IND vs NZ 1st Test: ನ್ಯೂಜಿಲೆಂಡ್ ತಂಡಕ್ಕೆ ಭಾರೀ ಹಿನ್ನಡೆ; ಸ್ಟಾರ್ ಬೌಲರ್ ಹೊರಗೆ
ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಇತ್ತೀಚೆಗೆ ಶ್ರೀಲಂಕಾ ಪ್ರವಾಸದ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ತಂಡ ಹೀನಾಯ ಸೋಲು ಕಂಡಿದೆ. ಇತ್ತ ಪ್ರವಾಸಿ ಬಾಂಗ್ಲಾದೇಶವನ್ನು 2-0 ಅಂತರದಿಂದ ಟೆಸ್ಟ್ ಸರಣಿಯನ್ನು ಭಾರತ ಗೆದ್ದು ಇತಿಹಾಸ ನಿರ್ಮಿಸಿದೆ.
ಇದೀಗ ಭಾರತ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೆ ಒಂದು ದಿನ ಮುನ್ನ ನ್ಯೂಜಿಲೆಂಡ್ ದೊಡ್ಡ ಭಾರೀ ಹಿನ್ನಡೆ ಅನುಭವಿಸಿದೆ. ವೇಗದ ಬೌಲರ್ ಬೆನ್ ಸಿಯರ್ಸ್ ಸಂಪೂರ್ಣ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ. ಗಾಯದ ಸಮಸ್ಯೆಯಿಂದ ತವರಿಗೆ ಮರಳಲಿದ್ದು, ಮೊದಲ ಟೆಸ್ಟ್ ಬುಧವಾರ (ಅಕ್ಟೋಬರ್ 16) ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಶುಕ್ರವಾರ ನ್ಯೂಜಿಲೆಂಡ್ ತಂಡದೊಂದಿಗೆ ಬೆನ್ ಸಿಯರ್ಸ್ ಅವರು ಭಾರತಕ್ಕೆ ಬಂದಿದ್ದರು. ಆದರೆ ಮೊಣಕಾಲಿನ ಗಾಯದಿಂದಾಗಿ ಸಿಯರ್ಸ್‌ಗೆ ಸರಣಿಯಲ್ಲಿ ಆಡಲು ಸಾಧ್ಯವಾಗದ ಕಾರಣ ತವರಿಗೆ ತೆರಳಿದ್ದಾರೆ. ಅವರ ಬದಲಿಗೆ ಅನ್‌ಕ್ಯಾಪ್ಡ್ ವೇಗದ ಬೌಲರ್ ಜೇಕಬ್ ಡಫಿ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ನ್ಯೂಜಿಲೆಂಡ್ ತಂಡ ಶ್ರೀಲಂಕಾದಲ್ಲಿ ನಡೆದ 2 ಟೆಸ್ಟ್‌ಗಳ ಸರಣಿಯನ್ನು 0-2 ಅಂತರದಲ್ಲಿ ಕಳೆದುಕೊಂಡಿತ್ತು. ಇದೀಗ ಕಿವೀಸ್ ಪಡೆ ಕಣ್ಣು ಭಾರತದ ವಿರುದ್ಧ ಟೆಸ್ಟ್ ಸರಣಿ ಮೇಲಿದೆ. ಆದರೆ ಸರಣಿ ಪ್ರಾರಂಭವಾಗುವ ಮೊದಲೇ ತಂಡಕ್ಕೆ ಹಿನ್ನಡೆಯಾಗಿದೆ. ಜೊತೆಗೆ ಭಾರತವನ್ನು ತವರಿನಲ್ಲಿ ಸೋಲಿಸುವುದು ಕಿವೀಸ್ ಪಡೆಗೆ ಸುಲಭದ ಮಾತಲ್ಲ.
ಗಾಯಗೊಂಡಿದ್ದೇಗೆ?
ಇತ್ತೀಚಿಗೆ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಸಿಯರ್ಸ್ ತನ್ನ ಎಡ ಮೊಣಕಾಲು ನೋವು ಅನುಭವಿಸಿದ್ದರು. ಇದಾದ ಬಳಿಕ ಚೇತರಿಸಿಕೊಂಡಿದ ಅವರನ್ನು ಕಳೆದ ವಾರ ನ್ಯೂಜಿಲೆಂಡ್‌ನಲ್ಲಿ ಸ್ಕ್ಯಾನ್‌ಗೆ ಒಳಪಡಿಸಲಾಗಿತ್ತು. ನ್ಯೂಜಿಲೆಂಡ್ ಕ್ರಿಕೆಟ್ ಹೊರಡಿಸಿರುವ ಪ್ರಕಾರ, 'ಶ್ರೀಲಂಕಾದಲ್ಲಿ ಸ್ಕ್ಯಾನ್ ಮಾಡಿದ ನಂತರ ಅವರ ಭಾರತ ಪ್ರವಾಸವನ್ನು ವಿಳಂಬಗೊಳಿಸಲಾಯಿತು. ವೈದ್ಯಕೀಯ ತಂಡದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರನ್ನು ಸರಣಿಯಿಂದ ಹೊರಗಿಡಲಾಗಿದೆ.
ಕೋಚ್ ಹೇಳಿದ್ದೇನು?
ನ್ಯೂಜಿಲೆಂಡ್ ಹೆಡ್ ಕೋಚ್ ಗ್ಯಾರಿ ಸ್ಟೆಡ್ ಅವರು ಸಿಯರ್ಸ್ ಅವರನ್ನು ಶ್ಲಾಘಿಸಿದ್ದಾರೆ. ಸಿಯರ್ಸ್ ಅವರನ್ನು
ಕಳೆದುಕೊಂಡಿರುವುದು ನಿರಾಶಾದಾಯಕವಾಗಿದೆ. ಅವರು ತಂಡದಿಂದ ಹೆಚ್ಚು ಕಾಲ ದೂರವಿರಬಾರದು ಎಂದು ಫ್ರಾರ್ಥಿಸುತ್ತೇನೆ. ಇದರಿಂದ ನಾವು ತುಂಬಾ ನಿರಾಶೆಗೊಂಡಿದ್ದೇವೆ. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅದ್ಭುತ ಆರಂಭವನ್ನು ಮಾಡಿದ್ದರು. ಜೊತೆಗೆ ತಂಡಕ್ಕೆ ವೇಗದ ಬೌಲಿಂಗ್‌ನಲ್ಲಿ ಅವರು ಉತ್ತಮ ಆಯ್ಕೆಯಾಗಿದ್ದರು. ಮುಂದಿನ ಎಷ್ಟು ದಿನಗಳ ವರೆಗೆ ಅವರು ಆಟದಿಂದ ದೂರ ಉಳಿಯಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಅವರು ಬೇಗ ಚೇತರಿಸಿಕೊಳ್ಳುತ್ತಾರೆ ಎಂಬ ಭರವಸೆ ನಮಗಿದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications