ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೇಯಸ್, ಸೈನಿ, ಹೋರಾಟ ವ್ಯರ್ಥ: ಏಕದಿನ ಸರಣಿ ಕೈ ಚೆಲ್ಲಿದ ಭಾರತ

Ind vs Nz 2nd ODI : Ravindra Jadeja and Navdeep Saini heroics go in vain | Ravindra Jadeja | Saini
New Zealand vs India, 2nd ODI - Live match report

ಆಕ್ಲೆಂಡ್, ಫೆಬ್ರವರಿ 8: ಆಕ್ಲೆಂಡ್‌ನ ಈಡೆನ್ ಪಾರ್ಕ್‌ನಲ್ಲಿ ಶನಿವಾರ (ಫೆಬ್ರವರಿ 8) ನಡೆದ ಭಾರತ-ನ್ಯೂಜಿಲೆಂಡ್ ದ್ವಿತೀಯ ಏಕದಿನ ಪಂದ್ಯದಲ್ಲಿ ಆತಿಥೇಯ ಕಿವೀಸ್ 22 ರನ್ ಜಯ ಗಳಿಸಿದೆ. ಮಾರ್ಟಿನ್ ಗಪ್ಟಿಲ್, ರಾಸ್ ಟೇಲರ್ ಅರ್ಧ ಶತಕ ಮತ್ತು ಬೌಲರ್‌ಗಳ ಚತುರ ಆಟ ನ್ಯೂಜಿಲೆಂಡ್‌ಗೆ ಸರಣಿ ಗೆಲುವಿನ ಉಡುಗೊರೆ ನೀಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯೀಗ 2-0ಯಿಂದ ಕಿವೀಸ್ ಪಾಲಾಗಿದೆ.

ಇಂಗ್ಲೆಂಡ್‌ ವಿರುದ್ಧ ದಾಳಿಗಿಳಿಯಲಿದ್ದಾರೆ ಮಾರಕ ವೇಗಿ ಡೇಲ್ ಸ್ಟೇನ್!ಇಂಗ್ಲೆಂಡ್‌ ವಿರುದ್ಧ ದಾಳಿಗಿಳಿಯಲಿದ್ದಾರೆ ಮಾರಕ ವೇಗಿ ಡೇಲ್ ಸ್ಟೇನ್!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್‌ನಿಂದ ಮಾರ್ಟಿನ್ ಗಪ್ಟಿಲ್ 79, ಹೆನ್ರಿ ನಿಕೋಲ್ಸ್ 41, ರಾಸ್ ಟೇಲರ್ ಅಜೇಯ 73 ರನ್ ಸೇರಿಸಿ ಭಾರತಕ್ಕೆ ಸವಾಲಿನ ಮೊತ್ತ ನೀಡಲು ನೆರವಾದರು. ಕಿವೀಸ್ 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 273 ರನ್ ಪೇರಿಸಿತ್ತು.

ಟೀಮ್ ಇಂಡಿಯಾದ ಮೊದಲ ಸೋಲಿಗೆ ಹೇಳಿಕೆ ನೀಡಿದ ಮಾರ್ಟಿನ್ ಗಪ್ಟಿಲ್ಟೀಮ್ ಇಂಡಿಯಾದ ಮೊದಲ ಸೋಲಿಗೆ ಹೇಳಿಕೆ ನೀಡಿದ ಮಾರ್ಟಿನ್ ಗಪ್ಟಿಲ್

ಪಂದ್ಯದ ಸ್ಕೋರ್‌ಕಾರ್ಡ್ ಇಲ್ಲಿದೆ

1
46209

ಗುರಿ ಬೆಂಬತ್ತಿದ ಭಾರತ ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿತು. ಬ್ಯಾಟ್ಸ್‌ಮನ್‌ಗಳು ವಿಕೆಟ್ ಕಾವಲು ಕಾಯುವಲ್ಲಿ ಎಡವಿದರು. ಪೃಥ್ವಿ ಶಾ 24, ನಾಯಕ ವಿರಾಟ್ ಕೊಹ್ಲಿ 15, ಶ್ರೇಯಸ್ ಐಯ್ಯರ್ 52, ರವೀಂದ್ರ ಜಡೇಜಾ 55, ಶಾರ್ದೂಲ್ ಠಾಕೂರ್ 18, ನವದೀಪ್ ಸೈನಿ 45 (49 ಎಸೆತ) ರನ್ ಕೊಡುಗೆಯಿಟ್ಟರು. ಕೊಹ್ಲಿ ಪಡೆ 48.3 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 251 ರನ್ ಪೇರಿಸಿ ತಲೆ ಬಾಗಿತು.

ಅಂಪೈರ್ ಎಡವಟ್ಟಿಗೆ ವಿರಾಟ್ ಕೊಹ್ಲಿ ಗರಂ, 16.5ನೇ ಓವರ್‌ನಲ್ಲಿ ನಡೆದಿದ್ದೇನು?!ಅಂಪೈರ್ ಎಡವಟ್ಟಿಗೆ ವಿರಾಟ್ ಕೊಹ್ಲಿ ಗರಂ, 16.5ನೇ ಓವರ್‌ನಲ್ಲಿ ನಡೆದಿದ್ದೇನು?!

ಪಂದ್ಯವನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದು ವೇಗಿ ನವದೀಪ್ ಸೈನಿ. ಭಾರತದ ಇನ್ನಿಂಗ್ಸ್‌ನ ಕೊನೇ ಕ್ಷಣದಲ್ಲಿ ರವೀಂದ್ರ ಜಡೇಜಾಗೆ ಸಾಥ್ ನೀಡಿದ ಸೈನಿ, 5 ಬೌಂಡರಿ, 2 ಸಿಕ್ಸರ್‌ಗಳನ್ನು ಚಚ್ಚಿ ತಂಡವನ್ನು ಗೆಲುವಿನ ಸಮೀಪಕ್ಕೆ ಎಳೆದಿದ್ದರು. ಆದರೆ ಆ ಬಳಿಕ ಸೈನಿ ವಿಕೆಟ್‌ ಒಪ್ಪಿಸಿದ ಬಳಿ ತಂಡ ಎಲ್ಲಾ ವಿಕೆಟ್ ಕಳೆದು ಸೋಲೊಪ್ಪಿಕೊಳ್ಳಬೇಕಾಯಿತು.

ದಾಖಲೆ ರನ್‌ ಚೇಸ್‌ನೊಂದಿಗೆ ಆಸ್ಟ್ರೇಲಿಯಾ ಸದೆಬಡಿದ ಭಾರತದ ವನಿತೆಯರುದಾಖಲೆ ರನ್‌ ಚೇಸ್‌ನೊಂದಿಗೆ ಆಸ್ಟ್ರೇಲಿಯಾ ಸದೆಬಡಿದ ಭಾರತದ ವನಿತೆಯರು

ನ್ಯೂಜಿಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ಶಾರ್ದೂಲ್ ಠಾಕೂರ್‌ 2, ಯುಜುವೇಂದ್ರ ಚಾಹಲ್ 3, ರವಿಂದ್ರ ಜಡೇಜಾ 1 ವಿಕೆಟ್ ಪಡೆದರೆ, ಭಾರತದ ಇನ್ನಿಂಗ್ಸ್‌ನಲ್ಲಿ ಕಿವೀಸ್‌ನ ಹಮೀಶ್ ಬೆನೆಟ್, ಟಿಮ್ ಸೌಥೀ, ಕೈಲ್ ಜಾಮಿಸನ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ತಲಾ 2, ಜೇಮ್ಸ್ ನೀಶಮ್ 1 ವಿಕೆಟ್ ಪಡೆದರು. ಕೈಲ್ ಜಾಮಿಸನ್ ಪಂದ್ಯಶ್ರೇಷ್ಠರೆನಿಸಿದರು.

ಪಾಕಿಸ್ತಾನ ಬ್ಯಾಟ್ಸ್‌ಮನ್ ನಾಸಿರ್ ಜಮ್ಶೆದ್‌ಗೆ 17 ತಿಂಗಳ ಜೈಲು ಶಿಕ್ಷೆಪಾಕಿಸ್ತಾನ ಬ್ಯಾಟ್ಸ್‌ಮನ್ ನಾಸಿರ್ ಜಮ್ಶೆದ್‌ಗೆ 17 ತಿಂಗಳ ಜೈಲು ಶಿಕ್ಷೆ

ಭಾರತ ತಂಡ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ಲೋಕೇಶ್ ರಾಹುಲ್ (ವಿಕೆ), ಕೇದಾರ್ ಜಾಧವ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್‌ ಬೂಮ್ರಾ.

ಕುತೂಹಲಕಾರಿ ಬುಷ್‌ಫೈರ್ ಬ್ಯಾಷ್‌ ಪಂದ್ಯಕ್ಕೆ ದಿಗ್ಗಜರ ತಂಡಗಳು ಪ್ರಕಟಕುತೂಹಲಕಾರಿ ಬುಷ್‌ಫೈರ್ ಬ್ಯಾಷ್‌ ಪಂದ್ಯಕ್ಕೆ ದಿಗ್ಗಜರ ತಂಡಗಳು ಪ್ರಕಟ

ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗಪ್ಟಿಲ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲುಂಡೆಲ್, ರಾಸ್ ಟೇಲರ್, ಟಾಮ್ ಲ್ಯಾಥಮ್ (ಸಿ ಆ್ಯಂಡ್ ವಿಕೆ), ಮಾರ್ಕ್ ಚಾಪ್ಮನ್, ಜೇಮ್ಸ್ ನೀಶಮ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜಾಮಿಸನ್, ಟಿಮ್ ಸೌಥಿ, ಹಮೀಶ್ ಬೆನೆಟ್.

Story first published: Saturday, February 8, 2020, 17:00 [IST]
Other articles published on Feb 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X