ಕ್ರೈಸ್ಟ್ಚರ್ಚ್, ಫೆಬ್ರವರಿ 29: ಕ್ರೈಸ್ಟ್ಚರ್ಚ್ನ ಹ್ಯಾಗ್ಲಿ ಓವಲ್ ಸ್ಟೇಡಿಯಂನಲ್ಲಿ ಶನಿವಾರ (ಫೆಬ್ರವರಿ 29) ಆತಿಥೇಯ ನ್ಯೂಜಿಲೆಂಡ್ ಮತ್ತು ಭಾರತ ತಂಡಗಳು ದ್ವಿತೀಯ ಟೆಸ್ಟ್ ಪಂದ್ಯವನ್ನಾಡುತ್ತಿವೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯ ಸೋತಿರುವ ಭಾರತಕ್ಕೆ ಇಂದಿನ ಪಂದ್ಯದ ಗೆಲುವು ಪ್ರಮುಖವಾಗಿದೆ. ಟಾಸ್ ಗೆದ್ದಿರುವ ನ್ಯೂಜಿಲೆಂಡ್ ಬೌಲಿಂಗ್ ಆಯ್ದುಕೊಂಡಿದೆ.
ಪೂಜಾರ, ಗವಾಸ್ಕರ್ ದಾಖಲೆ ಸರಿಗಟ್ಟಲಿದ್ದಾರೆ ಮಯಾಂಕ್ ಅಗರ್ವಾಲ್
ಈ ಬಾರಿಯೂ ಆರಂಭಿಕ ಇನ್ನಿಂಗ್ಸ್ನಲ್ಲಿ ವಿರಾಟ್ ಕೊಹ್ಲಿ ಪಡೆ ನೀರಸ ಬ್ಯಾಟಿಂಗ್ ಪ್ರದರ್ಶಿಸಿದೆ. ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ 54, ಚೇತೇಶ್ವರ ಪೂಜಾರ 54, ಹನುಮ ವಿಹಾರಿ 55, ರಿಷಭ್ ಪಂತ್ 12, ಮೊಹಮ್ಮದ್ ಶಮಿ 16 (2 ಸಿಕ್ಸ್, 1 ಫೋರ್ ಸೇರಿ), ಜಸ್ಪ್ರೀತ್ ಬೂಮ್ರಾ 10 ರನ್ ಬಿಟ್ಟರೆ ಇನ್ಯಾರೂ ಗಮನಾರ್ಹ ರನ್ ಗಳಿಸಲಿಲ್ಲ.
ಪಂದ್ಯದ Live ಸ್ಕೋರ್ಕಾರ್ಡ್ ಇಲ್ಲಿದೆ
ಭಾರತ 63 ಓವರ್ಗೆ 242 ರನ್ ಬಾರಿಸಿ ಇನ್ನಿಂಗ್ಸ್ ಮುಗಿಸಿದೆ. ಭಾರತದ ಇನ್ನಿಂಗ್ಸ್ನಲ್ಲಿ ನ್ಯೂಜಿಲೆಂಡ್ನ ಕೈಲ್ ಜಾಮಿಸನ್ 5 (45 ರನ್), ಟಿಮ್ ಸೌಥೀ 2, ಟ್ರೆಂಟ್ ಬೌಲ್ಟ್ 2, ನೇಲ್ ವ್ಯಾಗ್ನರ್ 1 ವಿಕೆಟ್ ಪಡೆದು ಗಮನ ಸೆಳೆದರು. ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್ ಆಡುತ್ತಿದೆ.
ಭಾರತದ ನ್ಯೂಜಿಲೆಂಡ್ ಪ್ರವಾಸ ಸರಣಿಯ ಕಡೇಯ ಪಂದ್ಯವಿದು. ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ಐದಕ್ಕೆ ಐದೂ ಪಂದ್ಯ ಗೆದ್ದಿದ್ದರೆ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ 3-0ಯ ಜಯ ದಾಖಲಿಸಿ ಭಾರತಕ್ಕೆ ಮುಖಭಂಗವನ್ನುಂಟು ಮಾಡಿತ್ತು. ಮೊದಲ ಟೆಸ್ಟ್ನಲ್ಲೂ ಕಿವೀಸ್ ಗೆದ್ದಿರುವುದರಿಂದ ಕಡೇಯ ಈ ಪಂದ್ಯದಲ್ಲಿ ಪ್ರತಿಷ್ಠೆಗಾದರೂ ಭಾರತ ಗೆಲ್ಲಲೇಬೇಕಿದೆ.
ಭಾರತ ತಂಡ: ಪೃಥ್ವಿ ಶಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ಹನುಮಾ ವಿಹಾರಿ, ರಿಷಭ್ ಪಂತ್ (ವಿಕೆ), ರವೀಂದ್ರ ಜಡೇಜಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ.
ಪಿಚ್ ರೋಲರ್ ಚಲಾಯಿಸಿದ ಮಾಜಿ ನಾಯಕ ಧೋನಿ: ವಿಡಿಯೋ
ನ್ಯೂಜಿಲೆಂಡ್ ತಂಡ: ಟಾಮ್ ಲ್ಯಾಥಮ್, ಟಾಮ್ ಬ್ಲುಂಡೆಲ್, ಕೇನ್ ವಿಲಿಯಮ್ಸನ್ (ಸಿ), ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಬಿ.ಜೆ. ವಾಟ್ಲಿಂಗ್ (ವಿಕೆ), ಕಾಲಿನ್ ಡಿ ಗ್ರ್ಯಾಂಡ್ಹೋಮ್, ಕೈಲ್ ಜಾಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಟ್ರೆಂಟ್ ಬೌಲ್ಟ್.