For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್‌ಗೆ ಮತ್ತೆ ಕಾಡಿದ ಸೂಪರ್ ಓವರ್ ಗುಮ್ಮ: ಭಾರತಕ್ಕೆ ಜಯ

New Zealand vs India, 4th T20I - Live match report

ವೆಲ್ಲಿಂಗ್ಟನ್, ಜನವರಿ 31: ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಂನಲ್ಲಿ ಶುಕ್ರವಾರ (ಜನವರಿ 31) ನಡೆದ ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ 4ನೇ ಟಿ20ಐ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಮತ್ತು ಭಾರತ ಸಮಬಲ ಸಾಧಿಸಿದೆ. ವಿಜೇತರ ನಿರ್ಧಾರಕ್ಕಾಗಿ ನಡೆದ ಸೂಪರ್ ಓವರ್‌ನಲ್ಲಿ ಟೀಮ್ ಇಂಡಿಯಾ ಜಯ ಗಳಿಸಿದೆ. ಇದರೊಂದಿಗೆ ಐದು ಪಂದ್ಯಗಳ ಸರಣಿಯಲ್ಲಿ ಭಾರತ 4-0ಯ ಗೆಲುವು ಸಾಧಿಸಿದಂತಾಗಿದೆ.

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ಪ್ರಮುಖ ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಆಘಾತ ಅನುಭವಿಸಿತು. ಕೆಎಲ್ ರಾಹುಲ್ 39, ವಿರಾಟ್ ಕೊಹ್ಲಿ 11, ಶಿವಂ ದೂಬೆ 12, ಮನೀಶ್ ಪಾಂಡೆ 50 (36 ಎಸೆತ), ಶಾರ್ದೂಲ್ ಠಾಕೂರ್ 20, ನವದೀಪ್ ಸೈನಿ 11 ರನ್ ಸೇರ್ಪಡೆಯೊಂದಿಗೆ ತಂಡ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 165 ರನ್ ಕಲೆ ಹಾಕಿತು.

ಪಂದ್ಯದ ಸ್ಕೋರ್‌ಕಾರ್ಡ್ ಕೆಳಗಿದೆ.

1
46206

ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌, ಕಾಲಿನ್ ಮುನ್ರೋ 64, ಟಿಮ್ ಸೀಫರ್ಡ್ 57, ರಾಸ್ ಟೇಲರ್ 24 ರನ್‌ನೊಂದಿಗೆ 20 ಓವರ್‌ಗೆ 7 ವಿಕೆಟ್‌ ನಷ್ಟದಲ್ಲಿ 165 ರನ್ ಬಾರಿಸಿತು. ಹೀಗಾಗಿ ಪಂದ್ಯ ಮತ್ತೆ ಸೂಪರ್‌ ಓವರ್‌ನತ್ತ ತಿರುಗಿತು. ಸೂಪರ್ ಓವರ್‌ನಲ್ಲಿ ಕಿವೀಸ್ 13 ರನ್ ಬಾರಿಸಿತ್ತು. ಭಾರತ 16 ರನ್ ಬಾರಿಸಿ ಗೆಲುವನ್ನಾಚರಿಸಿತು.

ಬೌಲಿಂಗ್‌ ವಿಭಾಗದಲ್ಲಿ ನ್ಯೂಜಿಲೆಂಡ್‌ನ ಇಶ್ ಸೋಧಿ 3, ಹಮೀಶ್ ಬೆನೆಟ್ 2 ವಿಕೆಟ್ ಪಡೆದರೆ, ಭಾರತದ ಶಾರ್ದೂಲ್ ಠಾಕೂರ್ 2 ವಿಕೆಟ್‌ನಿಂದ ಗಮನ ಸೆಳೆದರು. ಅಂದ್ಹಾಗೆ, ಇತ್ತಂಡಗಳ ನಡುವಿನ ಮೂರನೇ ಪಂದ್ಯವೂ ಸಮಬಲಗೊಂಡು ಸೂಪರ್ ಓವರ್‌ನತ್ತ ನಡೆದಿತ್ತು. ಅಲ್ಲೂ ಭಾರತ ಗೆದ್ದಿತ್ತು.

ವೆಲ್ಲಿಂಗ್ಟನ್ ಪಂದ್ಯದಲ್ಲೂ ಟೀಮ್ ಇಂಡಿಯಾ ವಿಜಯ ಪತಾಕೆ ಹಾರಿಸಿರುವುದರಿಂದ ನ್ಯೂಜಿಲೆಂಡ್‌ಗೆ ಐದು ಪಂದ್ಯಗಳ ಸರಣಿಯಲ್ಲಿ ವೈಟ್‌ವಾಷ್‌ ಮುಖಭಂಗದ ಭೀತಿ ಎದುರಾಗಿದೆ. ಶಾರ್ದೂಲ್ ಠಾಕೂರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಭಾರತ ತಂಡ: ಸಂಜು ಸ್ಯಾಮ್ಸನ್, ಲೋಕೇಶ್ ರಾಹುಲ್ (ವಿಕೆ), ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಮ್ ದೂಬೆ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಾಹಲ್, ಜಸ್ಪ್ರೀತ್ ಬೂಮ್ರಾ, ನವದೀಪ್ ಸೈನಿ.

ನ್ಯೂಜಿಲೆಂಡ್ ತಂಡ: ಮಾರ್ಟಿನ್ ಗುಪ್ಟಿಲ್, ಕಾಲಿನ್ ಮುನ್ರೊ, ಟಾಮ್ ಬ್ರೂಸ್, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆ), ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಗೆಲೀಜ್ನ್, ಟಿಮ್ ಸೌಥಿ (ಸಿ), ಇಶ್ ಸೋಧಿ, ಹಮೀಶ್ ಬೆನೆಟ್.

Story first published: Friday, January 31, 2020, 17:12 [IST]
Other articles published on Jan 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+