ಆಕ್ಲೆಂಡ್, 2ನೇ ಟಿ20: 7 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್ ಸದೆಬಡಿದ ಭಾರತ


ಆಕ್ಲೆಂಡ್, ಫೆಬ್ರವರಿ 8: ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಆರಂಭಿಕ ಪಂದ್ಯವನ್ನು ಸೋತಿದ್ದ ಭಾರತ ಮುಯ್ಯಿ ತೀರಿಸಿಕೊಂಡಿದೆ. ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ಶುಕ್ರವಾರ (ಫೆಬ್ರವರಿ 8) ನಡೆದ ಭಾರತ-ನ್ಯೂಜಿಲ್ಯಾಂಡ್ ದ್ವಿತೀಯ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಬಳಗ 7 ವಿಕೆಟ್ ಭರ್ಜರಿ ಜಯ ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.
ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಕೇನ್ ವಿಲಿಯಮ್ಸ್ ಬಳಗ ಕಾಲಿನ್ ಡೆ ಗ್ರ್ಯಾಂಡ್‌ಹೋಮ್ ಅಬ್ಬರದ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು 158 ರನ್ ಗಳಿಸಿತ್ತು. 159 ರನ್ ಗುರಿ ಬೆನ್ನಟ್ಟಿದ ಭಾರತ, ನಾಯಕ ರೋಹಿತ್ ಶರ್ಮಾ ಅವರ ಅರ್ಧಶತಕದ ಬೆಂಬಲದೊಂದಿಗೆ 18.5 ಓವರ್‌ನಲ್ಲಿ 3 ವಿಕೆಟ್ ಕಳೆದು 162 ಪೇರಿಸುವುದರೊಂದಿಗೆ ಗೆಲುವನ್ನಾಚರಿಸಿತು.
ಇನ್ನಿಂಗ್ಸ್ ಆರಂಭಿಸಿದ್ದ ಕಿವೀಸ್, ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿತು. ಟಿಮ್ ಸೈಫರ್ಟ್ (12), ಕಾಲಿನ್ ಮುನ್ರೋ (12), ಡ್ಯಾರಿಲ್ ಮಿಚೆಲ್ (1), ಕೇನ್ ವಿಲಿಯಮ್ಸನ್ (20), ಡ್ಯಾರಿ ಮಿಚೆಲ್ (1) ರನ್‌ಗೆ ನಿರ್ಗಮಿಸಿದರು. ಆದರೆ ರಾಸ್ ಟೇಲರ್ 42, ಕಾಲಿನ್ ಡೆ ಗ್ರ್ಯಾಂಡ್ ಹೋಮ್ 50 ರನ್ ಸೇರಿಸಿ ತಂಡವನ್ನು ಮೇಲೆತ್ತಿದರು.
ಚೇಸಿಂಗ್‌ಗೆ ಇಳಿದ ಭಾರತಕ್ಕೆ ಶರ್ಮಾ 50, ಶಿಖರ್ ಧವನ್ 30, ರಿಷಬ್ ಪಂತ್ 40, ವಿಜಯ್ ಶಂಕರ್ 14, ಎಂಎಸ್ ಧೋನಿ 20 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಲು ನೆರವಾದರು. ನ್ಯೂಜಿಲ್ಯಾಂಡ್ ಇನ್ನಿಂಗ್ಸ್ ವೇಳೆ ಕೃನಾಲ್ ಪಾಂಡ್ಯ 3, ಖಲೀಲ್ ಅಹ್ಮದ್ 2 ವಿಕೆಟ್ ಕೆಡವಿ ಗಮನ ಸೆಳೆದರು.
ಉತ್ತಮ ಬೌಲಿಂಗ್ ಪ್ರದರ್ಶಿಸಿದ ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠರೆನಿಸಿದರು. ಇದರೊಂದಿಗೆ ಮೂರು ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದ್ದು, ನಿರ್ಣಾಯಕ ಪಂದ್ಯ ಫೆಬ್ರವರಿ 10ರಂದು ಹ್ಯಾಮಿಲ್ಟನ್ ನಲ್ಲಿ ನಡೆಯಲಿದೆ. ಸರಣಿ ಭಾರತದ ವಶವಾಗುವ ನಿರೀಕ್ಷೆಯಿದೆ.
ನ್ಯೂಜಿಲ್ಯಾಂಡ್ ತಂಡ: ಟಿಮ್ ಸೈಫರ್ಟ್ (ವಿಕ್), ಕೋಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ಸಿ), ಡಾರ್ಲ್ ಮಿಚೆಲ್, ರಾಸ್ ಟೇಲರ್, ಕಾಲಿನ್ ಡಿ ಗ್ರಾಂಡ್ಹೋಮ್ಮೆ, ಮಿಚೆಲ್ ಸಾಂಟ್ನರ್, ಸ್ಕಾಟ್ ಕುಗ್ಲೆಲೀಜನ್, ಟಿಮ್ ಸೌಥಿ, ಇಶ್ ಸೊಧಿ, ಲಾಕೀ ಫರ್ಗುಸನ್.
ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಎಂಎಸ್ ಧೋನಿ (ವಿ.ಕೆ), ವಿಜಯ್ ಶಂಕರ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಭುವನೇಶ್ವರ ಕುಮಾರ್, ಯುಜುವೇಂದ್ರ ಚಾಹಲ್, ಕೆ ಖಲೀಲ್ ಅಹ್ಮದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications