ಭಾರತ vs ನ್ಯೂಜಿಲೆಂಡ್: ಟೀಮ್ ಇಂಡಿಯಾಕ್ಕೆ ಮತ್ತೆ ದಂಡದ ಬರೆ

ನವದೆಹಲಿ, ಫೆಬ್ರವರಿ 3: ಸ್ಲೋ ಓವರ್ ರೇಟ್‌ಗಾಗಿ ಟೀಮ್ ಇಂಡಿಯಾಕ್ಕೆ ಐಸಿಸಿ ಮತ್ತೆ ದಂಡ ವಿಧಿಸಿದೆ. ಮೌಂಟ್ ಮೌಂಗನ್ಯುಯಿಯಲ್ಲಿ ನಡೆದಿದ್ದ ನ್ಯೂಜಿಲೆಂಡ್-ಭಾರತ ನಡುವಿನ ಐದನೇ ಮತ್ತು ಕೊನೆಯ ಟಿ20ಐ ಪಂದ್ಯದಲ್ಲಿ ನಿಧಾನಗತಿಯ ಓವರ್‌ಗಾಗಿ ತಂಡಕ್ಕೆ ದಂಡ ವಿಧಿಸಲಾಗಿದೆ.
ಟೀಮ್ ಇಂಡಿಯಾದ ಎಂದಿನ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿಯಲ್ಲಿದ್ದರಿಂದ ಭಾನುವಾರ (ಫೆಬ್ರವರಿ 2) ಮೌಂಟ್ ಮೌಂಗನ್ಯುಯಿಯ ಬೇ ಓವಲ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಿದ್ದರು. ಭಾರತದ ಇನ್ನಿಂಗ್ಸ್‌ನಲ್ಲಿ ಗಾಯಗೊಂಡು ರೋಹಿತ್ ಮೈದಾನದಿಂದ ಹೊರಗುಳಿದಾಗ ನಾಯಕತ್ವ ಜವಾಬ್ದಾರಿ ಕೆಎಲ್ ರಾಹುಲ್ ವಹಿಸಿಕೊಂಡಿದ್ದರು.
ಇನ್ನಿಂಗ್ಸ್ ಮುಗಿಸಲು ನಿಗದಿ ಪಡಿಸಿದ್ದ ಕಾಲಾವಧಿ ಮೀರಿ ಒಂದು ಓವರ್ ಎಸದಿದ್ದಕ್ಕೆ ಭಾರತದ ಆಟಗಾರರಿಗೆ ಪಂದ್ಯ ಸಂಭಾವನೆಯ ಶೇ.20ರಷ್ಟು ದಂಡ ವಿಧಿಸಲಾಗಿದೆ. ಇದೇ ಸರಣಿಯಲ್ಲಿ ಇದಕ್ಕೂ ಹಿಂದಿನ ವೆಲ್ಲಿಂಗ್ಟನ್‌ನ ಪಂದ್ಯದಲ್ಲೂ ಭಾರತಕ್ಕೆ ಶೇ. 40ರಷ್ಟು ದಂಡ ವಿಧಿಸಲಾಗಿತ್ತು. ಅಲ್ಲಿ ಕಾಲಾವಧಿ ಮೀರಿ 2 ಓವರ್‌ಗಳನ್ನು ಎಸೆಯಲಾಗಿತ್ತು.
ಟಿ20ಐ ಪಂದ್ಯಗಳಲ್ಲಿ, ಎದುರಾಳಿ ಬ್ಯಾಟಿಂಗ್ ಮಾಡುತ್ತಿದ್ದರೆ ಆ ಇನ್ನಿಂಗ್ಸನ್ನು 1ರಿಂದ 1.30 ಗಂಟೆಯೊಳಗಾಗಿ ಮುಗಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಫೀಲ್ಡರ್ ತಂಡದ ಮೇಲೆ ಮೇಲಿರುತ್ತದೆ. ಆ ಕಾಲಾವಧಿ ಮೀರಿ ಎಸೆದ ಓವರ್ ಒಂದಕ್ಕೆ ಶೆ.20ರಂತೆ ದಂಡ ತೆರಬೇಕಾಗುತ್ತದೆ. ಅಂದ್ಹಾಗೆ ಭಾನುವಾರದ ಪಂದ್ಯದಲ್ಲಿ ಭಾರತ 7 ರನ್ ಗೆಲುವನ್ನಾಚರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications