For Quick Alerts
ALLOW NOTIFICATIONS  
For Daily Alerts
 

ಟಿ20ಐ: ಸೂಪರ್ ಓವರ್‌ನಲ್ಲಿ ರೋ'ಹಿಟ್‌' ತಂದುಕೊಟ್ಟ ಸೂಪರ್ ಗೆಲುವು!

New Zealand vs India, 3rd T20I - Live match report

ಹ್ಯಾಮಿಲ್ಟನ್, ಜನವರಿ 29: ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಬುಧವಾರ (ಜನವರಿ 29) ನಡೆದ ಭಾರತ-ನ್ಯೂಜಿಲೆಂಡ್ 3ನೇ ಟಿ20ಐ ಪಂದ್ಯ ಸಮಬಲಗೊಂಡಿದೆ. ವಿಜೇತರನ್ನು ನಿರ್ಧರಿಸಲು ನಡೆಸಲಾದ ಸೂಪರ್ ಓವರ್‌ನಲ್ಲಿ ಕಡೆಯ ಬಾಲ್‌ಗೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ ಸಿಕ್ಸ್‌ ಬಾರಿಸಿದ್ದರಿಂದ ಟೀಮ್ ಇಂಡಿಯಾ ರೋಚಕ ಗೆಲುವನ್ನಾಚರಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿ 3-0ಯಿಂದ ಭಾರತದ ವಶವಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ರೋಹಿತ್ ಶರ್ಮಾ 65 (40 ಎಸೆತ), ಕೆಎಲ್ ರಾಹುಲ್ 27, ನಾಯಕ ವಿರಾಟ್ ಕೊಹ್ಲಿ 38, ಶ್ರೇಯಸ್ ಅಯ್ಯರ್ 17, ಮನೀಶ್ ಪಾಂಡೆ 14, ರವೀಂದ್ರ ಜಡೇಜಾ 10 ರನ್ ಬಾರಿಸಿದರು. ಭಾರತ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 179 ರನ್ ಕಲೆ ಹಾಕಿತು.

ಪಂದ್ಯದ Live ಸ್ಕೋರ್‌ಕಾರ್ಡ್ ಕೆಳಗಿದೆ.

1
46205

ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌, ಮಾರ್ಟಿನ್ ಗಪ್ಟಿಲ್ 31, ಕಾಲಿನ್ ಮುನ್ರೋ 14, ನಾಯಕ ಕೇನ್ ವಿಲಿಯಮ್ಸನ್ 95 (48 ಎಸತ), ರಾಸ್ ಟೇಲರ್ 17 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 179 ರನ್‌ ಮಾಡಿ ಪಂದ್ಯವನ್ನು ಟೈಗೊಳಿಸಿತು. ಮತ್ತೆ ಸೂಪರ್ ಓವರ್‌ ನಡೆಸಲಾಯ್ತು.

ರೋಚಕ ಸೂಪರ್ ಓವರ್‌ನ ಮೊದಲು ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ಓವರ್‌ಒಂದಕ್ಕೆ 17 ರನ್ ಬಾರಿಸಿ ಭಾರತಕ್ಕೆ 18 ರನ್ ಗುರಿ ನೀಡಿತ್ತು. ಗುರಿ ಬೆಂಬತ್ತಿದ ವಿರಾಟ್ ಕೊಹ್ಲಿ ಪಡೆ, ರೋಹಿತ್ ಶರ್ಮಾ ಸಿಕ್ಸ್‌ನೊಂದಿಗೆ 20 ರನ್ ಪೇರಿಸಿ ಗೆಲುವನ್ನಾಚರಿಸಿತು.

ಭಾರತದ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಹಮೀಶ್ ಬೆನೆಟ್ 54ಕ್ಕೆ 3, ಮಿಚೆಲ್ ಸ್ಯಾಂಟ್ನರ್ 1, ಕಾಲಿನ್‌ ಡೆ ಗ್ರ್ಯಾಂಡ್‌ಹೋಮ್‌ 1 ವಿಕೆಟ್ ಪಡೆದರೆ, ನ್ಯೂಜಿಲೆಂಡ್‌ ಇನ್ನಿಂಗ್ಸ್‌ನಲ್ಲಿ ಭಾರತದ ಶಾರ್ದೂಲ್ ಠಾಕೂರ್ 2, ಮೊಹಮ್ಮದ್ ಶಮಿ 2, ಯುಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠರೆನಿಸಿದರು.

ಭಾರತ ತಂಡ: ರೋಹಿತ್ ಶರ್ಮಾ, ಲೋಕೇಶ್ ರಾಹುಲ್ (ವಿಕೆ), ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಮ್ ದೂಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್‌ ಬೂಮ್ರಾ.

ನ್ಯೂಜಿಲೆಂಡ್‌ ತಂಡ: ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ಸಿ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆ), ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಸ್ಕಾಟ್ ಕುಗ್ಗೆಲೀಜ್ನ್, ಇಶ್ ಸೋಧಿ, ಹಮೀಶ್ ಬೆನೆಟ್.

Story first published: Wednesday, January 29, 2020, 16:52 [IST]
Other articles published on Jan 29, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+