ಟಿ20: ಮನ್ರೋ ತ್ವರಿತಗತಿಯಲ್ಲಿ ಶತಕ, ಬಾಂಗ್ಲಾ ಮಣಿಸಿದ ಕಿವೀಸ್
ಬೆಂಗಳೂರು, ಜನವರಿ 06: ನ್ಯೂಜಿಲೆಂಡಿನ ಕಾಲಿನ್ ಮನ್ರೋ ಅವರು 54 ಎಸೆತಗಳಲ್ಲಿ 101ರನ್ ಚೆಚ್ಚಿದ್ದಾರೆ. ಮೌಂಟ್ ಮಾಂಗಾನೂಯಿಯಲ್ಲಿ ಶುಕ್ರವಾರದಂದು ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟ್ವೆಂಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಕಿವೀಸ್ 48ರನ್ ಗಳಿಂದ ಗೆದ್ದುಕೊಂಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿವೀಸ್ ತಂಡಕ್ಕೆ ಕಾಲಿನ್ ಮನ್ರೋ ಆಸರೆಯಾದರು. 7 ಬೌಂಡರಿ, 7 ಸಿಕ್ಸರ್ ಇದ್ದ ಮನ್ರೋ ಅವರ ಶತಕದ ನೆರವಿನಿಂದ ಕಿವೀಸ್ ತಂಡ 20 ಓವರ್ ಗಳಲ್ಲಿ 195/7 ಸ್ಕೋರ್ ಮಾಡಿತು.

ಎಡಗೈ ಬ್ಯಾಟ್ಸ್ ಮನ್ ಮನ್ರೋ ಹಾಗೂ ಟಾಮ್ ಬ್ರೂಸ್ ಅವರು ಐದನೇ ವಿಕೆಟ್ ಗೆ 123 ರನ್ ಗಳ ಜೊತೆಯಾಟ ಸಾಧಿಸಿದರು. ಬ್ರೂಸ್ ಅವರು 39 ಎಸೆತಗಳಲ್ಲಿ 59ರನ್ ಚೆಚ್ಚಿದರು. ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಬಾಂಗ್ಲಾದೇಶ 48ರನ್ ಗಳಿಂದ ಸೋಲು ಕಂಡಿದೆ. ಮೂರು ಪಂದ್ಯಗಳ ಸರಣಿಯ ಅಂತಿಮ ಪಂದ್ಯ ಭಾನುವಾರದಂದು ನಿಗದಿಯಾಗಿದೆ. ಸರಣಿಯನ್ನು ಕಿವೀಸ್ 2-0 ಅಂತರದಿಂದ ಗೆದ್ದುಕೊಂಡಿದೆ/
(ಎಎಫ್ ಪಿ)
Story first published: Wednesday, January 3, 2018, 10:04 [IST]
Other articles published on Jan 3, 2018
Read in English: 2nd T20I: Munro smashes quickfire 101
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications