಿ ಟಾಪ್ ಕ್ಲಾಸ್ ಬ್ಯಾಟರ್‌ಗಳು ಮತ್ತು ಅಪಾಯಕಾರಿ ಬೌಲರ್‌ಗಳು ಇದ್ದರೂ ಕೂಡ ಐಸಿಸಿ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿಲ್ಲ.
ಪ್ರಸ್ತುತ ನಡೆಯುತ್ತಿರುವ 2024ರ ಟಿ20 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡ ಉತ್ತಮ ಆರಂಭ ಪಡೆಯುವಲ್ಲಿ ಎಡುವಿದೆ. ಪರಿಣಾಮ ಇಂದು (ಜೂನ್ 14) ಪಪುವಾ ನ್ಯೂಗಿನಿ ವಿರುದ್ಧ ಅಫ್ಘಾನಿಸ್ತಾನ ಗೆದ್ದು ಕೇನ್ ವಿಲಿಯಮ್ಸನ್ ಅವರ ನಾಯಕತ್ವದ ನ್ಯೂಜಿಲೆಂಡ್ ತಂಡವನ್ನು ಟಿ20 ವಿಶ್ವಕಪ್ ಟೂರ್ನಿಯಿಂದ ಹೊರ ಹಾಕಿದೆ.

ಇದರೊಂದಿಗೆ ಈ ಬಾರಿಯೂ ಐಸಿಸಿ ಟ್ರೋಫಿ ಗೆಲ್ಲುವ ನ್ಯೂಜಿಲೆಂಡ್ ಕನಸು ಭಗ್ನವಾಗಿದೆ. ಈಗ ನ್ಯೂಜಿಲೆಂಡ್ ಲೀಗ್ ಹಂತದ ತನ್ನ ಕೊನೆಯ 2 ಪಂದ್ಯಗಳನ್ನು ಆಡಲಿದೆ. ಆದರೆ ಅಗ್ರ 8 ತಂಡಗಳೊಂದಿಗೆ ಮುಂದಿನ ಸುತ್ತಿಗೆ ಮುನ್ನಡೆಯಲು ಸಾಧ್ಯವಾಗುವುದಿಲ್ಲ.
ಅಲ್ಲಿ ಸೂಪರ್-8 ತಂಡಗಳ ನಡುವೆ ಅಗ್ರ ನಾಲ್ಕು ತಂಡಗಳಿಗೆ ಪ್ರಬಲ ಪೈಪೋಟಿ ನಡೆಯಲಿದೆ. ಇದಾದ ನಂತರ ಟಿ20 ವಿಶ್ವಕಪ್ 2024ರ ನಾಲ್ಕು ಸೆಮಿ-ಫೈನಲಿಸ್ಟ್ ತಂಡಗಳ ನಡುವೆ ಪ್ರಶಸ್ತಿ ಸುತ್ತಿನ ಪಂದ್ಯಗಳು ನಡೆಯಲಿವೆ.
ಟಿ20 ವಿಶ್ವಕಪ್‌ನ 'ಸಿ' ಗುಂಪಿನಲ್ಲಿರುವ ನ್ಯೂಜಿಲೆಂಡ್ ಇದುವರೆಗೆ 2 ಪಂದ್ಯಗಳನ್ನು ಮಾತ್ರ ಆಡಿದೆ. ಈ ಎರಡೂ ಪಂದ್ಯಗಳಲ್ಲಿ ಮೊದಲು ಅಫ್ಘಾನಿಸ್ತಾನ ತಂಡದ ವಿರುದ್ಧ 84 ರನ್‌ಗಳಿಂದ ಸೋತರೆ, ವೆಸ್ಟ್ ಇಂಡೀಸ್ ಎದುರು 13 ರನ್‌ಗಳಿಂದ ಹೀನಾಯವಾಗಿ ಸೋಲು ಕಂಡಿತ್ತು.
ಪ್ರಸ್ತುತ 'ಸಿ' ಗುಂಪಿನ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್ 2 ಪಂದ್ಯಗಳ ನಂತರ 0 ಅಂಕಗಳನ್ನು ಹೊಂದಿದೆ. ಇಂತಹ ಪರಿಸ್ಥಿತಿಯಲ್ಲಿ ಉಳಿದೆರಡು ಪಂದ್ಯಗಳನ್ನು ಗೆದ್ದರೂ ಕೇವಲ 4 ಅಂಕ ಗಳಿಸಿಲಿದೆ. ಈಗಾಗಲೇ ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ತಲಾ 6 ಅಂಕಗಳೊಂದಿಗೆ ಸೂಪರ್-8ಕ್ಕೆ ಲಗ್ಗೆ ಇಟ್ಟಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications