ಬಾಂಗ್ಲಾದೇಶಕ್ಕೆ ನ್ಯೂಜಿಲೆಂಡ್ ಪ್ರವಾಸ ಸರಣಿ ಮುಂದೂಡಿಕೆ

ಧಾಕಾ, ಜೂನ್ 23: ಟೆಸ್ಟ್ ಸರಣಿಯನ್ನಾಡುವುದಕ್ಕಾಗಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳುವುದರಲ್ಲಿತ್ತು. ಆದರೆ ಕೊರೊನಾವೈರಸ್‌ನಿಂದಾಗಿ ಈ ಪ್ರವಾಸ ಸರಣಿ ಮುಂದೂಡಲ್ಪಟ್ಟಿದೆ. ಬಾಂಗ್ಲಾ ಕ್ರಿಕೆಟ್ ಬೋರ್ಡ್ (ಬಿಸಿಬಿ) ಈ ವಿಚಾರವನ್ನು ಮಂಗಳವಾರ (ಜೂನ್ 23) ತಿಳಿಸಿದೆ.
ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಭಾಗವಾಗಿ ಕೇನ್ ವಿಲಿಯಮ್ಸನ್ ಪಡೆ ಆಗಸ್ಟ್ ತಿಂಗಳಲ್ಲಿ ಬಾಂಗ್ಲಾಕ್ಕೆ ಪ್ರವಾಸ ಹೊರಡಲಿತ್ತು. ಬಿಸಿಬಿ ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್‌ಗಳು ಸೂಕ್ತ ಬದಲಿ ದಿನಾಂಕ ಪ್ರಕಟಿಸಲು ಕಾರ್ಯ ನಿರ್ವಹಿಸುತ್ತಿವೆ ಎಂದು ಬಾಂಗ್ಲಾ ಕ್ರಿಕೆಟ್ ಬೋರ್ಡ್ ಹೇಳಿಕೆಯ ಮೂಲಕ ಮಾಹಿತಿ ನೀಡಿದೆ.
'ಸದ್ಯದ ಕೋವಿಡ್-19 ಸಂದರ್ಭದಲ್ಲಿ 2020ರ ಆಗಸ್ಟ್‌ನಲ್ಲಿ ಸಂಪೂರ್ಣ ಕ್ರಿಕೆಟ್ ಸರಣಿ ನಡೆಸುವುದು ಸಿದ್ಧತೆಯ ದೃಷ್ಟಿಯಲ್ಲಿ ನಿಜಕ್ಕೂ ಸವಾಲಿನದ್ದು. ಅಲ್ಲದೆ ನಾವು ಆಟಗಾರರು, ಸಿಬ್ಬಂದಿ ಮತ್ತು ಮಧ್ಯಸ್ಥಗಾರರ ಸುರಕ್ಷೆ ಮತ್ತು ಆರೋಗ್ಯ ವಿಚಾರದಲ್ಲಿ ತೊಂದರೆ ಎದುರಿಸುವ ಅವಕಾಶಕ್ಕೆ ಎಡೆ ಮಾಡಿಕೊಡಲಾರೆವು,' ಎಂದು ಬಿಸಿಬಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಝಾಮುದ್ದೀನ್ ಚೌಧರಿ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಈಗಾಗಲೇ ಮೂವರು ಕ್ರಿಕೆಟಿಗರು ಕೊರೊನಾವೈರಸ್ ಸೋಂಕಿಗೀಡಾಗಿದ್ದಾರೆ. ಬಾಂಗ್ಲಾ ಮಾಜಿ ನಾಯಕ ಮಶ್ರಾಫೆ ಮೊರ್ತಾಝಾ, ಸ್ಪಿನ್ನರ್ ನಝ್ಮುಲ್ ಇಸ್ಲಾಮ್ ಮತ್ತು ತಮೀಮ್ ಇಕ್ಬಾಲ್ ಅಣ್ಣ ಮಾಜಿ ಕ್ರಿಕೆಟಿಗ ನಫೀಸ್ ಇಕ್ಬಾಲ್‌ಗೆ ಕೊರೊನಾ ಪಾಸಿಟಿವ್ ಬಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications