For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ vs ನ್ಯೂಜಿಲೆಂಡ್: ತ್ರಿಕೋನ ಸರಣಿ, 3ನೇ ಪಂದ್ಯ, ಟಾಸ್ ರಿಪೋರ್ಟ್, Live ಸ್ಕೋರ್

New Zealand vs Bangladesh, 3rd Match,Tri-Series: Toss report, playing XI and Live score

ನ್ಯೂಜಿಲೆಂಡ್‌ನಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಇಂದು ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ರವಾಸಿ ಬಾಂಗ್ಲಾದೇಶ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ.

ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ಈ ಎರಡು ತಂಡಗಳು ಕೂಡ ಈ ಸರಣಿಯ ಆರಂಬಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಅನುಭವಿಸಿದೆ. ಹೀಗಾಗಿ ಎರಡು ತಂಡಗಳಿಗೂ ಇಂದಿನ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಹೀಗಾಗಿ ಈ ಪಂದ್ಯದ ಫಲಿತಾಂಶ ಕುತೂಹಲ ಮೂಡಿಸಿದೆ. ಆತೊಥೆಯ ನ್ಯೂಜಿಲೆಂಡ್ ತಂಡ ಸಹಜವಾಗಿಯೇ ಪಂದ್ಯ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

Live ಸ್ಕೋರ್‌ಕಾರ್ಡ್ ಹೀಗಿದೆ

1
54232

ಭರ್ಜರಿ ಪ್ರದರ್ಶನ ನೀಡಿದೆ ಪಾಕಿಸ್ತಾನ: ಈ ಸರಣಿಯಲ್ಲಿ ಪಾಕಿಸ್ತಾನ ತಂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಮೊದಲ ಎರಡು ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿದೆ. ಈ ತ್ರಿಕೋನ ಸರಣಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಿದ್ದ ಪಾಕಿಸ್ತಾನ ತಂಡ ಆ ಪಂದ್ಯದಲ್ಲಿ 21 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸಿತ್ತು. ಅದಾದ ಬಳಿಕ ಎರಡನೇ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡವನ್ನು ಎದುರಿಸಿದ ಸಂದರ್ಭದಲ್ಲಿಯೂ ಮೇಲುಗೂ ಸಾಧಿಸಿದೆ. ಈ ಪಂದ್ಯದಲ್ಲಿ ಭರ್ಜರಿ 6 ವಿಕೆಟ್‌ಗಳ ಅಂತರದ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ನ್ಯೂಜಿಲೆಂಡ್ ಆಡುವ ಬಳಗ: ಫಿನ್ ಅಲೆನ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಮೈಕೆಲ್ ಬ್ರೇಸ್ವೆಲ್, ಇಶ್ ಸೋಧಿ, ಆಡಮ್ ಮಿಲ್ನೆ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್

ಬೆಂಚ್: ಬ್ಲೇರ್ ಟಿಕ್ನರ್, ಡೇನ್ ಕ್ಲೀವರ್, ಲಾಕಿ ಫರ್ಗುಸನ್, ಮಿಚೆಲ್ ಸ್ಯಾಂಟ್ನರ್, ಮಾರ್ಟಿನ್ ಗಪ್ಟಿಲ್

ಬಾಂಗ್ಲಾದೇಶ ಆಡುವ ಬಳಗ: ಮೆಹಿದಿ ಹಸನ್ ಮಿರಾಜ್, ನಜ್ಮುಲ್ ಹೊಸೈನ್ ಶಾಂಟೊ, ಲಿಟ್ಟನ್ ದಾಸ್, ಶಕೀಬ್ ಅಲ್ ಹಸನ್ (ನಾಯಕ), ಅಫೀಫ್ ಹೊಸೈನ್, ಮೊಸದ್ದೆಕ್ ಹೊಸೈನ್, ಯಾಸಿರ್ ಅಲಿ, ನೂರುಲ್ ಹಸನ್ (ವಿಕೆಟ್ ಕೀಪರ್), ತಸ್ಕಿನ್ ಅಹ್ಮದ್, ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ
ಬೆಂಚ್: ಸಬ್ಬೀರ್ ರೆಹಮಾನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್, ಎಬಾಡೋತ್ ಹೊಸೈನ್

Story first published: Sunday, October 9, 2022, 12:12 [IST]
Other articles published on Oct 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+