Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

ವಿಶ್ವಕಪ್ ಟೂರ್ನಿ ನಡೆಯುತ್ತಿರುವ ಮಧ್ಯೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳು ಮುಂದಿನ ಪ್ರಮುಖ ಟೆಸ್ಟ್ ಸರಣಿಯೊಂದಕ್ಕೆ ತಂಡವನ್ನು ಪ್ರಕಟಿಸಿದೆ. ವಿಶ್ವಕಪ್ ಟೂರ್ನಿಯ ಬಳಿಕ ನ್ಯೂಜಿಲೆಂಡ್ ಬಾಂಗ್ಲಾದೇಶ ಪ್ರವಾಸ ಕೈಕೊಳ್ಳಲಿದೆ. ಈ ಪ್ರವಾಸಕ್ಕೆ ಕಿವಿಸ್ ಪಡೆಯನ್ನು ಇಂದು ಘೋಷಣೆ ಮಾಡಲಾಗಿದೆ. ಈ ತಂಡಕ್ಕೆ ಸ್ಯಾಂಟ್ನರ್, ರಚಿನ್ ರವೀಂದ್ರ ಹಾಗೂ ಕೈಲ್ ಜೇಮಿಸನ್ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಐಸಿಸಿ ವಿಶ್ವ ಟೆಸ್ಟ್ ಚಾಂಪೊಯನ್‌ಶಿಪ್‌ನ ಭಾಗವಾದ ಸರಣಿಯಲ್ಲಿ ಕಿವೀಸ್ ಬಾಂಗ್ಲಾದೇಶವನ್ನು ಎದುರಿಸಲಿದೆ. ಸ್ಪಿನ್ನರ್‌ಗಳನ್ನು ಗಮನದಲ್ಲಿಟ್ಟುಕೊಂಡು ಈ ತಂಡವನ್ನು ಆಯ್ಕೆ ಮಾಡಿಕೊಂಡಿರುವುದು ಇಲ್ಲಿ ಸ್ಪಷ್ಟವಾಗಿದೆ. ಈ ಸರಣಿಯ ಮೂಲಕ 2021ರಲ್ಲಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ ಕಿವೀಸ್ ಮತ್ತೆ ಆ ಪ್ರಯತ್ನ ಮುಂದುವರಿಸಲು ಸಿದ್ಧತೆ ನಡೆಸಿದೆ.

New Zealand test squad announced for series against Bangladesh, Rachin Ravindra returns

ಬಾಂಗ್ಲಾದೇಶದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಸ್ಯಾಂಟ್ನರ್ ಜೊತೆಗೆ ತಂಡದಲ್ಲಿ ಅಜಾಜ್ ಪಟೇಲ್ ಮತ್ತು ಇಶ್ ಸೋಧಿ ಪ್ರಾಥಮಿಕ ಸ್ಪಿನ್ ಬೌಲರ್‌ಗಳಾಗಿ ಆಯ್ಕೆಯಾಗಿದ್ದಾರೆ. ಸ್ಯಾಂಟ್ನರ್ ತಂಡದ ಪ್ರಮುಖ ಸ್ಪಿನ್ ಅಸ್ತ್ರವಾಗಿದ್ದು ಈ ಬಾರಿಯ ವಿಶ್ವಕಪ್‌ನಲ್ಲಿ 14 ವಿಕೆಟ್‌ಗಳನ್ನು ಕಬಳಿಸಿ ಕಿವೀಸ್ ಪರ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಆದರೆ ಸ್ಯಾಂಟ್ನರ್ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದು 2021ರಲ್ಲಿ ಎನ್ನುವುದು ಗಮನಾರ್ಹ.

"ಬಾಂಗ್ಲಾದೇಶದಲ್ಲಿ ಯಶಸ್ವಿಯಾಗಿ ಪೈಪೋಟಿ ನೀಡಬಹುದಾದ ತಂಡವನ್ನು ನಾವು ಆಯ್ಕೆ ಮಾಡಿದ್ದೇವೆ. ಅಜಾಜ್, ಇಶ್, ಮಿಚ್, ಗ್ಲೆನ್ (ಫಿಲಿಪ್ಸ್) ಮತ್ತು ರಾಚಿನ್ ಅವರೊಂದಿಗೆ, ನಾವು ಸರಣಿಯ ಸಮಯದಲ್ಲಿ ಉತ್ತಮ ವೈವಿಧ್ಯತೆ ಮತ್ತು ಆಯ್ಕೆಗಳನ್ನು ನೀಡುವ ಪ್ರಬಲ ಸ್ಪಿನ್ ವಿಭಾಗವನ್ನು ಹೊಂದಿದ್ದೇವೆ" ಎಂದು ನ್ಯೂಜಿಲೆಂಡ್ ಆಯ್ಕೆ ಮಂಡಳಿಯ ಮುಖ್ಯಸ್ಥ ಸ್ಯಾಮ್ ವೆಲ್ಸ್ ಹೇಳಿಕೆ ನೀಡಿದ್ದಾರೆ.

ಆಲ್‌ರೌಂಡರ್‌ಗಳಾದ ರವೀಂದ್ರ ಮತ್ತು ಫಿಲಿಪ್ಸ್‌ನ ಕಮ್‌ಬ್ಯಾಕ್ ಮಾಡಿರುವುದು ನ್ಯೂಜಿಲೆಂಡ್‌ನ ಸ್ಪಿನ್ ವಿಭಾಗಕ್ಕೆ ಹೆಚ್ಚಿನ ಬಲ ಬಂದಂತಾಗಿದೆ. ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ನಲ್ಲಿ ಇವರ ಪ್ರಭಾವಶಾಲಿ ಪ್ರದರ್ಶನ ಟೆಸ್ಟ ತಂಡದಲ್ಲಿಯೂ ಈ ಆಟಗಾರರಿಗೆ ಅವಕಾಶ ಮಾಡಿಕೊಟ್ಟಿದೆ.

ನ್ಯೂಜಿಲೆಂಡ್ ಸ್ಕ್ವಾಡ್: ಟಿಮ್ ಸೌಥಿ (ನಾಯಕ), ಟಾಮ್ ಬ್ಲಂಡೆಲ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಕೈಲ್ ಜೇಮಿಸನ್, ಟಾಮ್ ಲ್ಯಾಥಮ್, ಡ್ಯಾರಿಲ್ ಮಿಚೆಲ್, ಹೆನ್ರಿ ನಿಕೋಲ್ಸ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.

Story first published: Tuesday, November 7, 2023, 12:44 [IST]
Other articles published on Nov 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+