Eng vs NZ 1st Test: ಟಾಮ್ ಬ್ಲಂಡೆಲ್ ಭರ್ಜರಿ ಶತಕ: ಮೊದಲ ಇನ್ನಿಂಗ್ಸ್‌ನಲ್ಲಿ ಕಿವೀಸ್‌ಗೆ ಅಲ್ಪ ಹಿನ್ನೆಡೆ

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಮುನ್ನಡೆ ಸಾಧಿಸಿದೆ. ಮೊದಲ ದಿನದಾಟದಲ್ಲಿ ಇಂಗ್ಲೆಂಡ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ 325 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು.
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿರುವ ನ್ಯೂಜಿಲೆಂಡ್ ತಂಡಕ್ಕೆ ಡೆವೋನ್ ಕಾನ್ವೆ ಅಗ್ರ ಕ್ರಮಾಂಕದಲ್ಲಿ ಆಸರೆಯಾದರೆ ಟಾಮ್ ಬ್ಲಂಡಲ್ ಕೆಳ ಕ್ರಮಾಂಕದಲ್ಲಿ ಭರ್ಜರಿಯಾಗಿ ಶತಕ ಸಿಡಿಸಿ ಮಿಂಚಿದ್ದಾರೆ. ಇದರ ಪರಿಣಾಮವಾಗಿ ನ್ಯೂಜಿಲೆಂಡ್ ತಂಡ 306 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಮೊದಲ ಇನ್ನಿಂಗ್ಸ್‌ನ ಆಟವನ್ನು ಮುಗಿಸಿತು. ಹೀಗಾಗಿ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 19 ರನ್‌ಗಳ ಮುನ್ನಡೆಯನ್ನು ಮಾತ್ರವೇ ಪಡೆದುಕೊಳ್ಳಲು ಸಾಧ್ಯವಾಯಿತು.
ನ್ಯೂಜಿಲೆಂಡ್ ತಂಡದ ಪರವಾಗಿ ಬ್ಲಂಡೆಲ್ 181 ಎಸೆತಗಳಲ್ಲಿ 138 ರನ್‌ಗಳನ್ನು ಗಳಿಸಿದರು. ಈ ಭರ್ಜರಿ ಬ್ಯಾಟಿಂಗ್‌ನ ಕಾರಣದಿಂದಾಗಿ ನ್ಯೂಜಿಲೆಂಡ್ ತಂಡ ತವರಿನಲ್ಲೇ ದೊಡ್ಡ ಅಂತರದ ಹಿನ್ನಡೆಗೆ ಒಳಗಾಗುವುದನ್ನು ತಪ್ಪಿಸಿಕೊಂಡಿದೆ. ನ್ಯೂಜಿಲೆಂಡ್‌ನ ಇತರ ಆಟಗಾರರಿಂದ ದೊಡ್ಡ ಮೊತ್ತದ ಬೆಂಬಲ ದೊರೆಯಲಿಲ್ಲ. ಇನ್ನು ಇಂಗ್ಲೆಂಡ್ ತಂಡದ ಪರವಾಗಿ ರಾಬಿನ್ಸನ್ ನಾಲ್ಕು ವಿಕೆಟ್ ಕಿತ್ತು ಮಿಂಚಿದ್ದರೆ ಜೇಮ್ಸ್ ಆಂಡರ್ಸನ್ 3 ವಿಕೆಟ್ ಕಬಳಿಸಿದ್ದಾರೆ. ಇನ್ನು ಸ್ಟುವರ್ಟ್ ಬ್ರಾಡ್, ಜಾಕ್ ಲೀಚ್ ಹಾಗೂ ಬೆನ್ ಸ್ಟೋಕ್ಸ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.
ಇನ್ನು ಬಳಿಕ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ತನ್ನ ಬ್ಯಾಟಿಂಗ್ ಆರಂಭಿಸಿದೆ. ಮೊದಲ ವಿಕೆಟ್‌ಗೆ 52 ರನ್‌ಗಳ ಉತ್ತಮ ಜೊತೆಯಾಟ ಬಂತಾದರೂ ಬಳಿಕ ತನ್ನ ಎರಡು ಆರಂಭಿಕ ಆಟಗಾರರ ವಿಕೆಟ್‌ಗಳನ್ನು ಇಂಗ್ಲೆಂಡ್ ಕಳೆದುಕೊಂಡಿದೆ. ಜಾಕ್ ಕ್ರಾವ್ಲೆ 28 ರನ್‌ಗಳಿಸಿ ಔಟಾಗಿದ್ದು ಬೆನ್ ಡಕ್ಕೆಟ್ 25 ರನ್‌ಗಳಿಗೆ ಔಟಾಗಿದ್ದಾರೆ. ಒಲ್ಲೀ ಪೋಪ್ ಹಾಗೂ ನೈಟ್‌ವಾಚ್‌ಮನ್ ಸ್ಟುವರ್ಟ್ ಬ್ರಾಡ್ ಮೂರನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದಾರೆ.
ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡ್ಯಾರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್ವೆಲ್, ಸ್ಕಾಟ್ ಕುಗ್ಗೆಲೀಜ್ನ್, ಟಿಮ್ ಸೌಥಿ (ನಾಯಕ), ನೀಲ್ ವ್ಯಾಗ್ನರ್, ಬ್ಲೇರ್ ಟಿಕ್ನರ್
ಬೆಂಚ್: ಜಾಕೋಬ್ ಡಫಿ, ಇಶ್ ಸೋಧಿ, ವಿಲ್ ಯಂಗ್
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಆಲಿ ರಾಬಿನ್ಸನ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್ ಬೆಂಚೋಲಿ ಸ್ಟೋನ್, ಡೇನಿಯಲ್ ಲಾರೆನ್ಸ್, ವಿಲ್ ಜ್ಯಾಕ್ಸ್, ಮ್ಯಾಥ್ಯೂ ಪಾಟ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications