For Quick Alerts
ALLOW NOTIFICATIONS  
For Daily Alerts
 

ಹ್ಯಾಮಿಲ್ಟನ್, ಟಿ20: ಭಾರತ ವಿರುದ್ಧ ನ್ಯೂಜಿಲ್ಯಾಂಡ್‌ಗೆ 4 ರನ್ ರೋಚಕ ಜಯ

New Zealand vs India, 3rd T20I - Live Cricket Score

ಹ್ಯಾಮಿಲ್ಟನ್, ಫೆಬ್ರವರಿ 10: ಆತಿಥೇಯ ನ್ಯೂಜಿಲ್ಯಾಂಡ್‌ನ ಭರ್ಜರಿ ಬ್ಯಾಟಿಂಗ್‌ ಮತ್ತು ಭಾರತದ ಆಟಗಾರರ ಮಿಸ್ ಫೀಲ್ಡಿಂಗ್‌ ಫಲಿತಾಂಶವಾಗಿ ಹ್ಯಾಮಿಲ್ಟನ್ ಸೆಡ್ಡನ್ ಪಾರ್ಕ್ ಸ್ಟೇಡಿಯಂನಲ್ಲಿ ಭಾನುವಾರ (ಫೆಬ್ರವರಿ 10) ನಡೆದ ಭಾರತ-ನ್ಯೂಜಿಲ್ಯಾಂಡ್ 3ನೇ ಟಿ20 ಪಂದ್ಯದಲ್ಲಿ ಕಿವೀಸ್ 4 ರನ್ ರೋಚಕ ಗೆಲುವನ್ನಾಚರಿಸಿತು. ಇದರೊಂದಿಗೆ ಟಿ20 ಸರಣಿ 2-1ರಿಂದ ನ್ಯೂಜಿಲ್ಯಾಂಡ್‌ ಪಾಲಾಗಿದೆ.

ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
44087

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್‌ಗೆ ಉತ್ತಮ ಆರಂಭ ದೊರೆಯಿತು. ಗಮನಾರ್ಹ ಜೊತೆಯಾಟ ನೀಡಿದ ಆರಂಭಿಕರಾದ ಟಿಮ್ ಸೈಫರ್ಟ್ 43, ಕಾಲಿನ್ ಮುನ್ರೋ 72, ಕಾಲಿನ್ ಡೇ ಗ್ರ್ಯಾಂಡ್ ಹೋಮ್ 30 ರನ್ ಬೆಂಬಲದೊಂದಿಗೆ ಕಿವೀಸ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದು 212 ರನ್ ಗಳಿಸಿತು.

ನ್ಯೂಜಿಲ್ಯಾಂಡ್ ನೀಡಿದ್ದ 213 ರನ್ ಗುರಿ ಬೆನ್ನತ್ತಿದ ಭಾರತ, ಆರಂಭಿಕ ಆಟಗಾರ ಶಿಖರ್ ಧವನ್ 5 ರನ್ನಿಗೆ ಔಟ್ ಆದಾಗ ಆಘಾತ ಅನುಭವಿಸಿತು. ಅನಂತರ ವಿಜಯ್ ಶಂಕರ್ (43), ರಿಷಬ್ ಪಂತ್ (28), ರೋಹಿತ್ ಶರ್ಮಾ (38), ಹಾರ್ದಿಕ್ ಪಾಂಡ್ಯ (21) ಕೂಡ ನಿರ್ಗಮಿಸಿದರು.

ತಂಡವನ್ನು ಗೆಲ್ಲಿಸುವ ಪಣ ತೊಟ್ಟಂತೆ ನಿಂತಿದ್ದ ದಿನೇಶ್ ಕಾರ್ತಿಕ್ ಕೊಂಚ ಕಾಲ ಭಾರತದ ನಿರೀಕ್ಷೆಯನ್ನು ಉಳಿಸಿದ್ದರು. ಆದರೆ ಪಂದ್ಯ ಅಂತಿಮ ಹಂತ ತಲುಪುತ್ತಲೇ ಭಾರತದ ಕ್ರಿಕೆಟ್ ಅಭಿಮಾನಿಗಳು ಹತಾಶೆ ಅನುಭವಿಸುವಂತಾಯ್ತು. ಕಾರ್ತಿಕ್ ಅಜೇಯ 33, ಕೃನಾಲ್ ಅಜೇಯ 26 ರನ್ ಸೇರಿಸಿದರಾದರೂ ತಂಡಕ್ಕೆ ಗೆಲುವು ತಂದುಕೊಡಲು ಅವರಿಂದಾಗಲಿಲ್ಲ.

20 ಓವರ್‌ಗಳಲ್ಲಿ ಭಾರತ 6 ವಿಕೆಟ್ ಕಳೆದು 208 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಇನ್ನಿಂಗ್ಸ್‌ ವೇಳೆ ಎದುರಾಳಿ ತಂಡದ ಮಿಚೆಲ್ ಸ್ಯಾಂಟ್ನರ್ ಮತ್ತು ಡ್ಯಾರಿ ಮಿಚೆಲ್ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು. ಕಾಲಿನ್ ಮುನ್ರೋ ಸರಣಿ ಶ್ರೇಷ್ಠರೆನಿಸಿದರೆ, ಟಿಮ್ ಸೈಫರ್ಟ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ನ್ಯೂಜಿಲ್ಯಾಂಡ್: ಟಿಮ್ ಸೈಫರ್ಟ್ (W), ಕಾಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ಸಿ), ಡೇರಿಲ್ ಮಿಚೆಲ್, ರಾಸ್ ಟೇಲರ್, ಕಾಲಿನ್ ಡಿ ಗ್ರಾಂಡ್ಹೋಮ್ಮೆ, ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಲೆಲೀಜನ್, ಟಿಮ್ ಸೌಥಿ, ಇಶ್ ಸೋಧಿ, ಬ್ಲೇರ್ ಟಿಕ್ನರ್.

ಭಾರತ ತಂಡ: ರೋಹಿತ್ ಶರ್ಮಾ (ಸಿ), ಶಿಖರ್ ಧವನ್, ರಿಷಬ್ ಪಂತ್, ವಿಜಯ್ ಶಂಕರ್, ಎಂಎಸ್ ಧೋನಿ (ಡಬ್ಲ್ಯೂ), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ಭುವನೇಶ್ವರ ಕುಮಾರ್, ಕೆ ಖಲೀಲ್ ಅಹ್ಮದ್.

Story first published: Sunday, February 10, 2019, 16:19 [IST]
Other articles published on Feb 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+