Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ನ್ಯೂಜಿಲೆಂಡ್‌ಗೆ ಸುಲಭ ಮುನ್ನಡೆ

New Zealand vs India, 1st Test, day 2 - Live report

ವೆಲ್ಲಿಂಗ್ಟನ್, ಫೆಬ್ರವರಿ 22: ವೆಲ್ಲಿಂಗ್ಟನ್‌ನ ಬೇಸಿನ್ ರಿವರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ನಡುವಿನ ಮೊದಲನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಸುಲಭ ಮುನ್ನಡೆ ಸಾಧಿಸಿದೆ. ಆರಂಭಿಕ ಇನ್ನಿಂಗ್ಸ್‌ನಲ್ಲಿ ಭಾರತ ನೀರಸ ಬ್ಯಾಟಿಂಗ್‌ನೊಂದಿಗೆ 68.1ನೇ ಓವರ್‌ಗೆ 165 ರನ್ ಬಾರಿಸಿ ಆಟ ಮುಗಿಸಿತ್ತು.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ಮಯಾಂಕ್ ಅಗರ್ವಾಲ್ 34, ರಿಷಭ್ ಪಂತ್ 19, ಮೊಹಮ್ಮದ್ ಶಮಿ 21 ರನ್ ಸೇರಿಸಿದರು. ಇನ್ನು ಪೃಥ್ವಿ ಶಾ 16, ಚೇತೇಶ್ವರ ಪೂಜಾರ 11, ವಿರಾಟ್ ಕೊಹ್ಲಿ 2, ಹನುಮ ವಿಹಾರಿ 7, ಆರ್ ಅಶ್ವಿನ್ 0, ಜಸ್‌ಪ್ರೀತ್ ಬೂಮ್ರಾ 0 ರನ್‌ಗೆ ಔಟಾಗಿದ್ದು ತಂಡದ ಬ್ಯಾಟಿಂಗ್ ವೈಫಲ್ಯವನ್ನು ಸಾರಿ ಹೇಳಿತ್ತು.

ಪಂದ್ಯದ Live ಸ್ಕೋರ್‌ಕಾರ್ಡ್ ಕೆಳಗಿದೆ

1
46211

ಶನಿವಾರ (ಫೆಬ್ರವರಿ 22) ಎರಡನೇ ದಿನದಾಟ ಅಂತ್ಯದ ವೇಳೆ ನ್ಯೂಜಿಲೆಂಡ್ ತಂಡ 71.1 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 216 ರನ್‌ ಬಾರಿಸಿ 51 ರನ್ ಮುನ್ನಡೆಯಲ್ಲಿತ್ತು. ಕೇನ್ ವಿಲಿಯಮ್ಸನ್ 89, ರಾಸ್ ಟೇಲರ್ 44, ಟಾಮ್ ಬ್ಲಂಡಲ್ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಬಿಜೆ ವಾಟ್ಲಿಂಗ್ ಮತ್ತು ಕಾಲಿನ್ ಡಿ ಗ್ರ್ಯಾಂಡ್‌ ಹೋಮ್ ಕ್ರೀಸ್‌ನಲ್ಲಿದ್ದರು.

ಭಾರತ ತಂಡ: ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆ), ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.

ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್, ಟಾಮ್ ಬ್ಲುಂಡೆಲ್, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿ.ಜೆ. ವಾಟ್ಲಿಂಗ್ (ವಿಕೆ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜಾಮಿಸನ್, ಟಿಮ್ ಸೌಥಿ, ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್.

Story first published: Saturday, February 22, 2020, 12:09 [IST]
Other articles published on Feb 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+